ಸಿಗಂದೂರು ದೇವಾಲಯ ವಿವಾದ-ಮೌನ ಮುರಿದ ಗ್ರಾಮಸ್ತರಿಂದ ಉಪವಿಭಾಗಾಧಿಕಾರಿಗೆ ಮನವಿ

1347

ಸಾಗರ: ಶ್ರೀಕ್ಷೇತ್ರ ಸಿಗಂದೂರಿನಲ್ಲಿ ಉದ್ಭವಿಸಿರುವ ಆಂತರಿಕ ಸಂಘರ್ಷವನ್ನು ಸರ್ಕಾರ ಮಧ್ಯಪ್ರವೇಶಿಸಿ ತಿಳಿಗೊಳಿಸಬೇಕು. ಗ್ರಾಮದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಂತೆ ಒತ್ತಾಯಿಸಿ ಇಂದು ಕರೂರು ಹೋಬಳಿಯ ಕಳಸವಳ್ಳಿ, ಹೊಸಳ್ಳಿಯ ಗ್ರಾಮಸ್ತರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಕರೂರು ಹೋಬಳಿಯ ಕಳಸವಳ್ಳಿ ಗ್ರಾಮದ ಸಿಗಂದೂರು ಚೌಡೇಶ್ವರಿ ದೇವಾಲಯ ಪ್ರಸಿದ್ಧವಾಗಿದ್ದು, ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ದೇವಿ ದರ್ಶನಕ್ಕೆ ಬರುತ್ತಿದ್ದಾರೆ. ದೇವಸ್ಥಾನಕ್ಕೆ ವಾರ್ಷಿಕವಾಗಿ ನೂರಾರು ಕೋಟಿ ರೂ. ಹಣ ಸಂಗ್ರಹವಾಗುತ್ತಿದೆ. ಈಗ ಹಾಲಿ ಆದಾಯ ಹಂಚಿಕೆ ವಿಚಾರವಾಗಿ ದೇವಸ್ಥಾನದ ಅರ್ಚಕರು ಮತ್ತು ನಿರ್ವಹಣಾ ಸಮಿತಿ ಮಧ್ಯೆ ಉಂಟಾಗಿರುವ ಸಂಘರ್ಷ ತಾರಕಕ್ಕೇರಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮುಂದಿನ ದಿನಗಳಲ್ಲಿ ದೇವಸ್ಥಾನದ ಆವರಣದಲ್ಲಿ ವರ್ಗ ಸಂಘರ್ಷ ಉಂಟಾಗುವ ಸಾಧ್ಯತೆ ಇದೆ ಈ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಿ ದೇವಸ್ಥಾನ ಆವರಣದ ಪಾವಿತ್ರ್ಯ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕಳೆದ ಮೂರು ತಿಂಗಳಿಂದ ಸಿಗಂದೂರಿನ ಧರ್ಮದರ್ಶಿ ಹಾಗೂ ಮುಖ್ಯ ಅರ್ಚಕರ ನಡುವೆ ಸಂಘರ್ಷ ಏರ್ಪಟ್ಟು ಹಾಲಿ ಮಾಜಿ ಸಚಿವರು ಮಧ್ಯಪ್ರವೇಶಿಸಿ ಪರಿಹಾರಕ್ಕೆ ಪ್ರಯತ್ನಿಸಿದ್ದರು.
ಇದಲ್ಲದೇ ದೇವಸ್ಥಾನವನ್ನು ಮುಜುರಾಯಿಗೆ ಸೇರಬೇಕು ಎಂದು ಒಂದು ಗುಂಪು ವಾದಿಸಿದರೆ ,ಇನ್ನೊಂದು ಗುಂಪು ವಿರೋಧಿಸಿತ್ತು.

ಇದನ್ನೂ ಓದಿ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ