BREAKING NEWS
Search

ಸಿಗಂದೂರು ಲಾಂಚ್ ಅಪಘಾತ: ತಪ್ಪಿದ ಬಾರಿ ದುರಂತ.

1772

ಶಿವಮೊಗ್ಗ/ಸಾಗರ:- ಸಾಗರದ ಪ್ರಸಿದ್ಧ ಸಿಗಂದೂರು ದೇವಸ್ಥಾನ ಭಾಗಕ್ಕೆ ಹೊಗುವ ಲಾಂಚ್ ಗಳ ನಡುವೆ ಡಿಕ್ಕಿಯಾಗಿ ಲಾಂಚ್ ಗಳಿಗೆ ಘಾಸಿಯಾದ ಘಟನೆ ನಡೆದಿದಿದೆ.

ಹೊಳೆಬಾಗಿಲಿನಿಂದ ಕಳಸವಳ್ಳಿ ಗೆ ಹಾಗೂ ಕಳಸವಳ್ಳಿ ಯಿಂದ ಹೊಳೆಬಾಗಿಲ ಕಡೆ ಹೋಗುತಿದ್ದ ಶಾರವತಿ-1 ಹಾಗೂ ಶರಾವತಿ -2 ಮುಖಾಮುಖಿ ಡಿಕ್ಕಿಯಾಗಿದೆ.

ಡಿಕ್ಕಿಯಾಗಿದ್ದರಿಂದ ಲಾಂಚ್ ನ ಒಂದು ಭಾಗ ಜಕಂ ಆಗಿದ್ದು ಲಾಂಚ್ ನಲ್ಲಿ 150 ರಿಂದ 200 ಜನ ಪ್ರಯಾಣಿಸುತಿದ್ದರು.

ಇದಲ್ಲದೇ ವಾಹನಗಳು ಕೂಡ ಲಾಂಚ್ ನಲ್ಲಿ ಇದ್ದು ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ.

ಲಾಂಚ್ ನೆಡಸಲು ಚಾಲಕನಿಲ್ಲ!


ಮೀನುಗಾರಿಕಾ ಬಂದರು ಇಲಾಖೆಯಿಂದ ಲಾಂಚ್ ನಡೆಸಲು ಚಾಲಕರನ್ನು ನೀಡುತ್ತಾರೆ. ಆದರೇ ಈ ಲಾಂಚ್ ನಡೆಸಲು ಚಾಲಕ ಇರಲಿಲ್ಲ ,ಬದಲಿಗೆ ಸಹಾಯಕರಾಗಿದ್ದ ಮಂಜುನಾಥ್ ಹಾಗೂ ಸುನಿಲ್ ಎಂಬುವವರು ನಡೆಸಿದ್ದು ಇದರಿಂದಾಗಿ ದುರಂತ ಸಂಭವಿಸಿದೆ ಎನ್ನಲಾಗಿದೆ.

ಒಂದು ವರ್ಷದ ಹಿಂದೆ ಯಷ್ಟೇ ಹೊಸ ಎರಡು ಲಾಂಚ್ ಈ ಭಾಗಕ್ಕೆ ನೀಡಲಾಗಿತ್ತು, ಕಳೆದ ಎರಡು ವರ್ಷದ ಹಿಂದೆ ಹಳೆಯ ಲಾಂಚ್ ಕೂಡ ಸಂಚರಿಸಿತ್ತಿರುವಾಗ ತೊಂದರೆಯಾಗಿ ಮುಳುಗುವ ಹಂತ ತಲುಪಿತ್ತು ಆಗಲೂ ಜನರು ಬಚಾವಾಗಿದ್ದರು.

ಸಿಗಂದೂರಿಗೆ ಪ್ರತಿ ದಿನ ಸಾವಿರಾರು ಜನ ಭೇಟಿ ನೀಡುತ್ತಾರೆ. ಇಂತಹ ಸಂದರ್ಭಗಳಲ್ಲಿ ನುರಿತ ಚಾಲಕರಿಲ್ಲದೇ ಇಲಾಖೆ ಕೂಡ ಅಸಡ್ಡೆ ಮಾಡಿ ಜನರ ಜೀವದ ಜೊತೆ ಚಲ್ಲಾಟವಾಡುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು ಸಹಾಯನಾಗಿದ್ದೂ ಲಾಂಚ್ ಚಾಲನೆ ಮಾಡಿದ ಇಬ್ಬರನ್ನೂ ಅಮಾನತ್ತುಮಾಡಬೇಕೆಂದು ಆಗ್ರಹಿಸಿದ್ದಾರೆ.

ಲಾಂಚ್ ನಲ್ಲಿ ಇಲ್ಲ ಸೇಫ್ಟಿ ಜಾಕೇಟ್?

ಪ್ರತಿ ದಿನ ಲಾಂಚ್ ನಲ್ಲಿ ಸಾವಿರಾರು ಜನ ಪ್ರಯಾಣಿಸುತ್ತಾರೆ,ಒಂದು ಲಾಂಚ್ ನಲ್ಲಿ ಕನಿಷ್ಟ 100ರಿಂದ 150 ಜನ ಒಂದು ಸುತ್ತಿಗೆ ತೆರಳುತ್ತಾರೆ.
ಇನ್ನು ಶುಕ್ರಮಾರ,ಮಂಗಳವಾರ ಒಂದು ಸುತ್ತಿಗೆ ಕನಿಷ್ಟ 400ಜನ ಪ್ರಯಾಣಿಸುತ್ತಾರೆ.
ಒಂದುವೇಳೆ ಮಧ್ಯ ಭಾಗದಲ್ಲಿ ತೊಂದರೆ ಆದರೇ ಜನರ ರಕ್ಷಣೆಗೆ ಲಾಂಚ್ ನಲ್ಲಿ ಲೈಪ್ ಜಾಕೇಟ್ ಕೂಡ ಇಲ್ಲ. ಒಂದುವೇಳೆ ಲಾಂಚ್ ಮುಳಿಗಿದರೇ ಪ್ರಯಾಣಿಕರೆಲ್ಲರೂ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ.
ಇನ್ನಾದರು ಸಂಬಂಧಪಟ್ಟ ಇಲಾಖೆ ಇತ್ತ ಗಮನಿಸಿ ಮುಂದಾಗಬಹುದಾದ ದುರಂತಗಳನ್ನು ತಪ್ಪಿಸುವ ಮುಂಜಾಗ್ರತಾ ಕ್ರಮ ವಹಿಸಬೇಕಿದೆ.
Leave a Reply

Your email address will not be published. Required fields are marked *