ತಾರಕಕ್ಕೇರಿದ ಸಿಗಂದೂರು ದೇವಿ ಆಡಳಿತ ಗದ್ದಲ-ದೇವಿಯಮುಂದೆ ಪ್ರಧಾನ ಅರ್ಚಕ ಶೇಷಗಿರಿ ಭಟ್ ರಿಂದ ಮೌನ ಪ್ರತಿಭಟನೆ.

1473

ಸಾಗರ:-ಸಿಗಂದೂರಿನಲ್ಲಿ ಪ್ರಧಾನ ಅರ್ಚಕ ಶೇಷಗಿರಿ ಭಟ್ ಹಾಗೂ ಧರ್ಮದರ್ಶಿ ರಾಮಪ್ಪ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೆ ಏರಿದೆ.

ತಮ್ಮ ಎಂದಿನ ಕಾರ್ಯಕ್ಕೆ ಧರ್ಮದರ್ಶಿ ರಾಮಪ್ಪ ಕಡೆಯಿಂದ ವಿರೋಧ ಕಂಡುಬಂದ ಹಿನ್ನಲೆಯಲ್ಲಿ ಇಂದು ಶೇಷಗಿರಿ ಭಟ್ಟರು ದೇವಿಯ ಮುಂದೆ ಕುಟುಂಬ ಸಮೇತರಾಗಿ ಮೌನ ಪ್ರತಿಭಟನೆ ಪ್ರಾರಂಭಿಸಿದ್ದಾರೆ.

ಪ್ರತಿಭಟನೆಗೆ ಕುಳಿತ ಅರ್ಚಕ ಶೇಷಗಿರಿ ಭಟ್ ಹೇಳಿದ್ದೇನು ವೀಡಿಯೋ ನೋಡಿ:-

ಪ್ರಧಾನ ಅರ್ಚಕ ಶೇಷಗಿರಿ ಭಟ್ ಹೇಳಿದ್ದು ಹೀಗೆ:-

ಶೇಷಗಿರಿ ಭಟ್ ಆದ ನಾನು ಸುಮಾರು 30ವರ್ಷಗಳಿಂದ ಶ್ರಿದೇವಿಯ ಪೂಜೆಯನ್ನು ನೆಡೆಸಿಕೊಂಡು ಬಂದಿರುತ್ತೇನೆ.ನನ್ನ ಅಜ್ಜ ದೊಡ್ಡಪ್ಪ.ಹಾಗೂ ನನ್ನ ಅಪ್ಪನಿಂದ ತಲತಲಾಂತರವಾಗಿ ಬಂದ ಈ ಪೂಜಾ ಕಾರ್ಯದ ಹಕ್ಕನ್ನು ನೆಡೆಸಿಕೊಂಡು ಬಂದಿರುತ್ತೇನೆ.
ಈಗ ಏಪ್ರಿಲ್ 2020ರಲ್ಲಿ ಆಡಳಿತ ವಿಚಾರದಲ್ಲಿ ನನಗೂ ಹಾಗೂ ಧರ್ಮದರ್ಶಿಗಳಿಗೆ ವೈಮನಸ್ಸು ಉಂಟಾಗಿರುತ್ತದೆ.ಅದನ್ನು ನಾವೇ ಸರಿಪಡಿಸಿಕೊಳ್ಳುವ ಪ್ರಯತ್ನ ವಿಫಲವಾಗಿ ಈ ವಿಚಾರವು ಶಾಸಕರಾದ ಹರತಾಳು ಹಾಲಪ್ಪನವರು ಹಾಗೂ ಮಾಜಿ ಶಾಸಕರಾದ ಕಾಗೋಡು ತಿಮ್ಮಪ್ಪನವರ ಬಳಿ ಹೋಗಿ ಅವರು ಮೂರು ಬಾರಿ ಸಂದಾನಕ್ಕೆಂದು ಕರೆದಾಗ ಧರ್ಮದರ್ಶಿಗಳು ಅದನ್ನು ನಿರಾಕರಿಸಿ ಗೈರು ಹಾಜರಾಗಿರುತ್ತಾರೆ.

ತದನಂತರದಲ್ಲಿ ನಮ್ಮ ಪೂಜಾ ಮತ್ತು ಪ್ರಸಾದ ಹಾಗೂ ದೇವಸ್ಥಾನದ ಕಾರ್ಯಲಯವನ್ನು ಧ್ವಂಸಗೊಳಿಸಿ ವಶಕ್ಕೆ ಪಡೆದುಕೊಂಡಿರುತ್ತಾರೆ.ದೇವಸ್ಥಾನದಲ್ಲಿ ಭಯದ ವಾತಾವರಣ ಉಂಟಾಗಿದ್ದು ಈ ವಿಷಯದ ಬಗ್ಗೆ ಪೋಲಿಸ್ ದೂರನ್ನೂ ನೀಡಿರುತ್ತೇನೆ.

ನಿನ್ನೆ ಅಂದರೆ 15-10-20ರಂದು ತಲತಲಾಂತರದಿಂದ ನೆಡೆದುಕೊಂಡು ಬಂದ ನವರಾತ್ರಿ ಉತ್ಸವದ ಭಾಗವಾದ ಚಂಡಿಕಾ ಹವನ ನೆಡೆಸುವ ಸಲುವಾಗಿ ಯಾಗಶಾಲೆಯನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ತೆರಳಿದಾಗ ಧರ್ಮದರ್ಶಿಗಳ ಕಡೆಯವರು ತಡೆದು ನಮ್ಮ ಬೀಗಗಳನ್ನು ಅವರ ಬೀಗಗಳನ್ನು ಹಾಕಿ ತಮ್ಮ ವಶಕ್ಕೆ ತೆಗೆದುಕೊಂಡಿರುತ್ತಾರೆ.ಆದ ಕಾರಣ ಸತ್ಯ ಹಾಗೂ ನ್ಯಾಯ ಕೇಳುವ ಸಲುವಾಗಿ ನಾನು ಹಾಗೂ ನನ್ನ ಕುಟುಂಬ ದೇವಿಯ ಮುಂದೆ ಮೌನ ಪ್ರತಿಭಟನೆಗೆ ಕುಳಿತಿರುತ್ತೇವೆ.ಎಂದು ಪ್ರಧಾನ ಅರ್ಚಕ ಶೇಷಗಿರಿ ಭಟ್ ತಿಳಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ