ಸಿಗಂದೂರು ವಿಚಾರದಲ್ಲಿ ಕೈಹಾಕಿದ್ರೆ ಯಡಿಯೂರಪ್ಪನವರು ಅಧಿಕಾರ ಕಳೆದುಕೊಳ್ತಾರೆ-ಬೇಳೂರು ಕಿಡಿ.

501

ಶಿವಮೊಗ್ಗ :- ಶಿವಮೊಗ್ಗ ದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಗೋಪಾಲ ಕೃಷ್ ಬೇಳೂರು ರವರು ಸಿಗಂದೂರು ದೇವಾಲಯವನ್ನು ಮುಜರಾಯಿಗೆ ಸೇರಿಸುವ ಕುರಿತು ವಿರೋಧ ವ್ಯಕ್ತಪಡಿಸಿದ್ದು ಜಿಲ್ಲಾಧಿಕಾರಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದರು.

ಕೆಂಜಿಗಾಪುರ ಮುಜುರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನ ಉಳಿಸಿಕೊಳ್ಳಲು ಜಿಲ್ಲಾಡಳಿತಕ್ಕೆ ಆಗಿಲ್ಲ.ಆದರೆ ಖಾಸಗಿ ಟ್ರಸ್ಟ್ ಆಗಿರುವ ಸಿಗಂದೂರು ದೇವಸ್ಥಾನ ಕ್ಕೆ ಡಿಸಿ ಕೈ ಹಾಕಿರುವು ಯಾವ ನ್ಯಾಯ.

ಸಿಗಂದೂರು ದೇವಸ್ಥಾನದ ಬಗ್ಗೆ ಬಿಜೆಪಿಯ ವರಿಗೆ ಯಾಕೆ ಅಷ್ಟು ಆಸಕ್ತಿ. ಅದು ರಾಮಪ್ಪ ಹಾಗೂ ಶೇಷಗಿರಿ ಭಟ್ ಗೆ ಸೇರಿದ ವಿಚಾರ. ರಾಜ್ಯದ ಯಾವ ದೇವಸ್ಥಾನದಲ್ಲಿ ಗಲಾಟೆಯಾಗಿಲ್ಲ ತೋರಿಸಿ ? ,ಅವೆಲ್ಲವನ್ನು ಮುಜುರಾಯಿ ಗೆ ಸೇರಿಸಿದ್ದಿರಾ ಎಂದು ಕಿಡಿಕಾರಿದರು.

ರಾಮಚಂದ್ರಾಪುರ ಮಠದ ಶ್ರೀ ಗಳ ವಿರುದ್ದ ಸಂಘಟನೆಗಳು ಮುಂದಾದಾಗ ನಾನು ಸೇರಿದಂತೆ ದೀವರ ಸಮಾಜ ಅವರ ಬೆನ್ನಿಗೆ ನಿಂತಿತು.ಸಿಗಂದೂರು ಪ್ರವೇಶ ಕ್ಕೆ ಶ್ರೀ ಗಳಿಗೆ ಅಡ್ಡಿಪಡಿಸಿದಾಗಲೂ ಸಮಾಜ ಅವರ ಬೆನ್ನಿಗೆ ನಿಂತಿದೆ.ಸಿಗಂದೂರು ದೇವಸ್ಥಾನಕ್ಕೆ ಜಾತಿಯ ಪ್ರಶ್ನೆಯಿಲ್ಲ,ಸಿಗಂದೂರು ಒತ್ತವರಿಯಾಗಿದೆ ಎಂದು ಡಿಸಿ ಹೇಳ್ತಾರೆ.ಶಿವಮೊಗ್ಗ ಡಿಸಿ ಕಛೇರಿ ಕೂಡ ಅರಣ್ಯ ವ್ಯಾಪ್ತಿಯಲ್ಲಿದೆ.ನೀವು ಜಾಗ ಖಾಲಿ ಮಾಡ್ತಿರಾ? .ನೀವು ಬಿಜೆಪಿಯ ಏಜೆಂಟ್ ಆಗಿ ಕೆಲಸ ಮಾಡಬೇಡಿ.

ನಮ್ಮ ಈಡಿಗ ಸಂಘವನ್ನು ಸ್ವಯಂ ಘೋಷಿಸ ಸಂಘಟನೆ ಎಂದು ಪತ್ರ ಬರೆದಿದ್ದೀರ,
ಸರ್ಕಾರಿ ಕಡತದಿಂದ ಆ ಪದ ಬಳಕೆ ತೆಗೆಯದಿದ್ದರೆ ಈಡಿಗ ಸಮಾಜದಿಂದ ಪ್ರತಿಭಟನೆ ನಡೆಸಲಾಗುವುದು.

ಯಡಿಯೂರಪ್ಪ ನವರೇ ನೀವು ಈ ಹಿಂದೆ ದೇವಸ್ಥಾನ ದ ವಿಷಯಕ್ಕೆ ಕೈ ಹಾಕಿ ಅಧಿಕಾರ ಕಳೆದುಕೊಂಡಿದ್ದೀರಿ ,ಈಗ ಮತ್ತೆ ಸಿಗಂದೂರು ವಿಷಯಕ್ಕೆ ಕೈ ಹಾಕಿದ್ರೆ ಅಧಿಕಾರ ಕಳೆದುಕೊಳ್ತಿರ.
ದಯವಿಟ್ಟು ಸಿಗಂದೂರು ಕ್ಷೇತ್ರವನ್ನು ರಾಮಪ್ಪ ಶೇಷಗಿರಿ ಭಟ್ ರವರಿಗೆ ಬಿಡಿ ಎಂದು ಬೇಳೂರು ಗೋಪಾಲಕೃಷ್ಣ ತಿಳಿಸಿದರು.
Leave a Reply

Your email address will not be published. Required fields are marked *