ಶಿರಸಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಾಟ-ಮೂವರ ಬಂಧನ

334

ಶಿರಸಿ:ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಬಂದಿಸಿದ ಘಟನೆ ಶಿರಸಿ-ಯಲ್ಲಾಪುರ ಚಕ್ ಪೋಸ್ಟ ಬಳಿ ಇಂದು ಬೆಳಿಗ್ಗೆ ನಡೆದಿದೆ.ಬಸವರಾಜ ಗುತ್ಯಪ್ಪ ಕೊಪ್ಪದ (23)ಹಾನಗಲ್, ಹನುಮಂತ ಸುರೇಶಪ್ಪ ಗಡ್ಡದ (23) ಹಾನಗಲ್, ಅಲ್ಲಾಭಕ್ಷ ಲಾಲಸಾಬ್ ನದಾಫ್ ಹಾನಗಲ್ ಬಂಧಿತ ಆರೋಪಿಗಳಾಗಿದ್ದಾರೆ.ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರುತಿ ಸುಜುಕಿ ಕಂಪನಿಯ ಸುಪರ್ ಕ್ಯಾರಿ ಟರ್ಬೊ ಮಾದರಿ ವಾಹನ ದಲ್ಲಿ ಹಿಂಸಾತ್ಮಕವಾಗಿ ಜಾನುವಾರಗಳನ್ನು ಸಾಗಾಟ ಮಾಡುವ ಸಂಧರ್ಭದಲ್ಲಿ ಯಲ್ಲಾಪುರ ನಾಕಾ ಕ್ರಾಸ್ ಹತ್ತಿರ ಸಿ.ಪಿ.ಐ ಶಿರಸಿರವರ ಮಾರ್ಗದರ್ಶನದಲ್ಲಿ ಜಯಶ್ರೀ ಶಾನಭಾಗ , ಪಿ.ಎಸ್.ಐ , ಶಿರಸಿ ಹೊಸ ಮಾರುಕಟ್ಟೆ ಪೊಲೀಸ ಠಾಣೆ , ಶ್ರೀ ನಾಗೇಂದ್ರ ನಾಯ್ಕ , ಪ್ರೋಬೆಷನರಿ ಪಿ.ಎಸ್.ಐ , ಶ್ರೀಮತಿ ಗೀತಾ ಕಲಘಟಗಿ , ಎ.ಎಸ್.ಐ , ಚಿದಾನಂದ ನಾಯ್ಕ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Leave a Reply

Your email address will not be published. Required fields are marked *