BREAKING NEWS
Search

ಶಿರಸಿಯಲ್ಲಿ ಸೋಪು ಖರೀದಿಸಿದವನಿಗೆ ಸಿಕ್ಕಿತು ಸ್ವಿಪ್ಟ್ ಕಾರ್!!

1209

ಶಿರಸಿ: ಇಲ್ಲಿನ ಗ್ರಾಹಕರೋರ್ವರು ಚಂದ್ರಿಕಾ ಸೋಪನ್ನು ಖರೀದಿಸಿ ಕಂಪನಿ ನಡೆಸುವ ಸ್ಪರ್ಧೆಯ ಲಕ್ಕಿ ಡ್ರಾನಲ್ಲಿ ಸ್ವಿಪ್ಟ್ ಕಾರನ್ನು ಗೆದ್ದಿದ್ದು ಗಣೇಶ ಚೌತಿಯಲ್ಲಿ ಭರ್ಜರಿ ಗಿಫ್ಟನ್ನು ತನ್ನದಾಗಿಸಿಕೊಂಡಿದ್ದಾರೆ.

ನಗರದ ರಮ್ಯಾ ಎಂಟರ್ ಪ್ರೈಸಸ್ ಅಂಗಡಿಯಿಂದ ರಾಯರಪೇಟೆ ಕಾಮಾಕ್ಷಿ ಜನರಲ್ ಸ್ಟೊಸ್೯ ಮಾಲೀಕರು ಚಂದ್ರಿಕಾ ಸೋಪನ್ನು ಖರೀದಿಸಿದ್ದರು.

ಅದರಂತೆ ವಿಪ್ರೊ ಎಂಟರ್ ಪೈಸಸ್ ಕಂಪನಿಯವರರು ಈ ಕುರಿತು ಸ್ಪರ್ಧೆಯನ್ನು ನಡೆಸಿದ್ದು ಆ ಸ್ಪರ್ಧೆಯಲ್ಲಿ ಗೆದ್ದ ಕಾಮಾಕ್ಷಿ ಜನರಲ್ ಸ್ಟೋರ್ಸ ಮಾಲಕರಿಗೆ ರಮ್ಯಾ ಎಂಟರ್ ಪ್ರೈಸಸ ಮಾಲಕ ರಾಮನಾಥ ಹೆಗಡೆ ಅವರು ಶಿರಸಿಯ ಆರ್.ಎನ್.ಎಸ್. ಶೋ ರೂಂನಲ್ಲಿ ಸ್ವಿಪ್ಟ್ ಕಾರಿನ ಕೀಯನ್ನು ಹಸ್ತಾಂತರಿಸಿದ್ದು ಈ ರೀತಿಯ ಬಹುಮಾನ ಶಿರಸಿಗೆ ಪ್ರಥಮ ಬಾರಿಗೆ ಬಂದಿದೆ ಎಂದು ಹೆಗಡೆಯವರು ತಿಳಿಸಿದ್ದಾರೆ.




Leave a Reply

Your email address will not be published. Required fields are marked *