ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಯಲ್ಲಿ ಏರಿಕೆ ಕಾಣುತಿದ್ದು ಇಂದು 39 ಜನರಲ್ಲಿ ಕೊರೋನಾ ದೃಢಪಟ್ಟಿರುವುದಾಗಿ ತಿಳಿದುಬಂದಿದೆ.

ಜಿಲ್ಲೆಯ ಶಿರಸಿ ತಾಲೂಕಿನೊಂದರಲ್ಲಿಯೇ 25 ಪಾಸಿಟಿವ್ ಪ್ರಕರಣ ದಾಖಲಾಗಿದೆ.
ನಗರದ ಪ್ರಸಿದ್ದ ಮಾರಿಕಾಂಬಾ ದೇವಾಲಯದ 12 ಸಿಬ್ಬಂದಿಗಳು, ದೇವಸ್ಥಾನದ ಪಕ್ಕದಲ್ಲಿರುವ ಮನೆಯವರು ಹಾಗೂ ಕೆಡಿಸಿಸಿ ಬ್ಯಾಂಕಿನ ಕೆಲವು ಸಿಬ್ಬಂದಿಗಳಿಗೆ ಸೋಂಕು ತಗುಲಿದ್ದು ಇಂದು ಅವರನ್ನು ಕಾರವಾರದ ಕೋವಿಡ್ ವಾರ್ಡ ಗೆ ಸ್ಥಳಾಂತರಿಸಲಾಗಿದೆ.
ಇನ್ನು ಜಿಲ್ಲೆಯ 1000 ಕ್ಕೂ ಹೆಚ್ಚು ಗಂಟಲು ದ್ರವ ಪರೀಕ್ಷೆ ಗೆ ತೆಗೆಯಲಾಗಿದ್ದು ಸುಮಾರು 400 ಜನರ ಗಂಟಲು ದ್ರವದ ಪರೀಕ್ಷೆಗೆ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದರೆ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು ಸಂಜೆಯ ಬುಲಟಿನ್ ನಲ್ಲಿ ಬರಲಿದೆ.