ಶಿರಸಿ:2KG ಗಾಂಜಾ ವಶ:ಓರ್ವನ ಬಂಧನ.

806

ಶಿರಸಿ: ಶಿರಸಿ ನಗರದ ಎಂಇಎಸ್ ಕಾಲೇಜ್ ರಸ್ತೆಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಕ್ರಾಸ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾಧಕ ವಸ್ತುವನ್ನು ಅಕ್ರಮವಾಗಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದವರ ಮೇಲೆ ಮಾರುಕಟ್ಟೆ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.

Detention of 2KG marijuana detainee

ಬಂಧಿತ ಆರೋಪಿ ಶಬ್ಬಿರ ಎಂಬಾತನಾಗಿದ್ದು
ಇತನನ್ನು ವಶಕ್ಕೆ ಪಡೆದು ಅಂದಾಜು 75,900/- ರೂ ಮೌಲ್ಯದ 2 ಕೆ.ಜಿ 530 ಗ್ರಾಂ ತೂಕದ ಗಾಂಜಾ ಮಾದಕ ವಸ್ತು , ನಗದು ಹಣ -710/- ರೂ ಕೃತ್ಯಕ್ಕೆ ಬಳಸಲಾದ ಅಂದಾಜು 2000/- ರೂ ಮೌಲ್ಯದ ರೆಡ್ಮಿಮೊಬೈಲ್ ಫೊನ್ ಜಪ್ತಿಪಡಿಸಿಕೊಂಡಿದ್ದು ದಾಳಿಯ ಕಾಲಕ್ಕೆ ಮಹ್ಮದ್ ಅಶ್ಪಕ್ ತಂದೆ ಜಹೀರ್ ಅಹ್ಮದ್ ಸಾ.ಅಕ್ಕಿ ಆಲೂರ್ ಇತನು ಪರಾರಿಯಾಗಿದ್ದಾನೆ.

ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಬದ್ರಿನಾಥ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉ.ಕ ಕಾರವಾರ,ರವಿ ಡಿ ನಾಯ್ಕ ಡಿ.ಎಸ್.ಪಿ ಶಿರಸಿ ಉಪವಿಭಾಗ, ಬಿ.ಯು ಪ್ರದೀಪ್ ವೃತ್ತ ನಿರೀಕ್ಷಕರು ಶಿರಸಿ ರವರ ಮಾರ್ಗದರ್ಶನದಲ್ಲಿ ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪಿ.ಎಸ್.ಐ ನಾಗಪ್ಪ ನೇತೃತ್ವದ ಪ್ರೊ.ಪಿಎಸ್ಐ ರತ್ನಾ ಕುರಿ ಸಿಬ್ಬಂದಿಗಳಾದ ಮಹಾಂತೇಶ ಬಾರಕೇರ,ರಾಮಯ್ಯ ಪೂಜಾರಿ,ಹನುಮಂತ ಮಾಕಾಪುರ ,ಮೋಹನ ನಾಯ್ಕ ಭಾಗವಹಿಸಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ