BREAKING NEWS
Search

ಶಿವರಾಮ್ ಹೆಬ್ಬಾರ್ ರಿಂದ ಕಾರ್ಯಕರ್ತರ ಸಭೆ!ಬಿಜೆಪಿ ಸೇರುವ ಬಗ್ಗೆ ಹೇಳಿದ್ದೇನು ಗೊತ್ತಾ?

1160

ಬನವಾಸಿಯಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಯಲ್ಲಾಪುರ ಕಾಂಗ್ರೆಸ್ ಅನರ್ಹ ಶಾಸಕ ತಮ್ಮವರ ಬೆಂಬಲ ಕೋರಿದರು ಈ ಕುರಿತು ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವ ನಾಯಕರು ಎಷ್ಟು ನಿಷ್ಠೆ ತೋರಿದ್ದಾರೆ ? ಯಾರು ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ ? ಎಲ್ಲವನ್ನೂ ನೋಡಿದ್ದೇನೆ. ಅದು ಬಹುತೇಕ ನನ್ನ ಕಾರ್ಯಕರ್ತರಿಗೂ ತಿಳಿದಿದೆ ಎಂದು ಮಾಜಿ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ನಾಯಕರ ಕುರಿತು ವ್ಯಂಗ್ಯವಾಡಿದ್ದಾರೆ.

ತಾಲೂಕಿನ ಬನವಾಸಿಯಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ನನ್ನ ಚುನಾವಣೆಯಲ್ಲಿ ಯಾರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಲ್ಲರಿಗೂ ತಿಳಿದಿದೆ. ಜಿಲ್ಲೆಯಲ್ಲಿ ಪರ್ಯಾಯ ಆಡಳಿತ ನೋಡಬೇಕಿದೆ.

ಹೊಸಬರು ಬರಲಿ ಎಂದು ಹಿರಿಯರು ವಿಚಾರ ಮಾಡಿದರೆ ಹೀಗೆ ಆಗುತ್ತಿರಲಿಲ್ಲ ಎಂದು ಆರ್.ವಿ. ದೇಶಪಾಂಡೆಗೆ ಟಾಂಗ್ ನೀಡಿದರು.

ಯಾವ ಪಕ್ಷಕ್ಕೆ ಹೋಗಬೇಕು ಎಂದು ಇನ್ನೂ ನಿರ್ಣಯಿಸಿಲ್ಲ. ನ್ಯಾಯಾಲಯದ ತೀರ್ಪಿನ ನಂತರ ಮುಂದಿನ ನಡೆ ಬಗ್ಗೆ ಹೇಳುತ್ತೇನೆ. ಆದರೆ ಯಾರನ್ನೂ ಅನಾಥರನ್ನಾಗಿ ಮಾಡುವುದಿಲ್ಲ. ಈ ಮೊದಲೂ ಕೈ ಬಿಟ್ಟಿಲ್ಲ. ಮುಂದೆಯೂ ಬಿಡುವುದೂ ಇಲ್ಲ. ಎಲ್ಲರೂ ಆಲೋಚನೆ ಮಾಡಿ ರಾಜೀನಾಮೆ ನಿರ್ಣಯ ತೆಗೆದುಕೊಂಡಿದ್ದೇವೆ. ಅನರ್ಹ ಮಾಡಿದ್ದೇ ತಪ್ಪು. ನಮಗೆ ಮುಂದೆ ಚುನಾವಣೆಗೆ ನಿಲ್ಲಲು ಅವಕಾಶ ಸಿಗಲಿದೆ. ಯಾರೂ ಭಯ ಪಡುವ ಅಗತ್ಯವಿಲ್ಲ ಎಂದರು.

ಭರವಸೆ ನೀಡಿದ ಹೆಬ್ಬಾರ್!

ಸಭೆಯಲ್ಲಿ ಕಾರ್ಯಕರ್ತರು ತಾವು ಬಿಜೆಪಿ ಸೇರಿದರೇ ನಮ್ಮ ಗತೀಯೇನು ಎಂಬ ಆತಂಕ ವ್ಯಕ್ತಪಡಿಸಿದರು. ಅಲ್ಪ ಸಂಖ್ಯಾತರು ನಮಗೆ ಬಿಜೆಪಿಯಲ್ಲಿ ಕಿಮ್ಮತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಆದರೆ ಹೆಬ್ಬಾರ್ ತಾವು ಯಾವ ಪಕ್ಷಕ್ಕೆ ಹೋಗುತ್ತೇವೆ ಎಂಬ ಗುಟ್ಟು ಬಿಟ್ಟುಕೊಡದೇ, ನಾನು ಧರ್ಮದ ಮೇಲೆ ಜಾತಿ ಮೇಲೆ ರಾಜಕಾರಣ ಮಾಡಿಲ್ಲ. ಬಿಜೆಪಿಯಲ್ಲಿದ್ದಾಗಲೂ ಅಲ್ಪ ಸಂಖ್ಯಾತರಿಗೆ ಉತ್ತಮ ಸ್ಥಾನಮಾನ ನೀಡಿದ್ದೇನೆ. ಆದ ಕಾರಣ ಯಾರೂ ತೊಂದರೆ ಪಡಬೇಕಾಗಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಸೇರುತ್ತೇನೆ ಎಂಬ ಸುಳಿವು ನೀಡಿದರು.

ಸಭೆಯಲ್ಲಿ ಬನವಾಸಿ ಭಾಗದ ೧೦೦ ಕ್ಕೂ ಅಧಿಕ ಹೆಬ್ಬಾರ್ ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸಿದ್ದರು. ಆದರೆ ಹೆಬ್ಬಾರರ ಅನುಗ್ರಹದಿಂದ ಆಯ್ಕೆಯಾದ ಬಹುತೇಕ ಜನಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದ್ಯಾಮಣ್ಣ, ಕೆಪಿಸಿಸಿ ಪ್ರಮುಖ ಸಿ.ಎಫ್.ನಾಯ್ಕ ಗೈರು ಹಾಜರಿದ್ದರು. ತಾಪಂ ಸದಸ್ಯೆ ರತ್ನಾ ಶೆಟ್ಟಿ ಭಾಗವಹಿಸಿದ್ದರು. ಸ್ಥಳೀಯವಾಗಿ ಅಪಾರ ಬೆಂಬಲ ಹೆಬ್ಬಾರರಿಗೆ ವ್ಯಕ್ತವಾಯಿತು. ‘ ಮುಂದಿನ ದಿನಗಳಲ್ಲಿ ಸುಪ್ರೀಂ ತೀರ್ಪು ಬಂದ ಮೇಲೆ ಎಲ್ಲಾ ನಾಯಕರು ಬರುತ್ತಾರೆ ‘ ಎಂದು ಹೆಬ್ಬಾರರು ಉಳಿದವರಿಗೆ ಭರವಸೆ ನೀಡಿದರು.

ಮಾಧ್ಯಮಕ್ಕೆ ತಮ್ಮ ಅನರ್ಹತೆ ಬಗ್ಗೆ ಹೇಳಿದ್ದು ಹೀಗೆ:-

ಅತ್ಯಂತ ಬುದ್ಧಿವಂತ ಸಭಾಧ್ಯಕ್ಷ ಎಂದು ಹೇಳಿ ಹೆಸರು ಪಡೆದಿರುವ ,ಕಾನೂನಿನಲ್ಲಿ ತಾನೇ ದೊಡ್ಡ ಜ್ಞಾನಿ ಎಂದು ಹೇಳಿಕೊಳ್ಳುವಂತವರು ಈ ಅನರ್ಹ ತೀರ್ಪು ನ್ನು ಕೊಟ್ಟಿದ್ದಾರೆ, ಸಭಾಧ್ಯಕ್ಷರಿಗೆ ದೇವರು ಒಳ್ಳೆಯದು ಮಾಡಲಿ,ಈಗ ಮಾಜಿ ಆಗಿದ್ದಾರೆ,ಈ ತೀರ್ಪು ಆಶ್ಚರ್ಯ ತಂದಿಲ್ಲ ,ಈ ತೀರ್ಪು ನಿರೀಕ್ಷಿತ ಮತ್ತು ಪೂರ್ವಾಗ್ರ ಪೀಡಿತ. ಎಂದು ಶಾಸಕ ಸ್ಥಾನ ದಿಂದ ಅನರ್ಹರಾದ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

ಮಾಧ್ಯಮದೊಂದಿಗೆ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿರುವ ಅವರು ಒಂದು ರಾಜಕೀಯ ಪಕ್ಷದ ಒತ್ತಡದಿಂದ ಈ ತೀರ್ಪುನ್ನು ಕೊಟ್ಟಿದ್ದಾರೆ,ಸಭಾಧ್ಯಕ್ಷರು ನಮಗೆ ಅವಕಾಶ ಕೊಡಬೇಕಿತ್ತು ನಮ್ಮ ಹೇಳಿಕೆ ಕೊಡಲು ಅವಕಾಶ ಕೊಡಬೇಕು,23 ಕ್ಕೆ ನಮಗೆ ನೋಟೀಸ್ ಮಾಡುತ್ತಾರೆ,ಸ್ಪೀಡ್ ಪೊಸ್ಟ್ ನಲ್ಲಿ 23 ಕ್ಕೆ ನಮಗೆ ಕರೆಯುತ್ತಾರೆ, 24ಕ್ಕೆ ನಮಗೆ ಸ್ಪೀಡ್ ಪೋಸ್ಟ್ ಬರುತ್ತದೆ,ಇದರ ಉದ್ದೇಶ ಏನು ಎಂದು ಪ್ರಶ್ನೆ ಮಾಡಿದ ಅವರು ಮೀಟಿಂಗ್ ನ ಆಹ್ವಾನ ಪತ್ರಿಕೆ ಬಂದಿದ್ದು 24 ಕ್ಕೆ ಕರೆದಿದ್ದು 23 ಕ್ಕೆ ಇದರ ಉದ್ದೇಶ ವೇನು,ನಮಗೆ ಅವಕಾಶವನ್ನು ಕೊಡದೇ ಈ ರೀತಿಮಾಡುವುದು ಪ್ರಜಾಪ್ರಭುತ್ವದ ಒಳ್ಳೆಯ ಲಕ್ಷಣ ಅಲ್ಲ.

ಅಷ್ಟು ಬುದ್ದಿವಂತ ಸಭಾಧ್ಯಕ್ಷರು ಎಂದು ಹೇಳಿಕೊಳ್ಳುವವರು ಇದನ್ನು ಯಾಕೆ ಮಾಡಿದರು ಎಂದು ನಮಗೆ ಗೊತ್ತಿಲ್ಲ,ಇದಕ್ಕೆ ಅವರೇ ಉತ್ತರಿಸಬೇಕು,ನಾವು ನ್ಯಾಯಾಂಗದಲ್ಲಿ ಪ್ರಶ್ನೆ ಮಾಡಿದ್ದೇವೆ ನಮಗೆ ವಿಶ್ವಾಸವಿದೆ ಸರ್ವೋಚ್ಚ ನ್ಯಾಯಾಲಯ 15 ದಿನ 15 ಜನಕ್ಕೆ ನಮಗೆ ಸದನಕ್ಕೆ ಹೂಗುವುದು ಬಿಡುವುದು ನಮ್ಮ ವಿವೇಚನೆಗೆ ಬಿಟ್ಟಿದ್ದು ಎಂದು ಜಡ್ಜ್ಮೆಂಟ್ ಕೊಟ್ಟಿದೆ ಎಂದರು.

ಇನ್ನು ಬಿಜೆಪಿಯಿಂದ ಹಣ ಪಡೆದಿದ್ದೇವೆ ಎನ್ನುವುದಕ್ಕೆ
ಸಿದ್ದರಾಮಯ್ಯನವರಲ್ಲಿ ದಾಖಲೆ ಇದ್ರೆ ಬಿಡುಗಡೆ ಮಾಡಲಿ, ಅನಗತ್ಯ ಆರೋಪ ಮಾಡುವುದು ಮಾಜಿ ಮುಖ್ಯಮಂತ್ರಿಯಾಗಿ ಈ ರೀತಿಯ ಆಧಾರ ರಹಿತ ,ಜವಬ್ದಾರಿ ರಹಿತ ಹೇಳಿಕೆ ಕೊಡುವುದು ಅವರ ಸ್ಥಾನ ಮಾನಕ್ಕೆ ಭೂಷಣ ತರುವಂತದ್ದಲ್ಲ.

ನ್ಯಾಯಾಂಗದಲ್ಲಿ ನಮ್ಮ ನಿರ್ಣಯ ಆದ ನಂತರದಲ್ಲಿ ನಾವು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ
ಕೊಟ್ಟಿರಲಿಲ್ಲ,ನಾವು ಕೇವಲ ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ಕೊಟ್ಟಿದ್ದೆವು ಆದ್ರೆ ರಾಷ್ಟ್ರೀಯ ಕಾಂಗ್ರೆಸ್ ನಮ್ಮನ್ನು ಪಕ್ಷದಿಂದ ಅಮಾನತ್ತು ಮಾಡಿದ್ದಾರೆ.

ನನ್ನ ಬೆಂಬಲಕ್ಕೆ ಇದ್ದಾರೆ ಎಂದು ಮುಂಡಗೋಡು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೂ ಅಮಾನತ್ತು ಮಾಡಿದ್ದಾರೆ,ಇಷ್ಟು ದಿನ ಅಮಾನತ್ತು ಮಾಡಿದ್ದಾರೆ ಇನ್ನುಮುಂದೆ ನನ್ನ ಬೆಂಬಲಿಗರು ರಾಜೀನಾಮೆ ಕೊಡುತ್ತಾರೆ,ಅಮಾನತ್ತು ಮಾಡುವಂತಹ ಕೆಲಸಕ್ಕೆ ಅವಕಾಶ ಕೊಡುವುದಿಲ್ಲ.
ಇನ್ನು ಅನರ್ಹ ನಂತರ ಬಿಜೆಪಿ ಸೇರುವ ಕುರಿತು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿಗರು ನನ್ನ ಮೇಲೆ ಇಟ್ಟ ಅಭಿಮಾನಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ,ಸರ್ವೋಚ್ಚ ನ್ಯಾಯಾಲಯದ ತೀರ್ಪು ಬಂದ ನಂತರ ನನ್ನ ಬೆಂಬಲಿಗರೊಂದಿಗೆ ಚರ್ಚೆ ಮಾಡಿ ಅಂತಿಮ ನಿರ್ಣಯ ಕೈಗೊಳ್ಳುತ್ತೇನೆ.

ಬಿಜೆಪಿಯ ಯಾವ ತೀರ್ಮಾನದ ಬಗ್ಗೆ ಮಾತನಾಡಲು ನಾನು ಬಿಜೆಪಿ ಸದಸ್ಯನಲ್ಲ ಬಿಜೆಪಿ ತೀರ್ಮಾನ ಆ ಪಕ್ಷಕ್ಕೆ ಸೇರಿದ್ದು , ನಾನು ಬಿಜೆಪಿಯ ಸದಸ್ಯನಲ್ಲ ,ನಾನು ಸದಸ್ಯನಲ್ಲ ಎಂದಾಗ ನಾನೇಕೆ ಮಾತನಾಡಲಿ.

ಕಾಗೇರಿಗೆ ಸ್ಪೀಕರ್ ಸ್ಥಾನ ನಿಡಿರುವುದಕ್ಕೆ ಪಕ್ಷಾತೀತವಾಗಿ ಅಭಿನಂದಿಸುತ್ತೇನೆ ಎಂದರು.

ಯಾರು ನಾವು ಅಧಿಕಾರಕ್ಕಾಗಿ ,ಹಣಕ್ಕಾಗಿ ಹೋಗಿದೀವಿ ಎಂದು ಮಾತನಾಡುತ್ತಾರೆ ಇವೆರೆಲ್ಲಾ ಅಧಿಕಾರ ಬಿಡೋಗೆ ಸಿದ್ದತೆ ನೆಡೆಸಿಕೊಂಡಿದ್ದರೆ ರಾಜ್ಯದಲ್ಲಿ ಈ ಪಕ್ಷಕ್ಕೆ ಇಂತಹ ಸ್ಥಿತಿ ಬರುತ್ತಿರಲಿಲ್ಲ,ಅಂತಿಮಘಟ್ಟದ ತನಕ ತಾವೇ ಅಧಿಕಾರದಲ್ಲಿ ಇರಬೇಕು ಎಂಬ ಮನೋ ಭೂಮಿಕೆ ಇವರಲ್ಲಿ ಆಯಿತೂ ಅದೇ ಇವತ್ತಿನ ಸ್ಥಿತಿಗೆ ಕಾರಣ.

20 ರಷ್ಟು ಜನ ಶಾಸಕರು ಪಕ್ಷದಿಂದ ಹೊರ ಹೋಗುತ್ತಾರೆ ಎಂದರೆ ಸಾವಿರಾರು ಕೋಟಿ ಡಿಕ್ಲೇರ್ ಮಾಡಿದಂತಹ ಶಾಸಕರು ಪಕ್ಷದಿಂದ ಹೋಗುತ್ತಾರೆ ಎಂದರೆ ಪಕ್ಷದ ನಾಯಕತ್ವ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಘಟ್ಟಕ್ಕೆ ಬಂದಿದೆ,
ಬೇರೆಯವರನ್ನು ಟೀಕಿಸುವ ಪೂರ್ವದಲ್ಲಿ ತಮ್ಮಿಂದ ಎಲ್ಲಿ ತಪ್ಪಾಗಿದೆ ಎಂದು ಆತ್ಮಾವಲೋಕನ ಮಾಡುವುದು ಒಳ್ಳೆಯದು.

ಕಾಂಗ್ರೆಸ್ ಪಕ್ಷದಿಂದ ಯಾರೂ ಸಂಪರ್ಕ ಮಾಡಿಲ್ಲ,
ಸಿದ್ದರಾಮಯ್ಯ ನವರು ನನಗೆ ಸಂಪರ್ಕ ಮಾಡಿಲ್ಲ ,ನಾವೂ ಸಂಪರ್ಕ ಮಾಡಿಲ್ಲ ನಮ್ಮ ಟೀಮ್ ನ ಯಾವುದೇ ನಾಯಕರು ಸಂಪರ್ಕ ಮಾಡಿಲ್ಲ ,
ನಾವು ಸಂಪರ್ಕ ಮಾಡಿದ್ದೇವೆ ಎನ್ನುವುದು ರಾಜಕಾರಣದ ಸ್ಟಟಜಿ,ನಮ್ಮ ನಮ್ಮಲ್ಲೇ ಅಭಿಪ್ರಾಯ ಭೇದ ಹುಟ್ಟಿಹಾಕುವ ತಂತ್ರ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಒಗ್ಗಟ್ಟಿನಿಂದಲೇ ಈ ಕಷ್ಟದಿಂದ ಪಾರಾಗುತ್ತೇವೆ ಎಂದು
ಕಾಂಗ್ರೆಸ್ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
Leave a Reply

Your email address will not be published. Required fields are marked *