ಶಿರಸಿ:ತೋಟಕ್ಕೆ ಬೆಂಕಿ 20 ಲಕ್ಷಕ್ಕೂ ಹೆಚ್ಚು ಹಾನಿ!

513

ಶಿರಸಿ [ಮೇ 21]:-ಆಕಸ್ಮಿಕ ಬೆಂಕಿಯಿಂದ ಕೃಷಿ ಜಮೀನು ಬೆಂಕಿಗಾಹುತಿಯಾದ ಘಟನೆ ಶಿರಸಿಯ ಪಂಚಲಿಂಗದ ಕರಡಿಕೈ ಬಳಿ ನಡೆದಿದೆ.

ಕರಡಿಕೈ ನಿವಾಸಿ ಸಾವಿತ್ರಿ ಹೆಗಡೆ ಅವರಿಗೆ ಸೇರಿದ 2 ಎಕರೆ ಅಡಕೆ ತೋಟ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದ್ದು
ಬೆಳಗಿನ ಜಾವ ಆಕಸ್ಮಿಕವಾಗಿ ಬಿದ್ದ ಬೆಂಕಿಗೆ 1 ಸಾವಿರಕ್ಕೂ ಅಧಿಕ ಅಡಕೆ ಮರ, ನೂರಾರು ಬಾಳೆ ಮರಗಳು ಬೆಂಕಿಗಾಹುತಿಯಾಗಿದ್ದು ಸುಮಾರು 20 ಲಕ್ಷ ರೂಪಾಯಿ ಹಾನಿ ಯಾಗಿದ್ದು ಸ್ಥಳೀಯರು ಬೆಂಕಿ ನಂದಿಸಿದ್ದಾರೆ.

ಸ್ಥಳದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು ಯಾವ ರೀತಿ ಬೆಂಕಿ ತಗಲಿದೆ ಎಂಬುದರ ಬಗ್ಗೆ ತನಿಖೆಯಿಂದ ತಿಳಿದುಬರಬೇಕಿದ್ದು ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!