ಶಿರಸಿಯಲ್ಲಿ ಗಾಂಜಾ ಮಾರಾಟ- 20 ವರ್ಷದ ಯುವಕನ ಬಂಧನ

1821

ಶಿರಸಿ ನಗರದಲ್ಲಿ ಅಕ್ರಮ ವಾಗಿ ಕೇವಲ ೨೦ ವರ್ಷದ ಯುವಕ ಸುಮಾರು ೨.೭ ಕೆಜಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ ಘಟನೆ ಇಲ್ಲಿನ ಕಲ್ಕುಣಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಧಾರವಾಡ ಜಿಲ್ಲೆಯ ಗಣೇಶಪೇಟೆ ಶೆಟ್ರ ಓಣಿಯ ೨ ನೇ ಕ್ರಾಸಿನ ಸುನೀಲ್ ಶ್ರೀನಿವಾಸ ಬಳ್ಳಾರಿ (೨೦) ಬಂಧಿತ ಯುವಕನಾಗಿದ್ದಾನೆ. ಈತನು ಧಾರವಾಡದಿಂದ ಬಂದು ಇಲ್ಲಿಯ ಅರಣ್ಯ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದಾಗ ಅಂದಾಜು ೨೫.೫೦೦ ರೂ. ಗಳ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ಕೆಲ ದಿನಗಳಿಂದ ಗಾಂಜಾ ವ್ಯಾಪಾರ ಕಡಿಮೆಯಾಗಿತ್ತು. ಆದರೆ ಈಗ ಮತ್ತೇ ಗಾಂಜಾ ಪ್ರಕರಣ ದಾಖಲಾಗಿದ್ದು, ಶಿರಸಿಯಗರನ್ನು ಬೆಚ್ಚಿ ಬೀಳಿಸಿದೆ. ನಗರ ಠಾಣೆ ಪೊಲೀಸರಿಂದ ಈ ಕಾರ್ಯಾಚರಣೆ ನಡೆದಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ