ಶಿರಸಿಯಲ್ಲಿ ಅಬ್ಬರಿಸಿದ ಮಳೆ!ರಸ್ತೆ ಸಂಚಾರ ಅಸ್ತವ್ಯಸ್ತ.

1526

ಕಾರವಾರ :- ಹಲವು ದಿನದಿಂದ ತಾಪಮಾನ ಏರಿಕೆ ಕಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದ ಶಿರಸಿ ,ಸಿದ್ದಾಪುರ ಭಾಗದಲ್ಲಿ ಅಕಾಲಿಕ ಮಳೆ ಸುರಿದಿದೆ. ಒಂದು ಘಂಟೆಗೂ ಹೆಚ್ಚು ಕಾಲ ಗಾಳಿ ಸಹಿತ ಅಬ್ಬರದ ಮಳೆ ಸುರಿದಿದ್ದು ,ಮಳೆಯಿಂದಾಗಿ ಶಿರಸಿ ನಗರದ ಹಲವು ಭಾಗದಲ್ಲಿ ರಸ್ತೆಗಳು ನೀರಿನಿಂದ ತುಂಬಿ ವಾಹನ ಸವಾರರು ಪರೆದಾಡುವಂತಾಯಿತು.

ಜಿಲ್ಲೆಯಲ್ಲಿ ಕನಿಷ್ಟ 30 ರಿಂದ ಗರಿಷ್ಠ 35 ಡಿಗ್ರಿ ಉಷ್ಟಾಂಶ ದಾಖಲಾಗಿತ್ತು .ಆದ್ರೆ ಏಕಾ ಏಕಿ ಮಳೆ ಬಿದ್ದ ಪರಿಣಾಮ ಭೂಮಿ ತಂಪಾಗಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಇನ್ನೂ ಎರಡು ದಿನ ಮಲೆನಾಡು ಭಾಗದಲ್ಲಿ ಅಕಾಲಿಕ ಮಳೆ ಬೀಳುವ ಸೂಚನೆ ನೀಡಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ