ಶಿರಸಿ ಮೂಲದ ಮೌಲ್ವಿ ಹೆಸರಿನಲ್ಲಿ ಉಗ್ರ ಸಂಘಟನೆಯಿಂದ ಸಿಮ್ ಬಳಕೆ- ಕೇಂದ್ರ ತನಿಖಾ ಸಂಸ್ಥೆಯಿಂದ ತನಿಖೆ

942

ಕಾರವಾರ :- ಉಗ್ರ ಸಂಘಟನೆಗೆಗಳ ಸಂಘಟನೆಗಾಗಿ ಶಿರಸಿ ತಾಲೂಕಿನ ಬನವಾಸಿಯ ಮೌಲ್ವಿ ಹೆಸರಿನಲ್ಲಿ ಸಿಮ್ ಬಳಕೆಯಾಗಿದ್ದು ಈ ಕುರಿತು ಶಿರಸಿ ತಾಲೂಕಿನ ಬನವಾಸಿ ಮೂಲದ ಮೌಲ್ವಿ ಅಬ್ದುಲ್ ಮತೀನ್ ಎಂಬುವವನನ್ನು ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿ ತನಿಖೆ ನಡೆಸಿ ಬಿಡುಗಡೆಗೊಳಿಸಿದ್ದಾರೆ‌.

ಅಬ್ದುಲ್ ಮತೀನ್ ಉಡುಪಿ ಜಿಲ್ಲೆಯ ಬೈಂದೂರಿನ ಮದರಸಾದಲ್ಲಿ ಅಧ್ಯಯನ ಮಾಡುತಿದ್ದ ವೇಳೆಯಲ್ಲಿ ಈತನೊಂದಿಗೆ ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳು ಸಹ ಮದರಸಾದಲ್ಲಿ ಓದುತಿದ್ದು ಈ ವೇಳೆ ಶಿರಸಿಯ ಅಬ್ದುಲ್ ಮತೀನ್ ತನ್ನ ಸಹಪಾಠಿಗಳಾದ ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳಿಗೆ ತನ್ನದೇ ಹೆಸರಿನ ದಾಖಲೆಗಳಲ್ಲಿ ಸಿಮ್ ಕೊಡಿಸಿದ್ದ.

ನಂತರ ಈತ ವಿದ್ಯಾಭ್ಯಾಸ ಮುಗಿಸಿ ಮಂಗಳೂರಿನ ಮದರಸಾ ಒಂದರಲ್ಲಿ ಸಹಾಯಕ ಮೌಲ್ವಿಯಾಗಿ ಕಾರ್ಯ ನಿರ್ವಹಿಸುತಿದ್ದ. ಆದರೇ ಈತ ತನ್ನ ಸ್ನೇಹಿತರಿಗೆ ತನ್ನ ಹೆಸರಿನಲ್ಲಿ ಸಿಮ್ ಕೊಡಿಸಿದ್ದು ಈ ಸಿಮ್ ಗಳು ಪಶ್ಚಿಮ ಬಂಗಾಳ ಸೇರಿದಂತೆ ದೇಶದ ನಾನಾ ಭಾಗದಲ್ಲಿ ಬಳಕೆಯಾಗುತಿದ್ದು ನಿಷೇಧಿತ ಜೆ.ಎಮ್.ಬಿ ಸಂಘಟನೆಯ ಸಂಘಟನೆಗೂ ಬಳಕೆಯಾಗಿದ್ದು ಈ ಹಿನ್ನಲೆಯಲ್ಲಿ ಸಿ.ಸಿ.ಬಿ,ಇಡಿ,ಎನ್.ಐ.ಎ ಕೂಡ ಈತನನ್ನು ಕರೆಯಿಸಿ ಹೆಚ್ಚಿನ ತನಿಖೆ ಕೈಗೊಂಡಿದೆ.

ಇನ್ನು ಈತನ ವಿರುದ್ಧ ಶಿರಸಿ ಗ್ರಾಮೀಣೆಯಲ್ಲಿ ಕಲಂ 109 ಪ್ರಕಾರ ಪ್ರಕರಣ ದಾಖಲಿಸಿ ಬಿಡುಗಡೆ ಮಾಡಿದ್ದಾರೆ.

ಉಗ್ರ ಸಂಘಟನೆ ನಂಟು ತನಿಖೆ ಚುರುಕು!

ಶಿರಸಿಯ ಬನವಾಸಿ ಮೌಲ್ವಿ ಹೆಸರಿನಲ್ಲಿ ಒಂಬತ್ತಕ್ಕೂ ಹೆಚ್ಚು ಸಿಮ್ ಬಳಕೆಯಾಗುತ್ತಿದೆ. ಇತನ ಹೆಸರಿನಲ್ಲಿ ಬಳಕೆಯಾಗುತ್ತಿರುವ ಸಿಮ್ ಗಳು ಪಶ್ಚಿಮ ಬಂಗಾಳ, ಜಮ್ಮು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಯ್ಯಾಕ್ಟಿವ್ ಆಗಿದೆ. ಕೇಂದ್ರ ಗುಪ್ತದಳದವರು ಸಹ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತಿದ್ದು ಪಶ್ಚಿಮ ಬಂಗಾಳದಲ್ಲಿ ಜೆ.ಎಮ್.ಬಿ ಸಂಘಟನೆಯ ಸದಸ್ಯರೊಬ್ಬರು ಈತನ ಹೆಸರಿನಲ್ಲಿರುವ ಸಿಮ್ ಬಳಸುತ್ತಿರುವ ಮಾಹಿತಿ ದೊರೆತಿದ್ದು ಸಂಘಟನೆಗಾಗಿ ಈ ಸಿಮ್ ಬಳಕೆಯಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಹೆಚ್ಚಿನ ತನಿಖೆ ಕೈಗೊಂಡಿದೆ. ಇನ್ನು ತನಿಖೆ ವೇಳೆ ತಾನು ಉಡುಪಿ ಜಿಲ್ಲೆಯ ಬೈಂದೂರಿನ ಮದರಸಾದಲ್ಲಿ ಕಲಿಯುತಿದ್ದಾಗ ತನ್ನ ಸ್ನೇಹಿತರಿಗೆ ತನ್ನ ದಾಖಲೆ ಮೂಲಕ ಅಬ್ದುಲ್ ಮತೀನ್ ಸಿಮ್ ಕರೀದಿಸಿ ನೀಡಿರುವುದನ್ನು ಒಪ್ಪಿಕೊಂಡಿದ್ದು ಯಾರ್ಯಾರಿಗೆ ಸಿಮ್ ನೀಡಿದ್ದೇನೆ ಎಂಬುವ ಮಾಹಿತಿಯನ್ನು ಕೇಂದ್ರ ತನಿಖಾ ಸಂಸ್ಥೆಗೆ ಮಾಹಿತಿ ನೀಡಿದ್ದಾನೆ. ಈ ಹಿನ್ನಲೆಯಲ್ಲಿ ಹೆಚ್ಚಿನ ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ಸಂಸ್ಥೆಗಳು ಉಗ್ರ ಸಂಘಟನೆಗಳು ತಮ್ಮ ಸಂಘಟನೆಗೆ ಯುವಕರನ್ನು ಸೆಳೆಯಲು ಈ ಸಿಮ್ ಬಳಕೆ ಮಾಡಿರುವ ಕುರಿತು ಮಾಹಿತಿ ಕಲೆಹಾಕಿದ್ದು ಉಡುಪಿಯ ಬೈಂದೂರಿನ ಮದರಸ ಹಾಗು ಬೆಂಗಳೂರಿನಲ್ಲಿ ಹೆಚ್ಚಿನ ತನಿಖೆ ಕೈಗೊಂಡಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಟಲೈಟ್ ಪೋನ್ ಯಾಕ್ಟಿವ್ !

ಕಳೆದ ಆರು ತಿಂಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ,ಯಲ್ಲಾಪುರ-ಅಂಕೋಲ ಗಡಿಯಲ್ಲಿ ನಿಷೇಧಿತ ಸಟಲೈಟ್ ಪೊನ್ ಗಳು ಯಾಕ್ಟಿವ್ ಆಗಿದ್ದು ಐದಕ್ಕೂ ಹೆಚ್ಚು ಬಾರಿ ಸಟಲೈಟ್ ಪೋನ್ ಬಳಸಲಾಗಿದೆ. ಈ ಕುರಿತು ಸಹ ಜಿಲ್ಲಾ ಪೊಲೀಸರು, ಸಿಸಿಬಿ ಹಾಗೂ ಕೇಂದ್ರ ಗುಪ್ತದಳ ಸಂಸ್ಥೆಯ ಅಧಿಕಾರಿಗಳು ಕಾರವಾರ, ಯಲ್ಲಾಪುರ ಭಾಗದ ಕಾಡುಗಳಲ್ಲಿ ಜಂಟಿ ಕೂಮಿಂಗ್ ಕಾರ್ಯಾಚರಣೆ ನಡೆಸಿತ್ತು.ಆದರೇ ಇದರ ಬಗ್ಗೆ ಹೆಚ್ಚಿನ ಮಾಹಿತಿ ದೊರಕದ ಹಿನ್ನಲೆಯಲ್ಲಿ ಬರಿಗೈಯಲ್ಲಿ ಹಿಂತಿರುಗುವಂತಾಗಿತ್ತು. ಆದರೆ ಈಗ ಶಿರಸಿ ಮೂಲದ ಮೌಲಿ ಹೆಸರಿನಲ್ಲಿ ಸಿಮ್ ಬಳಕೆಯಾಗಿದ್ದು ತಿಳಿದುಬಂದಿದ್ದು ಹೆಚ್ಚಿನ ವಿವರ ಕಲೆಹಾಕಲಾಗುತ್ತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ