ಶಿರಸಿ ಕುಮಟಾ ರಸ್ತೆ ಅಕ್ಟೋಬರ್ 12 ರಿಂದ 18 ತಿಂಗಳು ಬಂದ್!

6956

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಶಿರಸಿ,ಕುಮಟಾ ರಸ್ತೆಯು ಸಾಗರಮಾಲಾ ಯೋಜನೆಯಡಿಯಲ್ಲಿ ರಸ್ತೆ ಅಗಲೀಕರಣ ಕಾರ್ಯ ಪ್ರಾರಂಭವಾಗಲಿದ್ದು, ಇದೇ ತಿಂಗಳ 12 ರಿಂದ 18 ತಿಂಗಳುಗಳ‌ ಕಾಲ ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಬದಲಿ ಮಾರ್ಗವಾಗಿ ಕುಮಟಾ-ಸಿದ್ದಾಪುರ ಮಾರ್ಗದ ವ್ಯವಸ್ಥೆ ಇದ್ದು ಲಘು ವಾಹನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ಅಂಕೋಲ-ಯಲ್ಲಾಪುರ ಮಾರ್ಗವಾಗಿ ಶಿರಸಿ ಮಾರ್ಗ ಮತ್ತು ಹೊನ್ನಾವರ-ಮಾವಿನಗುಂಡಿ-ಸಿದ್ದಾಪುರ-ಶಿರಸಿ ಮಾರ್ಗಕ್ಕೆ ಎಲ್ಲಾತರದ ವಾಹನಕ್ಕೆ ಅವಕಾಶ ಮಾಡಿಕೊಡಲಾಗಿದೆ. ರಸ್ತೆ ಉನ್ನತೀಕರಣ ಕಾರಣದಿಂದ ಸಾರ್ವಜನಿಕರು ಬದಲಿ ಮಾರ್ಗ ಬಳಸುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ