ಪ್ರವಾಹ ಇಳಿಮುಖವಾಗಿ ಜನರ ರಕ್ಷಣೆಗೆ ಮಂಜುಗುಣಿಯಲ್ಲಿ ದೇವರಿಗೆ ವಿಶೇಷ ಪ್ರರ್ಥನೆ

153

ಶಿರಸಿ:-ರಾಜ್ಯದ ‌ನಾನಾ ಭಾಗಗಳಲ್ಲಿ ವರುಣನ ಅವಕೃಪೆಯಿಂದ ಉಂಟಾಗುತ್ತಿರುವ ಅತಿವೃಷ್ಠಿ ಹಿನ್ನೆಲೆಯಲ್ಲಿ ಇಂದು ಭೂಲೋಕದ ಸ್ವರ್ಗ ಎಂದು ಕರೆಯಲ್ಪಡುವ ಶ್ರೀ ಕ್ಷೇತ್ರ ಮಂಜುಗುಣಿಯಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು.

ಉತ್ತರ ಕರ್ನಾಟಕ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಪ್ರಕೃತಿ ವಿಕೋಪ ದಿಂದಾಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಜನಜೀವನ ಅಸ್ತವ್ಯಸ್ತ ಗೊಂಡಿದ್ದು ದಿಕ್ಕೇ ತೋಚದಂತಹಾ ಸನ್ನಿವೇಶ ಎದುರಾಗಿದೆ ಹಾಗೂ ಇನ್ನೂ ಹಲವಾರು ಕಡೆ ಬರಗಾಲವಿದೆ. ಈ ಎಲ್ಲಾ ಪ್ರಕೃತಿ ಯ ಅಸಮತೋಲನವನ್ನು ಸರಿಮಾಡಿ ಎಲ್ಲಾ ಕಡೆ ಸುಖ ಶಾಂತಿ ನೆಮ್ಮದಿ ‌ನೆಲೆಸಲಿ ಎಂದು ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ ನೇತ್ರತ್ವದಲ್ಲಿ ಶ್ರೀ ವೆಂಕಟೇಶ ನಿಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು.

ವರದಿ:- ಸುದನ್ವ ಮಂಜುಗುಣಿ




Leave a Reply

Your email address will not be published. Required fields are marked *