BREAKING NEWS
Search

ಶಿರಸಿ ಮಾರಿಜಾತ್ರೆಗೆ ಮಳೆ ವಿಘ್ನ- ಕುಸಿದುಬಿದ್ದ ಗದ್ದುಗೆ ಸ್ವಾಗತ ಮಂಟಪ

5378

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಶಿರಸಿ ,ಸಿದ್ದಾಪುರ ತಾಲೂಕಿನಾಧ್ಯಾಂತ ಅಬ್ಬರದ ಗಾಳಿ ಮಳೆ ಸುರಿದಿದೆ. ಮಳೆಯ ಅಬ್ಬರಕ್ಕೆ ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಿಯ ಜಾತ್ರೆಗೆ ದೊಡ್ಡ ವಿಘ್ನ ಎದುರಾಗಿದ್ದು ಅಬ್ಬರದ ಗಾಳಿ ಮಳೆಗೆ ಮಾರಿಕಾಂಬಾ ದೇವಿ ಗದ್ದುಗೆಯ ಪ್ರವೇಶ ದ್ವಾರದ ಮಂಟಪ ಸಂಪೂರ್ಣ ಕುಸಿದು ನೆಲಕ್ಕುರಿಳುದೆ. ಇನ್ನು ಜಾತ್ರೆಗೆ ಹಾಕಿದ ಮಳೆಗೆಗಳು ಕಿತ್ತು ಬಿದ್ದಿದ್ದು ಬಟ್ಟೆ ಅಂಗಡಿ ಸೇರಿದಂತೆ ಹಲವು ಮಳಿಗೆಗಳಿಗೆ ಹಾನಿಯಾಗಿದ್ದು ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳು ನೀರಿಗೆ ಆಹುತಿಯಾಗಿದೆ.

ಇಂದು ಸಂಜೆ ಏಕಾಏಕಿ ಗುಡುಗು ಸಹಿತ ಅಬ್ಬರದ ಮಳೆ ಪ್ರಾರಂಭವಾಗಿದೆ. ಮಾರಿಜಾತ್ರೆಯಾಗಿದ್ದರಿಂದ ಲಕ್ಷಾಂತರ ಜನರು ಶಿರಸಿ ನಗರದಲ್ಲಿ ಸೇರಿದ್ದರು. ದುರಾದೃಷ್ಟ ಎನ್ನುವಂತೆ ಮಾರಿಕಾಂಬಾ ದೇವಿ ಮಂಟಪ ಅಬ್ಬರದ ಗಾಳಿಗೆ ಕುಸಿದು ಬಿದ್ದಿದೆ. ಇದಲ್ಲದೇ ಜಾತ್ರೆಗೆ ಹಾಕಿದ್ದ ಅಂಗಡಿಗಳ ವಸ್ತುಗಳು ಗಾಳಿ ಮಳೆಯ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿದ್ದು ಲಕ್ಷಾಂತರ ರುಪಾಯಿ ಹಾನಿ ಸಂಭವಿಸಿದೆ.
ಇನ್ನು ಶಿರಸಿ ತಾಲೂಕಿನಲ್ಲಿ ಅಲ್ಲದೇ ಮುಂಡಗೋಡು,ಹಳಿಯಾಳ,ಸಿದ್ದಾಪುರ ಭಾಗದಲ್ಲೂ ಅಬ್ಬರದ ಗುಡುಗು ಸಹಿತ ಮಳೆಯಾಗಿದೆ.

ಶಿರಸಿ ಮಾರಿಕಾಂಬೆ ದೇವಿಗೆ ವಿಘ್ನ !

ಶಿರಸಿ ಮಾರಿಕಾಂಬಾ ದೇವಿ ಗದ್ದುಗೆಯ ಮುಖ ಮಂಟಪ ದ್ವಾರವು ಮಳೆಗೆ ಕುಸಿದು ಬಿದ್ದಿದ್ದು ಇದು ಕಂಟಕದ ಮುನ್ಸೂಚನೆ ಎಂದು ಜನ ಆಡಿಕೊಳ್ಳುತಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ಹಲವು ಬಾರಿ ಮಳೆ ಸುರಿದಿದ್ದರೂ ದೇವಿ ಗದ್ದುಗೆ ಮಂಟಪಕ್ಕೆ ಯಾವುದೇ ಹಾನಿ ಆಗಿರಲಿಲ್ಲ. ಆದರೇ ಇದೇ ಮೊದಲಬಾರಿಗೆ ದೇವಿ ಗದ್ದುಗೆ ಪ್ರವೇಶ ಮಂಟಪ ಕುಸಿದು ಬಿದ್ದಿದ್ದರಿಂದ ಯಾವುದೋ ಅಪಾಯದ ಸೂಚನೆಯನ್ನು ದೇವಿ ನೀಡಿದ್ದಾಳೆ ಎಂದು ಭಕ್ತರು ಆಡಿಕೊಳ್ಳುತಿದ್ದಾರೆ. ಕಮಿಟಿಯಿಂದ ಸಮರ್ಪಕ ಪೂಜೆ ಪುನಸ್ಕಾರಗಳು ಸಮರ್ಪಕವಾಗಿ ವಿಧಿಯಂತೆ ನಡೆಯದೇ ಇರುವುದೇ ಇದೆಕ್ಕೆಲ್ಲ ಕಾರಣ ಎಂದು ಭಕ್ತರು ಆಡಿಕೊಳ್ಳುತಿದ್ದು ಹೀಗಾಗಿಯೇ ಈರೀತಿ ವಿಘ್ನ ನಡೆದಿದೆ ಎಂದು ಹೇಳುತಿದ್ದಾರೆ.

ದುರಾಸೆಗೆ ಭಕ್ತರ ಜೀವ ಪಣಕ್ಕಿಟ್ಟ ಸ್ಥಳೀಯ ಆಡಳಿತ

ಮಳೆಯಿಂದಾಗಿ ಜಾಂಯಟ್ ವೀಲ್ ಕಳಚಿಟ್ಟಿರುವುದು.

ಶಿರಸಿ ಜಾತ್ರೆಯಲ್ಲಿ ಮಳಿಗೆಗಳನ್ನು ಹರಾಜು ಹಾಕಲಾಗುತ್ತದೆ. ಈ ಬಾರಿ ಲಕ್ಷ ಲಕ್ಷಕ್ಕೆ ಮಳಿಗೆಗಳು ಹರಾಜು ಗೊಂಡಿದೆ. ಜಾತ್ರೆಯಲ್ಲಿ ಕೋಟೆಕೆರೆ ಗದ್ದೆಯಲ್ಲಿ ಜಾಯಿಂಟ್ ವೀಲ್ ಅನ್ನು ಖಾಸಗಿ ಜಮೀನಿನಲ್ಲಿ ಹಾಕಲು ಸ್ಥಳೀಯ ಆಡಳಿತ ಅವಕಾಶ ನೀಡಿದೆ. ಆದರೇ ಈ ಜಾಗದಲ್ಲಿ ಕೆರೆ ಇದ್ದಿದ್ದರಿಂದ ಭೂಮಿ ಮೃದುವಾಗಿದ್ದು ಹೂಳು ತುಂಬಿದ ಜವಳಿನಂತಿದೆ.ಈ ಪ್ರದೇಶದಲ್ಲಿ ಮಣ್ಣು ಹಾಕಿ ಜಾಯಿಂಟ್ ವೀಲ್ ಅನ್ನು ಹಾಕಲಾಗಿದ್ದು ಅತೀ ಅಪಾಯದಲ್ಲಿದೆ. ಯಾವ ಸಂದರ್ಭದಲ್ಲಾದರೂ ಜನರು ಇದರಲ್ಲಿ ಕುಳಿತರೆ ಬೀಳುವಂತಿತ್ತು. ಇದೀಗ ಮಳೆ ಬಂದಿದ್ದರಿಂದ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡ ಎರಡು ದಿನಗಳ ವರೆಗೆ ಜಾಯಿಂಟ್ ವೀಲನ್ನು ನಡೆಸದಂತೆ ಸೂಚನೆ ನೀಡಿದೆ. ಮುಂದೆ ಜಾಯಿಂಟ್ ವೀಲ್ ಅನ್ನು ಇಲ್ಲಿ ನಡೆಸಲು ಮತ್ತೆ ಅವಕಾಶ ನೀಡಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!