ಶಿರಸಿ ಮಾರಿಕಾಂಬಾ ದೇವಸ್ಥಾನ ಸೀಲ್ ಡೌನ್ !

2092

ಕಾರವಾರ :- ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನವನ್ನು ಒಂದು ವಾರಗಳ ಕಾಲ ಸೀಲ್ ಡೌನ್ ಮಾಡಿ ಪ್ರವೇಶ ನಿರ್ಭಂಧಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ್ ನಾಯ್ಕ ಮಾಹಿತಿ ನೀಡಿದ್ದಾರೆ.
ದೇವಸ್ಥಾನದ ಪಕ್ಕದಲ್ಲೇ ಇರುವ ಮನೆಯ ವ್ಯಕ್ತಿಗೆ ಕರೋನಾ ಫಾಸಿಟಿವ್ ಬಂದ ಹಿನ್ನಲೆಯಲ್ಲಿ ಒಂದು ವಾರಗಳ ಕಾಲ ಸೀಲ್ ಡೌನ್ ಮಾಡುತಿದ್ದು
ದೇವಸ್ಥಾನದ ಪೂಜೆ ಹೊರತುಪಡಿಸಿ ಅನ್ಯರಿಗೆ ಪ್ರವೇಶ ಸಂಪೂರ್ಣ ನಿರ್ಭಂಧ ಮಾಡಲಾಗಿದೆ.


ದೇವಸ್ಥಾನದ ಪಕ್ಕದಲ್ಲೇ ಇದ್ದ ಮನೆಯೊಂದರ ವ್ಯಕ್ತಿ ದೇವಸ್ಥಾನಕ್ಕೆ ಪ್ರತೀ ದಿನ ದರ್ಶನಕ್ಕೆ ಬರುತಿದ್ದ.ಈತನಿಗೆ ಸೊಂಕು ದೃಡಪಟ್ಟ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿ ದಿನ ಮುಂಜಾಗೃತಾ ಕ್ರಮವಾಗಿ ದೇವಸ್ಥಾನ ಸ್ಯಾನಿಟೈಸ್ ಮಾಡಲಾಗುತಿದ್ದು ಇಂದು ಸಹ ದೇವಸ್ಥಾನವನ್ನು ಸ್ಯಾನಿಟೈಸ್ ಮಾಡಲಾಗಿದೆ.




Leave a Reply

Your email address will not be published. Required fields are marked *