ಶಿರಸಿ:ಬಿಜೆಪಿ ಮುಖಂಡನಿಗೆ ಚಾಕು ಇರಿತ ಪ್ರಕರಣ-ಎಸ್.ಡಿ.ಪಿ.ಐ ಸದಸ್ಯರ ಬಂಧನ! ಮಹತ್ವದ ದಾಖಲೆ ವಶ?

1441

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಏಪ್ರಿಲ್ 24ರ ಮತದಾನದ ರಾತ್ರಿ ವೇಳೆ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಈ ಗಲಾಟೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅನೀಸ್ ತಹಶೀಲ್ದಾರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಶಿರಸಿ ನಗರದಲ್ಲಿನ ಎಸ್.ಡಿ.ಪಿ.ಐ. ಕಚೇರಿಗೆ ಡಿವೈಎಸ್ಪಿ ಭಾಸ್ಕರ್ ವಕ್ಕಲಿಗ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಎಸ್.ಡಿ.ಪಿ.ಐ. ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಷರೀಫ್ ಶೇಖ್ ಹಾಗೂ ತಾಲೂಕಾ ಅಧ್ಯಕ್ಷ ಅಸ್ಲಮ್ ಹುಸೇನ್ ಶೇಖ್ ಎನ್ನುವವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಲ್ಲಿ ಕೊಲ್ಲಲು ಬಂದವನೇ ಪ್ರಾಣ ಬಿಟ್ಟನೇ! ಹಲವು ಗೊಂದಲ ಸಂಶಯ ಸೃಷ್ಟಿ!

ಎಪ್ರಿಲ್ 24 ರ ರಾತ್ರಿ ವೇಳೆ ಬಿಜೆಪಿ ಅಲ್ಪಸಂಖ್ಯಾತ ಘಟಕದ ತಾಲೂಕು ಉಪಾಧ್ಯಕ್ಷ ಅನೀಸ್ ಶಿರಸಿಯ ಕಸ್ತೂರಬಾ ನಗರದಲ್ಲಿ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆಸಿ ಚಾಕುವಿನಿಂದ ಒಂದು ಗುಂಪಿನ ಯುವಕರು ಇರಿತ ಮಾಡಿದ್ದರು.
ಈ ಸಂದರ್ಭದಲ್ಲಿ ಇರಿತ ಮಾಡಿದವರ ಗುಂಪಿನಲ್ಲಿದ್ದ ಅಸ್ಲಂ ಬಾಬಾಜಾನ್ (22) ಎಂಬ ಯುವಕನಿಗೆ ಮಾರಕಾಸ್ತ್ರದಲ್ಲಿ ಹಲ್ಲೆ ಮಾಡುವಾಗ ಗಾಯವಾಗಿ ಕಸ್ತೂರಬಾ ನಗರದ ಬಯಲಿನಲ್ಲಿ ಹೆಣವಾಗಿದ್ದ .ನಂತರ ಪೊಲೀಸರು ಹತ್ಯೆ ಸಂಬಂಧ ಬಿಜೆಪಿ ಅಲ್ಪಸಂಖ್ಯಾತ ಘಟಕದ ತಾಲೂಕು ಉಪಾಧ್ಯಕ್ಷ ಅನೀಸ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಜೊತೆಗೆ ಅನೀಸ್ ಮೇಲೆ ಹಲ್ಲೆ ನೆಡೆಸಿದ ಪ್ರಕರಣ ದಾಖಲಿಸಿಕೊಂಡಿದ್ದರು.

ಹಲ್ಲೆಗೊಳಗಾದ ಅನೀಸ್

ಅನೀಸ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಇಬ್ಬರು ಎಸ್.ಡಿ‌.ಪಿ.ಐ‌. ಕಾರ್ಯಕರ್ತರನ್ನು ಮೂರು ದಿನಗಳ ಹಿಂದೆ ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದು ಅವರ ಮಾಹಿತಿ ಆದಾರದಲ್ಲಿ ಈಗ ಇನ್ನೂ ಇಬ್ಬರನ್ನು ಬಂಧಿಸಿದ್ದು, ಮಹತ್ವದ ದಾಖಲೆಗಳನ್ನೂ ವಶಪಡಿಸಿಕೊಂಡಿದ್ದಾರೆ. ಇವರು ಅನೀಸ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಎಸ್.ಡಿ.ಪಿ.ಐ. ಕಚೇರಿಯಲ್ಲಿ ಒಳಸಂಚು ರೂಪಿಸಿದ್ದಾರೆ ಎಂಬ ಗುಮಾನಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ.

ಕೊಲೆಗೆ ಕಾರಣವೇನು?

ಒಂದೇ ಕೋಮಿನ ಯುವಕರಾಗಿದ್ದ ಈ ಎರಡು ಗುಂಪುಗಳ ನಡುವೆ ಜಮೀನೊಂದರ ವ್ಯವಹಾರವಿತ್ತು ಈ ಹಿನ್ನಲೆಯಲ್ಲಿ ದ್ವೇಷದಿಂದ ಕೊಂದಿರುವ ಸಾಧ್ಯತೆ ಕೂಡ ಇರಬಹುದೆಂದು ಸಂಶಯಿಸಲಾಗಿದೆ. ಜೊತೆಗೆ ಬಿಜೆಪಿ ಯಲ್ಲಿ ಹಲ್ಲೆಗೊಳಗಾದ ಅನೀಸ್ ಸಕ್ರಿಯನಾಗಿದ್ದಿದ್ದು ಕೂಡ ಕಾರಣವಿರಬಹುದು ಹಾಗೂ ಅನೀಸ್ ವ್ಯವಹಾರದಲ್ಲಿ ಸರಿ ಇರದಿದ್ದರಿಂದ ಇದೂ ಕೂಡ ಹತ್ಯೆ ಸಂಚಿಗೆ ಕಾರಣವಾಗಿದ್ದು ಈ ವೇಳೆ ಅಸ್ಲಂ ಗೆ ಆಯಾತಪ್ಪಿ ಹೊಡೆತ ಬಿದ್ದು ರಕ್ತಸ್ರಾವವಾಗಿ ಸತ್ತಿರಬಹುದು ಎಂಬುವ ದಿಕ್ಕಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದು ಸದ್ಯದರಲ್ಲಿಯೇ ಪ್ರಕರಣ ಬೆಳಕಿಗೆ ಬರಲಿದೆ.
Leave a Reply

Your email address will not be published. Required fields are marked *

error: Content is protected !!