ಲಂಚದ ಆಸೆಗಾಗಿ ಏಳುವರ್ಷದಿಂದ ಕಾಡಿದ ಗ್ರಾಮಪಂಚಾಯ್ತಿ ಅಧಿಕಾರಿ ಕೊನೆಗೂ ಎಸಿಬಿ ಬಲೆಗೆ

1704

ಕಾರವಾರ:- ಏಳು ವರ್ಷದಿಂದ ಕಟ್ಟಿರುವ ಮನೆಗೆ ಮನೆ ಸಂಖ್ಯೆ ನೀಡದೆ ಲಂಚಕ್ಕಾಗಿ ಕಾಡುತಿದ್ದ ಶಿರಸಿಯ ಜಾನ್ಮನೆ ಪಂಚಾಯತ್ ಅಧಿಕಾರಿ ಎಸಿಬಿ ಬಲೆಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಜಾನ್ಮನೆ ಗ್ರಾಮಪಂಚಾಯ್ತಿಯಲ್ಲಿ ನಡೆದಿದೆ.

ಕೃಷ್ಣಪ್ಪ ಎಲ್ವಗಿ ಲಂಚ ಸ್ವೀಕರಿಸುತ್ತಿರುವಾಗ ಎಸಿಬಿ ಬಲೆಗೆ ಬಿದ್ದ ಜಾನ್ಮನೆ ಪಿಡಿಓ ಆಗಿದ್ದು
ಸಂಪಕಂಡ ಗ್ರಾಮದ ನಿವಾಸಿ ಸುದೀಂದ್ರ ಹೆಗಡೆ ಎಂಬುವವರಿಂದ 2014 ರಲ್ಲಿ ನಿರ್ಮಿಸಿದ್ದ ಮನೆಗೆ ಮನೆ ನೊಂದಣಿ ಸಂಖ್ಯೆ ನೀಡಲು 15 ಸಾವಿರ ಲಂಚ ಕೇಳಿದ್ದರು.ಹಣ ಕೊಡದಿದ್ದಕ್ಕೆ ಏಳು ವರ್ಷದಿಂದ ಸತಾಯಿಸಿದ್ದರು.

ಸುದೀಂದ್ರ ಹೆಗಡೆ ದೂರಿನ ಅನ್ವಯ ಲಂಚ ಸ್ವೀಕರಿಸುವ ವೇಳೆ ಎಸಿಬಿ ಡಿ.ವೈ.ಎಸ್.ಪಿ ಶ್ರೀಕಾಂತ್ ನೇತ್ರತ್ವದಲ್ಲಿ ದಾಳಿ ನಡೆಸಿ ,ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.ಕಾರವಾರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ