ಶಿರಸಿಯಲ್ಲಿ ಬಂಧಿತ ಆರೋಪಿಯಲ್ಲಿ ಕರೋನಾ ಫಾಸಿಟಿವ್! ನಗರ ಠಾಣೆ ಸೀಲ್ ಡೌನ್!

4471

ಕಾರವಾರ :- ವಿವಿಧ ಜಿಲ್ಲೆಗಳಲ್ಲಿ ವಾಹನ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಬಂದಿತ ಆರೋಪಿಗೆ ಕರೋನ ಪಾಸಿಟಿವ್ ಪತ್ತೆಯಾಗುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ.ಕಳೆದ ಒಂದು ವಾರದ ಹಿಂದೆ ನಗರದ ರಾಯರಪೇಟೆ ಹತ್ತಿರದ ಮನೆಯಂಗಳದಲ್ಲಿ ನಿಲ್ಲಿಸಿಟ್ಟದ್ದ ಟಿವಿಎಸ್ ಅಪಾಚೆ ಬೈಕ್ ಕಳ್ಳತನ ವಾಗಿತ್ತು. ಅದರ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ವನ್ನು ಭೆದೀಸಿದ ಪೊಲೀಸರು ಧಾರವಾಡದ ಟೊಲ್ ನಾಕಾ ಜನತ್ ನಗರದ ನಿವಾಸಿ ರಾಜೇಶ್ ವಿಠ್ಠಲ ನಾಯ್ಕ (೩೮) ಎಂಬ
ಆರೋಪಿಯನ್ನ ಬಂದಿಸಿ ಬೈಕ್ ನ್ನು‌ ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದರು.ಇದಲ್ಲದೇ ಇದೇ ಆರೋಪಿ ಶಿವಮೊಗ್ಗ ಜಿಲ್ಲೆಯ ಸಾಗರ ,ಧಾರವಾಡ,ಉಡುಪಿ,ಮಂಗಳೂರಿನಲ್ಲೂ ವಾಹನ ಕಳ್ಳತನ ಮಾಡಿದ್ದ ಈ ಹಿನ್ನಲೆಯಲ್ಲಿ ಈತನನ್ನು ಹೆಚ್ಚಿನ ತನಿಖೆಗಾಗಿ ಶಿರಸಿಯ ಸಬ್ ಜೈಲ್ ನಲ್ಲಿ ಇಡಲಾಗಿತ್ತು. ಇನ್ನು ಮೊದಲಬಾರಿ ಪರೀಕ್ಷಿಸಿದಾಗ ಈತನಲ್ಲಿ ನೆಗೆಟೀವ್ ವರದಿಯಾಗಿತ್ತು.

ಬಂಧಿತ ಆರೋಪಿ ಜೊತೆ ಪೊಲೀಸ್ ಆಧಿಕಾರಿಗಳು.

ಆದರೇ ಎರಡನೇಬಾರಿ ಪರೀಕ್ಷೆಯಲ್ಲಿ ಇಂದು ಫಾಸಿಟಿವ್ ಬಂದಿದ್ದು ಈಗ
ಶಿರಸಿಯ ಸಬ್ ಜೈಲ್ ಹಾಗೂ ನಗರ ಪೊಲೀಸ್ ಠಾಣೆಯನ್ನು ಸಿಲ್ ಡೌನ್ ಮಾಡಲು ಇಲಾಖೆ ಮುಂದಾಗಿದೆ.

ಇದಲ್ಲದೇ ಈತನು ನಗರ ಠಾಣೆಯ ನಾಲ್ಕು ಜನರ ಸಂಪರ್ಕ ಹೊಂದಿದ್ದು ಇವರನ್ನು ಪ್ರತ್ತೇಕವಾಗಿ ಇಡಲಾಗಿದ್ದು ಇಂದು ಇವರ ಗಂಟಲು ದ್ರವ ವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ತಾತ್ಕಾಲಿಕವಾಗಿ ಶಿರಸಿ ನಗರ ಠಾಣೆಯನ್ನು ಸೀಲ್ ಡೌನ್ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಮಾಹಿತಿ ನೀಡಿದ್ದಾರೆ.

ಜೈಲಿನಿಂದ ಆರೋಪಿಯನ್ನು ಕಾರವಾರದ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು.

ಇದಲ್ಲದೇ ಈತ ಬಂಧನಕ್ಕೂ ಮುಂಚೆ ನಗರದ ವಿವಿಧ ಭಾಗದಲ್ಲಿ ಸಂಚರಿಸಿರುವುದಲ್ಲದೇ ಶಿವಮೊಗ್ಗ ಜಿಲ್ಲೆಯ ಸಾಗರ ,ಉಡುಪಿ,ಧಾರವಾಡ,ಮಂಗಳೂರಿಗೂ ಸಂಚಾರ ಮಾಡಿದ್ದು ಈತನ ಟ್ರಾವೆಲ್ ಹಿಸ್ಟರಿ ಕೂಡ ಪತ್ತೆಹಚ್ಚುವುದು ಕಷ್ಟಕರವಾಗಿದ್ದು ಪೊಲೀಸರು ಮತ್ತು ಆರೋಗ್ಯ ಇಲಾಖೆಗೆ ತಲೆನೋವಾಗಿದೆ.

ಇನ್ನು ಜಿಲ್ಲೆಯಲ್ಲಿ ಇಂದು 13 ಕರೋನಾ ಫಾಸಿಟಿವ್ ಬರುವ ಸಾಧ್ಯತೆಗಳಿದ್ದು ಇದರಲ್ಲಿ ಶಿರಸಿ ನಾಲ್ಕು ಪ್ರಕರಣ,ಅಂಕೋಲ 3 ಪ್ರಕರಣ ಫಾಸಿಟಿವ್ ಬರುವ ಸಾಧ್ಯತೆಗಳಿವೆ.
Leave a Reply

Your email address will not be published. Required fields are marked *