BREAKING NEWS
Search

ಶಿರಸಿಯಲ್ಲಿ ಅಪಘಾತ ತಪ್ಪಿಸಲು ಗೋವುಗಳಿಗೆ ರಿಫ್ಲೆಕ್ಟರ್ ಅಳವಡಿಕೆ

502

ಶಿರಸಿ :- ಶಿರಸಿ ನಗರದಲ್ಲಿ ಇತ್ತಿಚಿನ ದಿನಗಳಲ್ಲಿ ರಸ್ತೆ ಅಪಘಾತ ಮತ್ತು ಬಿಡಾಡಿದನಗಳ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು ಪರಿಹಾರೊಪಾಯವಾಗಿ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಶಿರಸಿ ಮಾರುಕಟ್ಟೆ ಪೊಲೀಸರು ಬಿಡಾಡಿ ದನಗಳ ಕೊಂಬುಗಳಿಗೆ ರಿಫ್ಲೆಕ್ಟರಗಳನ್ನು ಅಳವಡಿಸುವ ಕಾರ್ಯವನ್ನು ಇಂದಿನಿಂದ ಪ್ರಾರಂಭಿಸಿದ್ದಾರೆ.

ರಾತ್ರಿ ವೇಳೆಯಲ್ಲಿ ಬಿಡಾಡಿದನಗಳು ರಸ್ತೆಯ ಮೇಲೆಯೆ ಮಲಗುವುದರಿಂದ ವಾಹನ ಸವಾರರಿಗೆ ಸಂಚಾರಕ್ಕೆ ಅಡೆತಡೆ ಉಂಟಾಗಿ ಅಪಘಾತಗಳು ಸಂಭವಿಸಿ ವಾಹನ ಪ್ರಯಾಣಿಕರು ಮತ್ತು ಬಿಡಾಡಿದನಗಳು ಸಾವು ನೋವಿಗೆ ತುತ್ತಾಗಿರುವ ಪ್ರಕರಣಗಳು ವರದಿಯಾಗುತ್ತಿದ್ದವು.

ಇದನ್ನು ಮನಗಂಡು ಡಿಎಸ್ಪಿ ಗೋಪಾಲಕೃಷ್ಣ ನಾಯಕ ಮತ್ತು ಸಿ.ಪಿ.ಐ ಪ್ರದೀಪ ಬಿಯು ರವರ ಮಾರ್ಗದರ್ಶನದಲ್ಲಿ ಮಾರುಕಟ್ಟೆ ಠಾಣೆಯ ಪಿ‌ಎಸ್ಐ ನಾಗಪ್ಪ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳು ಶಿರಸಿ ನಗರದ ಗೋರಕ್ಷಕ ತಂಡದ ಸದಸ್ಯರು ಭಾನುವಾರ ಸಾಯಂಕಾಲ ನಗರದ ರಾಘವೇಂದ್ರ ವೃತ್ತ,ಕೊರ್ಟರಸ್ತೆ,ಹೊಸಪೇಟೆ ರಸ್ತೆ,ದೇವಿಕೆರೆ,ಹುಬ್ಬಳ್ಳಿರಸ್ತೆ,ವಿವೇಕಾನಂದ ನಗರ ಮುಂತಾದ ಕಡೆಗೆ ರಸ್ತೆಯ ಮೇಲೆ ಮಲಗುತ್ತಿದ್ದ ಬಿಡಾಡಿ ದನಗಳ ಕೊಂಬುಗಳಿಗೆ ರಿಫ್ಲೆಕ್ಟರ್ ಅಳವಡಿಸಿದ್ದಾರೆ.

ಇದನ್ನೂ ಓದಿ:-




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ