
ಶಿರಸಿ : ಶಿರಸಿಯಲ್ಲಿಯ ವಿವಿಧ ಕಂಪ್ಯೂಟರ್ ಸೆಂಟರ್, ಸೈಬರ್ ಸೆಂಟರ್, ಆನ್ ಲೈಲ್ ಸರ್ವರ್ ಮೇಲೆ ಕಂದಾಯ, ಆಹಾರ ಮತ್ತು ಪೋಲೀಸ್ ಇಲಾಖೆಗಳಿಂದ ಜಂಟಿಯಾಗಿ ದಾಳಿ ನಡೆಯಿತು.
ದಾಖಲೆ ಪರಿಶೀಲಿಸಿದ ಅಧಿಕಾರಿಗಳ ತಂಡವು ಯಾವುದೇ ದಾಖಲೆ, ಕಂಪ್ಯೂಟರ್ ಹಾರ್ಡ ಡಿಸ್ಕ್ಗಳು, ಅದರಲ್ಲಿಯ ದಾಖಲೆ ನಾಶ ಪಡಿಸುವ ಅಥವಾ ಬದಲಾಯಿಸದಂತೆ ಎಚ್ಚರಿಕೆ ನೀಡಿತು.
ಅನೇಕ ಕಂಪ್ಯೂಟರ್ ಆನ್ಲೈನ್ ಸರ್ವರ್ ಗಳು ಯಾವುದೇ ಪರವಾನಿಗೆ ಪಡೆಯದೇ ಸೇವೆ ಹೆಸರಿನಲ್ಲಿ ಗ್ರಾಹಕರ ಸುಲಿಗೆ ನಡೆಸುತ್ತಿರುವ ಬಗ್ಗೆ ಇಲಾಖೆಗಳಿಗೆ ಸಾರ್ವಜನಿಕರಿಂದ ವ್ಯಾಪಕ ದೂರು ಬಂದಿತ್ತು. ನಕಲಿ ಪಾಸಪೋರ್ಟ, ಆಧಾರ್ ಕಾರ್ಡ ತಯಾರಿಸಿ ಕೊಡುತ್ತಿರುವ ಆರೋಪಗಳು ಇದ್ದವು.

ಈ ಹಿಂದೆ ನಕಲಿ ಪಾಸಪೋರ್ಟ ಪ್ರಕರಣ ಶಿರಸಿ ಗ್ರಾಮೀಣ ಠಾಣೆಯಲ್ಲಿ ಬೆಳಕಿಗೆ ಬಂದಿತ್ತು.
ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಅವರ ನೇತೃತ್ವದಲ್ಲಿ ಡಿವೈ ಎಸ್ಪಿ ಜಿ.ಟಿ.ನಾಯ್ಕ, ಸಿಪಿಐ ಪ್ರದೀಪ ಬಿ.ಯು., ತಹಶೀಲ್ದಾರ ಎಂ.ಆರ್.ಕುಲಕರ್ಣಿ, ಆಹಾರ ನಿರೀಕ್ಷಕ ನಾಗರಾಜ, ಪಿಎಸೈ ಶಿವಾನಂದ ಮತ್ತು ಕಂದಾಯ ಇಲಾಖೆಯ ತಾಂತ್ರಿಕ ಸಿಬ್ಬಂದಿಗಳು ನಗರದ 10 ಕ್ಕೂ ಹೆಚ್ಚು ಸೇವಾಕೇಂದ್ರಗಳ ಮೇಲೆ ನಡೆದ ದಾಳೀ ಕಾರ್ಯಾಚರಣೆ ವೇಳೆ ಪಾಲ್ಗೊಂಡು ಪರಿಶೀಲಿಸಿದರು.