ಶಿರಸಿಯಲ್ಲಿ ಅಕ್ರಮ ಗೋಮಾಂಸ ಸಾಗಾಟ-ಇಬ್ಬರ ಬಂಧನ

496

ಶಿರಸಿಯಲ್ಲಿ ಇಂದು ಅಕ್ರಮವಾಗಿ ಗೋಮಾಂಸವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ವೇಳೆ ಇಬ್ಬರನ್ನ ಬಂಧಿಸಿರುವ ಘಟನೆ ಶಿರಸಿ ಹೊಸಮಾರುಕಟ್ಟೆ ವ್ಯಾಪ್ತಿಯಲ್ಲಿ ನಡೆದಿದೆ.ಅಕ್ಕಿ ಆಲೂರು ಮೂಲದ ಮಹ್ಮದ್ ಸಲಿಂ ಬೇಪಾರಿ, ಭಾಷಾಸಾಬ ಬಹದ್ದೂರ ರನ್ನು ಬಂಧಿಸಲಾಗಿದೆ.

ಅಕ್ರಮವಾಗಿ ಗೊಮಾಂಸವನ್ನು ಮಾರಾಟ ಮಾಡಲು ಶಿರಸಿ ನಗರದ ಕರಿಗುಂಡಿ ರಸ್ತೆಯಲ್ಲಿ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇಲೆ ಡಿವೈಎಸ್ಪಿ ಜಿ ಟಿ ನಾಯಕ ನೇತೃತ್ವದಲ್ಲಿ ಹೊಸ ಮಾರುಕಟ್ಟೆ ಠಾಣೆ ಪಿ.ಎಸ್.ಐ ನಾಗಪ್ಪ ನೇತೃತ್ವದ ಸಿಬ್ಬಂದಿಗಳಾದ ಚಿದಾನಂದ ನಾಯ್ಕ,ಹನುಮಂತ ಮಾಕಾಪುರ,ಮೋಹನ ನಾಯ್ಕ ರವರನ್ನು ಒಳಗೊಂಡ ತಂಡ ದಾಳಿ ನಡೆಸಿ ಆರೋಪಿತರನ್ನು ವಶಕ್ಕೆ ಪಡೆದು ಇವರಿಂದ 4950 ರೂಪಾಯಿ ಮೌಲ್ಯದ 16ಕೆ ಜಿ ಗೋಮಾಂಸ 2200 ನಗದು, ಎರಡು ಮೊಬೈಲ್ , ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ.
ಘಟನೆ ಸಂಬಂಧ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ
Leave a Reply

Your email address will not be published. Required fields are marked *