BREAKING NEWS
Search

ಹಣ ಅಕ್ರಮ ಸಾಗಾಟ- ಶಿರಸಿ ಪೊಲೀಸರಿಂದ ಇಬ್ಬರ ಬಂಧನ

3203

ಕಾರವಾರ:- ಖಚಿತ ಮಾಹಿತಿ ಪಡೆದ ಶಿರಸಿ ಡಿವೈಎಸ್ಪಿ ಜಿ.ಟಿ.ನಾಯಕ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ, ಕಾರಿನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಅಂದಾಜು ೫೬ ಲಕ್ಷ ರೂ. ನಗದು ಹಣವನ್ನು ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಚಿಪಗಿ ನಾಕಾ ಬಳಿ ನಡೆದಿದೆ.

ಸಿದ್ದಾಪುರ ತಾಲೂಕಿನ ಹೇರೂರಿನ
ಅಬ್ದುಲ್ ಮುತಲಿಫ (೩೧) ಹಾಗೂ
ಅಬ್ದುಲ್ ಸೌದ್ (೪೨) ಬಂಧಿತ ಆರೋಪಗಳಾಗಿದ್ದು, ಇವರು ಹುಬ್ಬಳ್ಳಿಯಿಂದ ಶಿರಸಿ ಕಡೆಗೆ ಹಣ ಸಾಗಿಸುತ್ತಿದ್ದಾಗ ಚಿಪಗಿ ನಾಕಾ ಬಳಿ, ಸುಮಾರು ೫೫ ಲಕ್ಷದ ೯೬ ಸಾವಿರ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆಯಲ್ಲಿ ಹಣ ಸಾಗಿಸಲು ಬಳಸಿದ್ದ ರೆನಾಲ್ಟ್ ಡಸ್ಟರ್ ( KA 31, N 2628 ) ಕಾರನ್ನು ಜಪ್ತಿ ಮಾಡಲಾಗಿದ್ದು, ಸಿಬ್ಬಂದಿಗಳಾದ
ಪ್ರಶಾಂತ, ಚಂದ್ರಪ್ಪ , ಕೃಷ್ಣ, ಅನ್ಸಾರಿ, ರಾಜೇಶ ನಾಯ್ಕ, ರಾಜೇಶ ಕೊರಗ, ಜೋಸೇಫ್, ಶ್ರೀಧರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.




Leave a Reply

Your email address will not be published. Required fields are marked *