ಶಿರಸಿಯಲ್ಲಿ ಇಬ್ಬರು ಪ್ರೌಡಶಾಲಾ ಶಿಕ್ಷಕಿಯರಿಗೆ ಕರೋನಾ ಪಾಸಿಟಿವ್!12 ವಿದ್ಯಾರ್ಥಿಗಳಿಗೆ ಕರೋನಾ ಟೆಸ್ಟ್.

2015

ಕಾರವಾರ:- ಪ್ರೌಡಶಾಲೆಯ ಎಸ್.ಎಸ್.ಎಲ್ .ಸಿ ಮಕ್ಕಳಿಗೆ ಶಾಲೆ ಪ್ರಾರಂಭವಾಗುತಿದ್ದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧ್ಯಾಪಕರಿಗೆ ಕರೋನಾ ಪಾಸಿಟಿವ್ ಬರುವ ಮೂಲಕ ಶಾಕ್ ನೀಡಿದೆ. ಮೊದಲ ದಿನವೇ ಕರಾವಳಿ ಭಾಗದ ಭಟ್ಕಳ ,ಹೊನ್ನಾವರ ಭಾಗದ ಇಬ್ಬರು ಶಿಕ್ಷಕರಿಗೆ ಕರೋನಾ ಪಾಸಿಟಿವ್ ವರದಿಯಾಗಿತ್ತು .ಇದರ ಬೆನ್ನಲ್ಲೇ ಶಿರಸಿಯ ಸೋಂದ ಹಾಗೂ ದಾಸನಕೊಪ್ಪ ಶಾಲೆಯ ಇಬ್ಬರು ಶಿಕ್ಷಕಿಯರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.

ಇನ್ನು ಕರೋನಾ ಬಂದ ಹಿನ್ನಲೆಯಲ್ಲಿ 12 ಮಕ್ಕಳನ್ನು ಕೋವಿಡ್ ಟೆಸ್ಟ್ ಮಾಡಲಾಗಿದ್ದು ಎಲ್ಲರಲ್ಲೂ ನೆಗಟೀವ್ ಬಂದಿದೆ ಎಂದು ಶಿರಸಿ ಡಿ.ಡಿ.ಪಿ‌ಯು ದಿವಾಕರ್ ಶಟ್ಟಿರವರು ತಿಳಿಸಿದ್ದಾರೆ.
ಇನ್ನು ಈ ಶಿಕ್ಷಕರು ಕಳೆದ ತಿಂಗಳು ಮತ ಎಣಿಕೆ ಕಾರ್ಯದಲ್ಲಿ ಸಹ ಭಾಗಿಯಾಗಿದ್ದು ಇವರ ಸಂಪರ್ಕ ಬಂದವರಿಗೂ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 11 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ತಾಲುಕುವಾರು ವಿವರ ಈ ಕೆಳಗಿನಂತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ