BREAKING NEWS
Search

ಶಾಸಕರ ಅನರ್ಹ ವಿಚಾರ:ಆಯಾ ಸಂದರ್ಭಕ್ಕೆ ಅಗತ್ಯ ನಿಲುವನ್ನು ತೆಗೆದುಕೊಳ್ಳುತ್ತೇನೆ-ಕಾಗೇರಿ

292

ಶಿರಸಿ:- ನಾನು ವಿಧಾನ ಸೌದದಲ್ಲಿ ಕುಳಿತು ಶಾಸಕರ ಅನರ್ಹ ವಿಚಾರವಾಗಿ ಎಲ್ಲಾ ಮಾಹಿತಿ ಪಡೆದು ಅಗತ್ಯವಾದ ನಿಲುವುಗಳನ್ನು ಆಯಾ ಸಂದರ್ಭದಲ್ಲಿ ತೆಗೆದುಕೊಳ್ಳುತ್ತೇನೆ,ಈಗ ನನ್ನ ಮುಂದೆ ಯಾವ ವಿಷಯವೂ ವಿಲ್ಲ,

ಉಳಿದ ಯಾವ ವಿಷಯವೂ ಪ್ರಸ್ತುತವಲ್ಲ,ಎಂದು ಸ್ಪೀಕರ್ ಸ್ಥಾನ ಅಲಂಕರಿಸಿದ ನಂತರ ಮೊದಲಬಾರಿ ಸ್ವ ಕ್ಷೇತ್ರ ಶಿರಸಿಗೆ ಆಗಮಿಸಿದ ಕಾಗೇರಿ ಅನರ್ಹರ ವಿಚಾರ ಕುರಿತು ಪ್ರಸ್ತಾಪಿಸಿದರು.

ತಾಯಿ ಶ್ರೀಮತಿ ಸರ್ವೇಶ್ವರಿ ರವರ ಆಶಿರ್ವಾದ ಪಡೆದ ಕಾಗೇರಿ

ರಾಜ್ಯದ ಜನ ಅನೇಕರೀತಿಯ ಕಷ್ಟವನ್ನು ಅನುಭವಿಸುತಿದ್ದಾರೆ ಸದನದ ಮೂಲಕ ಜನರ ಕಷ್ಟಗಳು ಚರ್ಚೆಯಾಗಿ ಆ ಕಷ್ಟಗಳು ದೂರವಾಗುವಂತೆ ಮಾಡುವ ಜವಬ್ದಾರಿ ನನ್ನ ಮೇಲಿದೆ ಸದನವನ್ನು ಅರ್ಥಪೂರ್ಣವಾಗಿ ನಡೆಸಿ ರಾಜ್ಯದ ಜನರ ನೋವನ್ನು ದೂರಮಾಡುವ ಶಕ್ತಿ ಆ ದೆವರು ಕೊಡಲಿ ಎಂದು ಬಯಸುತ್ತೇನೆ.

ವಿಧಾನಸಭಾಧ್ಯಕ್ಷನಾಗಿ ಜನರ ಕಷ್ಟ ದೂರ ಮಾಡೋ ಕೆಲಸ ಮಾಡ್ತೇನೆ ಎಂದರು. ನಂತರ ಶಿರಸಿಯ ಕಾಗೇರಿಯ ತಮ್ಮ ಸ್ವಗೃಹದಲ್ಲಿ ತಾಯಿಯ ಆಶಿರ್ವಾದ ಪಡೆದು ಕಾರ್ಯಕರ್ತರನ್ನು ಭೇಟಿಯಾಗಿ ಶಿರಸಿ ಮಾರಿಕಾಂಬಾ ದೇವಿ ಸೇರಿದಂತೆ ತಮ್ಮ ಇಷ್ಟದೈವ ದರ್ಶನ ಮಾಡಿದರು.
Leave a Reply

Your email address will not be published. Required fields are marked *