ಶಿರಸಿ:ಸೊಸೆ ಮಹಿಳಾ ಸಂಘಕ್ಕೆ ಸೇರಿದ್ದಕ್ಕೆ ಮನನೊಂದು ಅತ್ತೆ ಆತ್ಮಹತ್ಯೆ!

4043

ಶಿರಸಿ:-ಸೊಸೆ ಮಹಿಳಾ ಸಂಘಕ್ಕೆ ಸೇರಿದ್ದಾಳೆ ಎಂಬ ಕಾರಣದಿಂದ ಅತ್ತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಸಂಜೆ ಶಿರಸಿಯ ಮಾರುತಿ ಗಲ್ಲಿಯಲ್ಲೊ ನಡೆದಿದೆ.ಪುಷ್ಪ ರಂಗಸ್ವಾಮಿ ಮರಾಟೆ ಆತ್ಮಹತ್ಯೆ ಮಾಡಿಕೊಂಡ ವೃದ್ಧೆಯಾಗಿದ್ದು,ಇಂದು ಬೆಳಗ್ಗೆ ಸೊಸೆ ಹಾಗೂ ಮಗನೊಂದಿಗೆ ಸೊಸೆ ಮಹಿಳಾ ಸಂಘಕ್ಕೆ ಸೇರುವ ಕುರಿತು ಜಗಳವಾಡಿದ್ದು ನಂತರ ಅತ್ತೆ ಪುಷ್ಪ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಘಟನೆ ಸಂಬಂಧ
ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ