BREAKING NEWS
Search

ಯಲ್ಲಾಪುರ:ಇಂಗು ಗುಂಡಿಗೆ ಬಿದ್ದು ಇಬ್ಬರು ಮಕ್ಕಳು ಸಾವು!

1629

ಶಾಲೆ ಬಿಟ್ಟ ನಂತರ ಆಡವಾಡಲು ತೆರಳಿದ್ದ ಇಬ್ಬರು ಮಕ್ಕಳು ಆಕಸ್ಮಿಕವಾಗಿ ಇಂಗು ಗುಂಡಿ ನೀರಿನಲ್ಲಿ ಬಿದ್ದು ಮೃತಪಟ್ಟ ಹೃದಯ ವಿದ್ರಾಹಕ ಘಟನೆ ಉತ್ತರ ಕನ್ನಡದ ಯಲ್ಲಾಪುರದ ಬಾಳಗಾರಿನಲ್ಲಿ ನಡೆದಿದೆ.

ಬಾಳಗಾರ ಗ್ರಾಮದ ಸಹನಾ ಕೃಷ್ಣ ಭಟ್ (೧೦) ಮತ್ತು ರಶ್ಮಿ ಪಟಗಾರ (೭) ಮೃತಪಟ್ಟ ಮಕ್ಕಳಾಗಿದ್ದಾರೆ. ಶನಿವಾರ ಶಾಲೆಗೆ ಮಧ್ಯಾಹ್ನ ರಜೆಯಿರುವ ಕಾರಣ ಆಟವಾಡಲು ತೆರಳಿದ್ದ ಮಕ್ಕಳು ಸಂಜೆಯದಾರೂ ಮನೆಗೆ ಮರಳದ ಕಾರಣ ಪೊಷಕರು ಹಡುಕಾಡಿದಾಗ ಹತ್ತಿರದ ಇಂಗು ಗುಂಡಿಯಲ್ಲಿ ಮೃತ ದೇಹ ಪತ್ತೆಯಾಗಿದೆ.

ಪ್ರತಿ ಶನಿವಾರ, ಭಾನುವಾರವೂ ಸೊಪ್ಪಿನ ಬೆಟ್ಟಕ್ಕೆ ಆಟವಾಡಲು ಮಕ್ಕಳು ಹೋಗುತ್ತಿದ್ದರು ಎಂದು ಪೊಷಕರು ತಿಳಿಸಿದ್ದಾರೆ. ಸೊಪ್ಪಿನ ಬೆಟ್ಟದಲ್ಲಿ ನೀರಿಂಗಿಸಲು ಇಂಗು ಗುಂಡಿಗಳನ್ನು ತೊಡಿದ್ದು ಆಕಸ್ಮಿಕವಾಗಿ ಇಬ್ಬರೂ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *