BREAKING NEWS
Search

ಈ ತಿಂಗಳಲ್ಲೇ ಪ್ರಾರಂಭವಾಗುತ್ತೆ 1ರಿಂದ5 ನೇ ತರಗತಿ! ಹೊಸ ನಿಯಮಗಳು ಏನು? ವಿವರ ನೋಡಿ

473

ಬೆಂಗಳೂರು: ಬರೋಬ್ಬರಿ ಒಂದೂವರೇ ವರ್ಷದ ಬಳಿಕ, ಇದೇ ದಿನಾಂಕ 25ರಿಂದ 1ರಿಂದ 5ನೇ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಮಾರ್ಗಸೂಚಿ ಹೊರಡಿಸಿದೆ.

ಕೋವಿಡ್‌ ಮಾರ್ಗಸೂಚಿ ಪಾಲಿಸಿ ತರಗತಿಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗಲು ಪೋಷಕರ ಅನುಮತಿ ಕಡ್ಡಾಯವಾಗಿದೆ. ತರಗತಿಯಲ್ಲಿ ಶೇ 50ರಷ್ಟು ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗಿದೆ.ತಜ್ಞರ ಸಮಿತಿ ಒಪ್ಪಿಗೆ ಮೆರೆಗೆ ಶಾಲೆ ಆರಂಭಿಸಲು ಒಪ್ಪಿಗೆ ನೀಡಲಾಗಿದೆ. ಜಿಲ್ಲೆಗಳಲ್ಲಿ ಮತ್ತು ಗಡಿ ಭಾಗಗಳಲ್ಲಿ ಸದ್ಯದ ಕೋವಿಡ್‌ ದೃಢ ಪ್ರಮಾಣವನ್ನು ಅವಲೋಕಿಸಿದ ಬಳಿಕ ಪ್ರಾಥಮಿಕ ಹಂತದಿಂದಲೇ ಶಾಲೆಗಳನ್ನು ಆರಂಭಿಸಲು ಸಮಿತಿ ಅನುಮತಿ ನೀಡಲಾಗಿದೆ. ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮಾಹಿತಿ ನೀಡಿದ್ದಾರೆ.

ಸೂಚನೆಗಳು ಹೀಗಿವೆ:-

1) ಒಂದು ವಾರಕ್ಕೂ ಮೊದಲೇ ಮಕ್ಕಳಿಗೆ ಕೋವಿಡ್ ಮಾರ್ಗಸೂಚಿ ಕುರಿತು ತರಬೇತಿ.

2)1-5ನೇ ತರಗತಿ ಮಕ್ಕಳಿಗೆ ಅರ್ಧ ಮಾತ್ರ ಪಾಠ-ಪ್ರವಚನ

3)ನವೆಂಬರ್ 1 ರಿಂದ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭ

4) ನವೆಂಬರ್ ನಂತರ ಮಕ್ಕಳಿಗೂ ಬಿಸಿಯೂಟ ವಿತರಣೆ




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ