BREAKING NEWS
Search

ಆತಂಕ ತಂದ ಸೋಫಾ ಡ್ಯಾಮ್ ಕೆಳಭಾಗದ ರಸ್ತೆ ಬಿರುಕು! ಮುಳುಗಿದೆ ಸೇತುವೆ!

633

ಕಾರವಾರ :- ಸೂಫಾ ಜಲಾಶಯದಲ್ಲಿ ನೀರು ಬಿಟ್ಟ ಹಿನ್ನಲೆ ಜಲಾಶಯದ ಕೆಳಭಾಗದಲ್ಲಿ ಬಿರುಕು ಬಿಟ್ಟು ಆತಂಕ ಮೂಡಿಸಿದ ಘಟನೆ ನಡೆದಿದೆ.

ಬಿರುಕು ಬಿಟ್ಟ ವೀಡಿಯೋ ನೋಡಿ:-

ಕಳೆದ ಎರಡು ದಿನದಿಂದ ಜಿಲ್ಲೆಯಲ್ಲಿ ಬಾರಿ ಮಳೆಯಾಗುತಿದ್ದು ಈ ಹಿನ್ನೆಲೆಯಲ್ಲಿ ಕಾಳಿ ನದಿ ಹೆಚ್ಚಿನ ನೀರು ಬಂದ ಹಿನ್ನೆಲೆಯಲ್ಲಿ ಸೂಫಾ ಜಲಾಶಯ ದಿಂದ 40 ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗಿತ್ತು.

ಹೆಚ್ಚಿನ ಮಳೆ ಹಾಗೂ ಅಧಿಕ ನೀರಿನ ಒತ್ತಡದಿಂದ
ಜಲಾಶಯದ ಕೆಳ ಭಾಗದ ರಸ್ತೆ ಹಾಗೂ ಸೇತುವೆ ಬಳಿ ಬಿರುಕು ಕಾಣಿಸಿಕೊಂಡಿದೆ.ಉದಲ್ಲದೇ ಸೂಫಾ ಡ್ಯಾಮ್ ನಲ್ಲಿ ನೀರು ಬಿಟ್ಟ ಹಿನ್ನೆಲೆಯಲ್ಲಿ ಕಾರವಾರ-ದಾಂಡೇಲಿ ರಸ್ತೆಯ ಸೇತುವೆ ಸಂಪೂರ್ಣ ಮುಳಗಿಹೋಗಿದ್ದು ಪ್ರವಾಹದ ಬೀತಿ ಎದುರಾಗಿದೆ.

ಡ್ಯಾಮ್ ಗೆ ಯಾವುದೇ ತೊಂದರೆ ಇಲ್ಲ

ಜಲಾಶಯ ದಿಂದ ನೀರು ಬಿಟ್ಟಿದ್ದರಿಂದ ಹೆಚ್ಚಿನ ಒತ್ತಡಕ್ಕೆ ಡ್ಯಾಮ್ ಕೆಳಭಾಗದ ರಸ್ತೆ ಬಿರುಕುಬಿಟ್ಟಿದು ಡ್ಯಾಮ್ ಗೆ ಇದರಿಂದ ಯಾವುದೇ ತೊಂದರೆ ಇಲ್ಲ ,ಡ್ಯಾಮ್ ಸುರಕ್ಷಿತವಾಗಿದ್ದು ಜನ ಹೆದರುವ ಅಗತ್ಯವಿಲ್ಲ ಎಂದು ಸೂಫಾ ಡ್ಯಾಮ್ ನ ಚೀಫ್ ಇಂಜಿನಿಯರ್ T.R ನಿಂಗಣ್ಣ ರವರು ಮಾಹಿತಿ ನೀಡಿದ್ದಾರೆ




Leave a Reply

Your email address will not be published. Required fields are marked *