ಸುವರ್ಣ ತ್ರಿಭುಜ ಬೋಟಿನ ಅವಶೇಷಗಳ ಚಿತ್ರ ಬಿಡುಗಡೆಗೊಳಿಸಿದ ನೌಕಾದಳ!

1022

ಕಾರವಾರ:- ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿದ್ದ ಅವಶೇಷಗಳ ಚಿತ್ರಗಳನ್ನು
ಭಾರತೀಯ ನೌಕಾಸೇನೆಯು ಇಂದು ಬಿಡುಗಡೆ ಗೊಳಿಸಿದೆ.

ಮಲ್ಪೆಯಿಂದ ಹೊರಟಿದ್ದ ಸುವರ್ಣ ತ್ರಿಭುಜ ಬೋಟ್ ಮಹಾರಾಷ್ಟ್ರದ ಮಾಲ್ವಾನ್‌ನ ಅರಬ್ಬೀ ಸಮುದ್ರದಲ್ಲಿ ಡಿಸೆಂಬರ್ ೧೬ ರಂದು ಮುಳುಗಡೆಯಾಗಿ ನಾಪತ್ತೆ ಯಾಗಿತ್ತು .ನಾಲ್ಕು ತಿಂಗಳ ಹುಡುಕಾಟದ ನಂತರ ಕೆಲ ದಿನಗಳ ಹಿಂದಷ್ಟೇ ಬೋಟಿನ ಅವಶೇಷ ನೌಕಾಸೇನೆ ಮಲ್ಪೆಯ ಮೀನುಗಾರರೊಂದಿಗೆ ತೆರಳಿ ಪತ್ತೆ ಹಚ್ಚಿತ್ತು.

ಮಲ್ಪೆ ಬಂದರಿನಿಂದ ಹೊರಟಿದ್ದ ಬೋಟ್ ನಲ್ಲಿ ಉತ್ತರಕನ್ನಡ ಜಿಲ್ಲೆಯ 5, ಉಡುಪಿಯ ಇಬ್ಬರು ಸೇರಿ 7 ಮಂದಿ ಮೀನುಗಾರಿಕೆಗೆ ತೆರಳಿದ್ದು ಎಲ್ಲರೂ ಬೋಟ್ ನಲ್ಲಿ ಜಲಸಮಾದಿಯಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದ್ದು ಅಧಿಕೃತವಾಗಿ ನೌಕಾದಳದವರು ಮಾಹಿತಿ ಹೊರಹಾಕಬೇಕಿದೆ.

ಬೋಟ್ ಗೆ ಡಿಕ್ಕಿ ಹೊಡೆದು ಅಪಘಾತ!

ಸುವರ್ಣ ತ್ರಿಭುಜಕ್ಕೆ ಹಡಗು ಡಿಕ್ಕಿ ಹೊಡೆದು ಅಪಘಾತ ವಾಗಿರುವುದು ಈಗಾಗಲೇ ಅಧಿಕೃತವಾಗಿದೆ.


ಯಾವ ಹಡಗು ಹೊಡೆದಿತ್ತು ಎನ್ನುವ ಪ್ರಶ್ನೆಗಳು ಎದ್ದಿದ್ದು ನೌಕಾದಳದ ಐ.ಎನ್.ಎಸ್ ಕೊಚ್ಚಿ ಹಡಗು ಹೊಡೆದಿರುವ ಶಂಕೆಯನ್ನು ಪುರಾವೆ ಸಹಿತ ಮೀನುಗಾರರು ನೀಡಿದ್ದಾರೆ.ಆದರೇ ಇದನ್ನು ಈವರೆಗೂ ನೌಕಾದಳದವರು ಅಧಿಕೃತವಾಗಿ ಪ್ರಕಟಣೆ ನೀಡಿಲ್ಲ. ಇದಲ್ಲದೇ ಬೋಟ್ ಮುಳಗಿರುವುದನ್ನು ದೃಡಪಡಿಸಿರುವ ನೌಕಾದಳದ ಏಳುಜನ ಮೀನುಗಾರರು ಬದುಕಿದ್ದಾರೆಯೇ ಅಥವಾ ಜಲಸಮಾಧಿಯಾಗಿದ್ದಾರೆಯೇ ಎಂಬುದನ್ನು ಕೂಡ ತಿಳಿಸಿಲ್ಲ. ಇದರ ಜೊತೆಗೆ ಸಮುದ್ರದಾಳದಲ್ಲಿ ಹೂತುಹೋಗಿರುವ ಬೋಟನ್ನು ಮೇಲೆತ್ತಬೇಕೆಂಬ ಆಗ್ರಹ ಮೀನುಗಾರರಿಂದ ಕೇಳಿಬಂದಿದ್ದು ಬೋಟನ್ನು ಹೊರಗೆ ತೆಗೆದರೆ ಸತ್ಯಾಂಶ ಹೊರಬರಲಿದೆ.
Leave a Reply

Your email address will not be published. Required fields are marked *

error: Content is protected !!