BREAKING NEWS
Search

ಶಿವಮೊಗ್ಗ ಜೈಲಿನಲ್ಲಿ ಬಂಧಿಯಾಗಲಿದ್ದಾರೆ ತಮಿಳುನಟ ವಿಜಯ್ ! ಏಕೆ ಗೊತ್ತಾ?

545

ಶಿವಮೊಗ್ಗ: ತಮಿಳು ಸುಪರ್ ಸ್ಟಾರ್ ವಿಜಯ್ ಗೂ ಶಿವಮೊಗ್ಗ ಜೈಲಿಗೂ ಏನು ಸಂಬಂಧ. ಅಷ್ಟಕ್ಕೂ ವಿಜಯ್ ರನ್ನು ತಮಿಳುನಾಡಿನಿಂದ ಶಿವಮೊಗ್ಗ ಜೈಲಿಗೆ ಏಕೆ ಕರೆ ತರುತಿದ್ದಾರೆ?,ಅವರು ಮಾಡಿದ ತಪ್ಪೇನು! ಅಂತ ನೀವು ಯೋಚಿಸ್ತಿದಿರಾ ಹಾಗಿದ್ರೆ ಈ ಸ್ಟೋರಿ ನೀವು ಓದಲೇ ಬೇಕು.

ತಮಿಳಿನ ಸೂಪರ್ ಸ್ಟಾರ್ ವಿಜಯ್ ಸದ್ಯ ಬಿಗಿಲ್ ಚಿತ್ರದ ಸಕ್ಸಸ್ ಖುಷಿಯಲ್ಲಿದ್ದಾರೆ.

ವಿಜಯ್ ಅವರ ಮುಂದಿನ ಸಿನಿಮಾದ ಬಗ್ಗೆ ಈಗಾಗಲೇ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹುಟ್ಟಿದೆ.

ಅದರಂತೆ ಸೂಪರ್ ಸ್ಟಾರ್ ನಟ ವಿಜಯ್ ಶಿವಮೊಗ್ಗದ ಜೈಲಿಗೆ ಸಿನಿಮಾ ಚಿತ್ರೀಕರಣಕ್ಕಾಗಿ ಬರುತ್ತಿದ್ದಾರೆ.

ಅರೇ ಇದೇನಪ್ಪಾ ವಿಜಯ್ ಏನಾದ್ರು ತಪ್ಪು ಮಾಡಿ ತಮಿಳುನಾಡಿನಿಂದ ಇಲ್ಲಿಗೆ ಕರೆತಂದ್ರ ಅಂತಾ ನೀವು ತಲೆ ಕೆಡಿಸಿಕೊಳ್ಳಬೇಡಿ ಅಂದಹಾಗೆ ಸೂಪರ್ ಸ್ಟಾರ್ ವಿಜಯ್ ಅವರ ಮುಂದಿನ ಸಿನಿಮಾ ದಳಪತಿ-64 ಸಿನಿಮಾದ ಶೂಟಿಂಗ್ ಗಾಗಿ ಶಿವಮೊಗ್ಗದ ಜೈಲಿಗೆ ಬರುತ್ತಿದ್ದಾರೆ.

ಶಿವಮೊಗ್ಗದ ಜೈಲು ಕೊರಿಯನ್ ಮಾದರಿ ಜೈಲಾಗಿದ್ದು, ರಾಜ್ಯದಲ್ಲಿಯೇ ಇದೊಂದು ವಿಶೇಷ ಕಾರಾಗೃಹವಾಗಿದೆ.

ಹೀಗಾಗಿ ಈ ಜೈಲಿನಲ್ಲಿ ಆಗ್ಗಾಗ್ಗೇ ಸಿನಿಮಾ ಶೂಟಿಂಗ್ ಗಳು ನಡೆಯುತ್ತಿರುತ್ತವೆ. ಅದರಂತೆ ವಿಲನ್ ಸಿನಿಮಾದಲ್ಲಿಯೂ ಶಿವಮೊಗ್ಗದ ಈ ನೂತನ ಜೈಲನ್ನು ಬಳಕೆ ಮಾಡಿಕೊಳ್ಳಲಾಗಿತ್ತು.

ಶಿವರಾಜ್ ಕುಮಾರ್ ಫೈಟಿಂಗ್ ನ ಸಾಹಸ ದೃಶ್ಯ ಇದೇ ಜೈಲಿನಲ್ಲಿ ಶೂಟಿಂಗ್ ನಡೆಸಲಾಗಿದ್ದು ಬಹುತೇಕ ಜನರಿಗೆ ತಿಳಿದಿಲ್ಲ.

ಇದೀಗ ವಿಜಯ್ ಅವರು ದಳಪತಿ ಸಿನಿಮಾ ಚಿತ್ರಿಕರಣ ಈಗಾಗಲೇ ಭರದಿಂದ ಸಾಗುತ್ತಿದ್ದು ಮೊದಲ ಹಂತದ ಶೂಟಿಂಗ್ ದೆಹಲಿಯಲ್ಲಿ ಮುಗಿಸಲಾಗಿದೆ.

ವಿಜಯ್ ಮತ್ತು ಚಿತ್ರೀಕರಣ ತಂಡ ಈಗ ಶಿವಮೊಗ್ಗದ ಕಡೆ ಹೊರಟ್ಟಿದ್ದಾರೆ.

ಶಿವಮೊಗ್ಗದ ಜೈಲಿನ ಸುತ್ತಮುತ್ತ ದಳಪತಿ-64 ಚಿತ್ರದ ಶೂಟಿಂಗ್ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತದ ಅನುಮತಿಯನ್ನು ಪಡೆದುಕೊಂಡಿದೆ.

ಇನ್ನು ದಳಪತಿ-64 ಸಿನಿಮಾ ಚಿತ್ರಿಕರಣಕ್ಕಾಗಿ, ಡಿಸೆಂಬರ್ 1 ರಿಂದ ಜನವರಿ 18ರ ವರೆಗೆ ಅನುಮತಿ ನೀಡಿದ್ದು ವಿಜಯ್ ಜೊತೆ ವಿಜಯ್ ಸೇತುಪತಿ ಕೂಡ ಈ ಚಿತ್ರಿಕರಣದಲ್ಲಿ ಕಾಣಸಿಕೊಳ್ಳಲಿದ್ದಾರೆ.




Leave a Reply

Your email address will not be published. Required fields are marked *