add

” ತುಳು ನಾಡಿನ ಹೆಮ್ಮೆಯ ಅರಸರ ಈ ಸಂಗತಿ ಗೊತ್ತಾ!?”

248

ಕಲೆ,ಸಂಸ್ಕೃತಿ ಎಂದೊಡನೆ ತಕ್ಷಣ ನೆನಪಾಗುವ ನಾಡೇ ತುಳುನಾಡು.ಸಾವಿರಾರು ವರ್ಷಗಳ ಸುದೀರ್ಘ ಚಾರಿತ್ರಿಕ ಹಿನ್ನೆಲೆಯ ತುಳುನಾಡು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನಾವರಿಸಿದೆ.

ಪರಶು ಸೃಷ್ಟಿಯ ಈ ಪ್ರದೇಶ ಪುಣ್ಯ ಭೂಮಿ,ಇತಿಹಾಸ ಕಾಲದಲ್ಲಿ ಈ ಪ್ರದೇಶವನ್ನು ಸಾಕಷ್ಟು ಅರಸುಮನೆತನಗಳು ಆಳ್ವಿಕೆ ಮಾಡಿದ್ದವು.

ಅವುಗಳಲ್ಲಿ ಅಗ್ರಸ್ಥಾನ ಪಡೆಯುವ ರಾಜ ಮನೆತನವೇ ‘ಅಳುಪರು’ ಇವರನ್ನು ‘ ಆಳುಪರು’ ಎಂದೂ ಕರೆಯುತ್ತಾರೆ.

ಇವರು ಸುಮಾರು ಏಳುನೂರು ವರ್ಷಗಳ ಕಾಲ ಆಳ್ವಿಕೆ ಮಾಡಿದ್ದರು. ( ಕ್ರಿ.ಶ ೬೬೩ ರಿಂದ ೧೩೩೩)ಇದು ತುಳುನಾಡಿನ ಆಳ್ವಿಕೆಯಲ್ಲಿ ಒಂದು ದಾಖಲೆ,ಏಳನೇ ಶತಮಾನದ ಒಂದನೇ ಆಳುಪರಸನಿಂದ ೧೫ ನೇ ಶತಮಾನದ ವೀರಪಾಂಡ್ಯನ ವರೆಗೆ ಮುವತ್ಮೂರು ಮಂದಿ ರಾಜರಾಣಿಯರ ಹೆಸರುಗಳು ಶಾಸನಗಳಿಂದ ತಿಳಿದುಬಂದಿದೆ.

ಕ್ರಿ.ಶ ೧೩೩೩ ರಲ್ಲಿ ಹೊಯ್ಸಳರು ಅಳುಪರ ಮೇಲೆ ಆಕ್ರಮಣ ಮಾಡಿದಾಗ ,
ಅಳುಪ ಅರಸ ಸೋಯಿದೇವ ಹೊಯ್ಸಳ ಮುಮ್ಮಡಿ ಬಲ್ಲಾಳನೊಡನೆ ರಾಜಿ ಮಾಡಿಕೊಳ್ಳುತ್ತಾನೆ.

ಸೋಯಿದೇವನ ಮಗಳು ಚಿಕ್ಕಾಯಿತಾಯಿಯನ್ನು ಮುಮ್ಮಡಿ ಬಲ್ಲಾಳ ಮದುವೆಯಾಗುತ್ತಾನೆ.

ಕ್ರಿ.ಶ ೯ ನೇ ಶತಮಾನದ ವರೆಗೆ ಮಂಗಳೂರು ( ಮಂಗಳಾಪುರ) ,೯ ರಿಂದ ೧೧ ನೇ ಶತಮಾನದ ವರೆಗೆ ಉದ್ಯಾವರ ( ಉದಯಪುರ),೧೧ ನೇ ಶತಮಾನದ ನಂತರ ಬಾರಕೂರು ( ಬಾರಹಕನ್ಯಾಪುರ) ಅಳುಪರ ರಾಜಧಾನಿಯಾಗಿದ್ದವು.

ಶೈವ ಮತಾವಲಂಬಿಗಳಾಗಿದ್ದ ಇವರು ತಮ್ಮ ಆಳ್ವಿಕೆಯ ಕಾಲದಲ್ಲಿ ನೂರಾರು ಶೈವ ದೇವಾಲಯಗಳನ್ನು ನಿರ್ಮಿಸಿದ್ದರು,ಜೊತೆಗೆ ನಾಥಪಂಥ,ಶಾಕ್ತ,ಗಾಣಪತ್ಯ,ಸಾಕಷ್ಟು ಜೈನ ಬಸದಿಗಳನ್ನೂ ನಿರ್ಮುಸಿದ್ದರು,ಕಲೆ, ಸಂಸ್ಕೃತಿ,ಧರ್ಮ,ವಾಸ್ತುಶಿಲ್ಪದ ಕ್ಷೇತ್ರಗಳಿಗೆ ಅಳುಪರದು ಅವಿಸ್ಮರಣೀಯ ಕೊಡುಗೆ ಎಂಬುದರಲ್ಲಿ ಸಂಶಯವಿಲ್ಲ.

ಲೇಖನ- ಲಕ್ಷ್ಮೀಶ್ ಸೋಂದಾ. ( ಇತಿಹಾಸಕಾರರು)




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ