03-11-2020-ಈ ದಿನದ ರಾಶಿಭವಿಷ್ಯ.

437

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ,
ಶರದ್ ಋತು, ನಿಜ ಆಶ್ವಯುಜ ಮಾಸ, ಕೃಷ್ಣಪಕ್ಷ,
ವಾರ: ಮಂಗಳವಾರ, ತಿಥಿ : ತೃತೀಯ, ನಕ್ಷತ್ರ:ರೋಹಿಣಿ,
ಯೋಗ: ಪರಿಘ, ಕರಣ: ವಣಿಜ
ರಾಹುಕಾಲ: 3.02 ರಿಂದ 4.30
ಗುಳಿಕಕಾಲ: 12.07 ರಿಂದ 1.35
ಯಮಗಂಡಕಾಲ: 9.12 ರಿಂದ 10.40.

ಮೇಷರಾಶಿ
ಚೆನ್ನಾಗಿದೆ, ಚಂದ್ರನಿಗೆ ಸ್ವಲ್ಪ ರಾಹು ತತ್ತ್ವ ವಿರುವುದರಿಂದ ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ ಥ್ರೋಟ್ ಇನ್ಫೆಕ್ಷನ್ ಡಸ್ಟ್ ಅಲರ್ಜಿ ಮುಂತಾದ ಇನ್ಫೆಕ್ಷನ್ ಗಳಾಗುವ ಸಂಭವವಿದೆ ಎಚ್ಚರಿಕೆ. 3ನೇ ವಯಸ್ಸಿನಿಂದ ಮೇಲ್ಪಟ್ಟವರೆಲ್ಲರೂ ಕೂಡ ಬ್ರಹ್ಮಶಂಕರ ವನ್ನು ಉಪಯೋಗಿಸಬಹುದು.

ವೃಷಭರಾಶಿ
ಚಂದ್ರ ರಾಹು ಜೊತೆಯಲ್ಲಿ ಸೇರಿರುವುದರಿಂದ ಸ್ವಲ್ಪ ಹುಳಿ ಭಾವವಿರುತ್ತದೆ. ಅನ್ಯಾಯ ಮಾರ್ಗದ ಕಡೆಗೆ ನಿಮ್ಮನ್ನು ಎಳೆದುಬಿಡುತ್ತದೆ ಎಚ್ಚರಿಕೆ.

ಮಿಥುನರಾಶಿ
ದಿಢೀರ್ ಪ್ರಯಾಣ ಪ್ರಯಾಣದಲ್ಲೊಂದು ಬಳಲಿಕೆ ಉಂಟಾಗುತ್ತದೆ . ದೂರದ ಊರಿನಲ್ಲಿ ಅಲ್ಲೊಂದು ಪ್ರಯಾಸದ ಕೆಲಸ ಕಾರ್ಯಗಳು ಆಗುತ್ತವೆ.

ಕರ್ಕಾಟಕರಾಶಿ
ಮಾಡುವ ಛಲ ಇದೆ ಆದರೆ ಯಾರೋ ಅದಕ್ಕೆ ಕೊಕ್ಕೆ ಹಾಕುತ್ತಾರೆ. ನಾವು ಸರಿಯಾಗಿ ಇದ್ದರೂ ಕೂಡ ಅದನ್ನು ಅಲ್ಲಗಳೆದು ನಿನ್ನ ಕೈಯಲ್ಲಿ ಆಗುವುದಿಲ್ಲ ಎಂದು ಹೇಳುವ ಮೂಲಕ ಹಾಳು ಮಾಡಿಬಿಡುತ್ತಾರೆ. ನನ್ನ ಕೈಯಲ್ಲಿ ಆಗುತ್ತದೆ ಎಂಬ ಭಾವವನ್ನು ಸದಾ ಇಟ್ಟುಕೊಳ್ಳಬೇಕು ಅದುವೇ ಅದಮ್ಯ ಚೇತನ್ಯ ಶಕ್ತಿ. ಅಹಂ ಬ್ರಹ್ಮಾಸ್ಮಿ ಎಂಬಂತೆ ಎಲ್ಲವೂ ನಮ್ಮ ಕೈಯಲ್ಲೇ ಇದೆ. ಮನಸ್ಸಿದ್ದರೆ ಮಾರ್ಗ ಎಂಬಂತೆ ಎಲ್ಲವೂ ಸಾಧ್ಯ.

ಸಿಂಹರಾಶಿ
ಎಕ್ಸ್ ಪೋರ್ಟ್, ಇಂಪೋರ್ಟ್, ಟ್ರಾವೆಲ್ಸ್, ಹುಳಿಗೆ ಸಂಬಂಧ ಪಟ್ಟಂಥ ವ್ಯವಹಾರ ಗಳಲ್ಲಿ ಇರುವಂತಹವರಿಗೆ ಅಭಿವೃದ್ಧಿ.

ಕನ್ಯಾರಾಶಿ
ತಿಂಡಿ ಪದಾರ್ಥ ಗಳಂಥ ಹೋಟೆಲ್ ವ್ಯವಹಾರಗಳನ್ನು ನಡೆಸುವ ಅಂಥವರಿಗೆ ಇಂದು ಸ್ವಲ್ಪ ಪ್ರಯಾಸದ ದಿನ ಪರಿಶ್ರಮದ ದಿನ. ಹಾಲು ಬೆಣ್ಣೆ ತುಪ್ಪ ಮೊಸರು ಸ್ವಲ್ಪ ಕಷ್ಟಕರ. ಮಧ್ಯಮ ವ್ಯಾಪಾರಿಗಳಿಗೆ ಸ್ವಲ್ಪ ಲಾಭಕರ.

ತುಲಾರಾಶಿ
ಉದ್ಯೋಗದಲ್ಲಿ ಪರಿಶ್ರಮದಿಂದ ಫಲವುಂಟು ಆದರೆ ಯಾರ ಹುಳಿಯಿಂಡಲು ಯತ್ನಿಸುತ್ತಾರೆ. ದುರ್ಗಾದೇವಿಗೆ ದೀಪವನ್ನು ಹಚ್ಚಿ ಹೋಗಿ. ಓಂ ದುಂ ದುರ್ಗಾಯೈ ನಮಃ ಎಂದು ಜೆಪಿಸಿ.

ವೃಶ್ಚಿಕರಾಶಿ
ಗೆಲುವು ಸೋಲು ಎರಡು ಕೂಡ ಉಂಟು. ಪರಿಶ್ರಮಕ್ಕೆ ತಕ್ಕಂತೆ ಫಲ ದೊರೆಯುತ್ತದೆ. ಸೋಲಿಗೆ ಕುಗ್ಗಬೇಡಿ ಗೆಲುವಿಗೆ ಹಿಗ್ಗಬೇಡಿ.

ಧನಸ್ಸುರಾಶಿ
ಆಕಸ್ಮಿಕವಾಗಿ ಧನಲಾಭ. ಆಕಸ್ಮಿಕವಾಗಿ ವೃತ್ತಿಯಲ್ಲಿಶುಭ ಸುದ್ದಿಯೊಂದನ್ನು ಕೇಳುವಿರಿ.
ಮುಂದೂಡುತ್ತಾ ಬಂದಿದ್ದ ಒಪ್ಪಂದಗಳು ಇತ್ಯರ್ಥವಾಗಲಿದೆ, ವಿದ್ಯಾರ್ಥಿಗಳಿಗೆ ಗೊಂದಲ, ಅಕಾಲ ಭೋಜನ.

ಮಕರರಾಶಿ
ಹಿರಿಯರೋರ್ವರ ಆಶೀರ್ವಾದದಿಂದ ಅಭಿವೃದ್ಧಿ. ಹಿರಿಯರ ಶಾಪಕ್ಕೆ ಗುರಿಯಾಗಬೇಡ ಮಾತಿಗೆ ಮಾತು ಕೊಟ್ಟು ಎದುರಾಡಬೇಡಿ.

ಕುಂಭರಾಶಿ
ಅಮ್ಮನ ಆರೋಗ್ಯದ ಕಡೆ ಗಮನಕೊಡಿ. ಅಮ್ಮನಂಥ ಅವರ ಆಶೀರ್ವಾದ ದೊರೆಯುತ್ತದೆ. ಕುಟುಂಬಕ್ಕೆ ಸಂಬಂಧಪಟ್ಟಂತೆ 1ಪುಟ್ಟ ಒತ್ತಡ ಕೂಡ ಉಂಟು. ಆಕಸ್ಮಿಕವಾಗಿ ದೈವ ದರ್ಶನ ದಿಂದ ಬಂದಿರುವ ಸಮಸ್ಯೆಗಳೆಲ್ಲ ದೂರವಾಗುತ್ತದೆ.

ಮೀನರಾಶಿ
ಧೈರ್ಯಂ ಸರ್ವತ್ರ ಸಾಧನಂ ಎಂಬಂತೆ ಧೈರ್ಯದಿಂದ ಮುಂದಕ್ಕೆ ಹೆಜ್ಜೆ ಇಡಿ. ಧೈರ್ಯದಿಂದ ಮಾಡುವ ಸಕಲ ಕೆಲಸ ಕಾರ್ಯಗಳಲ್ಲೂ ಅಭಿವದ್ಧಿ.

-ವಿದ್ವಾನ್ ತಿರುಮಲ ಶರ್ಮ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ