BREAKING NEWS
Search

06-01-2020ಇಂದಿನ ದಿನ ಭವಿಷ್ಯ

295

ಇಂದಿನ ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಸೋಮವಾರ, ಭರಣಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 8:11 ರಿಂದ 9:37
ಗುಳಿಕಕಾಲ: ಮಧ್ಯಾಹ್ನ 1:54 ರಿಂದ 3:20
ಯಮಗಂಡಕಾಲ: ಬೆಳಗ್ಗೆ 11:03 ರಿಂದ 12:29

ಮೇಷ: ಈ ದಿನ ಶುಭಫಲಗಳು ಅಲ್ಪ ಹೆಚ್ಚು, ಉದ್ಯೋಗದಲ್ಲಿ ಮನ್ನಣೆ, ಆರೋಗ್ಯದಲ್ಲಿ ಚೇತರಿಕೆ, ಅನ್ಯರಿಗೆ ಸಹಾಯ ಮಾಡುವಿರಿ,ವ್ಯಾಪಾರಿಗಳಿಗೆ ಲಾಭ, ದ್ರವ್ಯ ಲಾಭ ಮುಂತಾದ ಶುಭ ಫಲಗಳಿವೆ.

ವೃಷಭ:ಈ ದಿನ ಮಿಶ್ರ ಫಲ ನಿಮ್ಮದು ಉದ್ಯೋಗದಲ್ಲಿ ಮಧ್ಯಮ ತೃಪ್ತಿ,ವ್ಯವಹಾರದಲ್ಲಿ ಏರಿಳಿತ,ದೈಹಿಕ ನೋವು , ಶೀತ ಭಾದೆ,ಕುಟುಂಬ ದಲ್ಲಿ ನೆಮ್ಮದಿ,ಶತ್ರುಗಳ ನಾಶ,ಕೆಲಸ ಆಲಸ್ಯ,ಅತೀ ನಿದ್ರೆ.

ಮಿಥುನ: ಈ ದಿನ ಮಿಶ್ರ ಫಲ, ಕುಟುಂಬದಲ್ಲಿ ಆಗಾಗ ಕಿರಿಕಿರಿ,ಲಾಭ,ನಷ್ಟಗಳು ನಿಮ್ಮದಾಗಲಿದೆ, ಆರೋಗ್ಯ ಮಧ್ಯಮ,ಕೆಲಸ ಕಾರ್ಯದಲ್ಲಿ ನಿರಾಸಕ್ತಿ, ಇಚ್ಚಿಕ ಕಡಲಸದಲ್ಲಿ ಅಲ್ಪ ಪ್ರಗತಿ, ಮಹಿಳೆಯರಿಗೆ ಲಾಭ.

ಕಟಕ: ಆರೋಗ್ಯ ಮಧ್ಯಮ,ಶೀತ ,ಕೆಮ್ಮುಗಳ ಬಾದೆ, ನೌಕರರಿಗೆ ಅಲ್ಪ ನೆಮ್ಮದಿ, ದೂರ ಪ್ರಯಾಣ, ಇಷ್ಟವಾದ ವಸ್ತುಗಳ ಖರೀದಿ, ಇಲ್ಲ ಸಲ್ಲದ ಅಪವಾದ ದಿಂದ ಕೊರಗು,ವ್ಯಾಪಾರಿಗಳಿಗೆ ವ್ಯವಹಾರ ಏರಿಳಿತ,ಮಧ್ಯಮ ಅಶುಭ ಫಲ.

ಸಿಂಹ:ಹಿಡಿದ ಕೆಲಸ ನಿಧಾನ ಪ್ರಗತಿ, ಆರ್ಥಿಕ ಸಮಸ್ಯೆ ಮುಂದುವರೆಯುವುದು, ಅಧಿಕವಾದ ತಿರುಗಾಟ ದಿಂದ ಹಣ ಪ್ರಾಪ್ತಿ,ಅನಗತ್ಯ ಯೋಚನೆ, ಸ್ತ್ರೀಯರಿಗೆ ಲಾಭ, ಸರ್ಕಾರಿ ಕೆಲಸದಲ್ಲಿ ಜಯ, ಉದ್ಯಮಿಗಳಿಗೆ ಅನುಕೂಲ ಮುಂತಾದ ಮಿಶ್ರ ಫಲ ನಿಮ್ಮದು.

ಕನ್ಯಾ:ಹಿಡಿದ ಕೆಲಸಗಳು ನಿಧಾನ ಪ್ರಗತಿ, ವ್ಯಾಪಾರದಲ್ಲಿ ಏರಿಳಿತ,ಆರೋಗ್ಯ ಮಧ್ಯಮ,ಶಿರ ಕಫ ಬಾದೆ, ಸಹೋದರರಿಂದ ಸಹಾಯ, ನೆಮ್ಮದಿ ಇಲ್ಲದ ಜೀವನ, ಮನಸ್ಸಿನಲ್ಲಿ ಗೊಂದಲ ವಿಶ್ರ ಫಲ.

ತುಲಾ: ಆರೋಗ್ಯದ ಕಡೆ ಗಮನವಿರಲಿ, ವ್ಯವಹಾರದಲ್ಲಿ ಯಾರನ್ನೂ ಹೆಚ್ಚು ನಂಬಬೇಡಿ, ಅನಿರೀಕ್ಷಿತ ದ್ರವ್ಯ ಲಾಭ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ವ್ಯವಹಾರಗಳಲ್ಲಿ ಎಚ್ಚರಿಕೆ,ಅಧಿಕ ಆಯಾಸ ,ಮಧ್ಯಾನದ ವೇಳೆ ನಿರಾಸಕ್ತಿ.

ವೃಶ್ಚಿಕ:ದೇಹಾಲಸ್ಯ, ಅಪರಿಚಿತರಿಂದ ಕಲಹ, ಆರೋಗ್ಯದಲ್ಲಿ ವ್ಯತ್ಯಾಸ, ಮಾತಿನಲ್ಲಿ ಹಿಡಿತವಿರಲಿ, ಮಹಿಳೆಯರಿಗೆ ವಿಶೇಷ ಲಾಭ, ಈ ದಿನ ಮಿಶ್ರ ಫಲ.

ಧನಸ್ಸು:ಈ ದಿನ ಮಿಶ್ರ ಫಲ ಇದ್ದು ದಿನದ ಮಧ್ಯಭಾಗ ಶುಭ, ಕುಟುಂಬದ ಹೊರೆ ಹೆಚ್ಚಾಗುವುದು, ಅನ್ಯ ಜನರಲ್ಲಿ ವೈಮನಸ್ಸು, ಶತ್ರುಗಳ ಬಾಧೆ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.

ಮಕರ: ಸ್ವಯಂಕೃತ ಅಪರಾಧದಿಂದ ಸಂಕಷ್ಟ, ವಿಪರೀತ ಹಣವ್ಯಯ, ಆರೋಗ್ಯದಲ್ಲಿ ವ್ಯತ್ಯಾಸ, ಅತಿಯಾದ ನಿದ್ರೆ, ಅಪರಿಚಿತರಿಂದ ಕಲಹವಾಗುವ ಸಾಧ್ಯತೆ.

ಕುಂಭ:ಈ ದಿನ ಮಿಶ್ರ ಫಲ ಹೆಚ್ಚು ಪ್ರಿಯ ಜನರ ಭೇಟಿ, ಸ್ತ್ರೀಯರಿಗೆ ಅನುಕೂಲ, ಆಂತರಿಕ ಕಲಹ, ಮಾನಸಿಕ ವ್ಯಥೆ, ಆತ್ಮೀಯರ ಜೊತೆ ಸಂಕಷ್ಟ ಹೇಳಿಕೊಳ್ಳುವಿರಿ.

ಮೀನ: ಈ ದಿನ ಮಧ್ಯಮ ಶುಭ ಫಲ,ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ದೂರ ಪ್ರಯಾಣ, ವಾಸಗೃಹದಲ್ಲಿ ತೊಂದರೆ, ಆತ್ಮೀಯರ ವಿಚಾರಗಳಲ್ಲಿ ಮನಃಸ್ತಾಪ,ವ್ಯಾಪಾರದಲ್ಲಿ ಮಧ್ಯಮ ಲಾಭ,ಹಣಕಾಸು ಮುಗ್ಗಟ್ಟಿನಿಂದ ಅಲ್ಪ ಬೇತರಿಕೆ.




Leave a Reply

Your email address will not be published. Required fields are marked *