BREAKING NEWS
Search

ಬುಧವಾರದ ದಿನ ಭವಿಷ್ಯ.

178

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಕೃಷ್ಣಪಕ್ಷ
ವಾರ: ಬುಧವಾರ, ತಿಥಿ: ನವಮಿ,
ನಕ್ಷತ್ರ: ಉತ್ತರ,
ರಾಹು ಕಾಲ: 12.16 ರಿಂದ 1.42
ಗುಳಿಕ ಕಾಲ: 10.50 ರಿಂದ 12.16
ಯಮಗಂಡ ಕಾಲ: 7.58 ರಿಂದ 9.24.

ಮೇಷರಾಶಿ
ಆರೋಗ್ಯ ಸಮಸ್ಯೆ ಕಾಡಲಿದೆ,ದೂರ ಸಂಚಾರದಲ್ಲಿ ಜಾಗೃತೆವಹಿಸಿ, ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಪತಿ ಪತ್ನಿಯರಲ್ಲಿ ಸಂತೋಷ, ಶತ್ರು ಭಾದೆ, ಕುಟುಂಬ ಸೌಖ್ಯ,ವ್ಯಾಪಾರದಲ್ಲಿ ಮಧ್ಯಮ ಪ್ರಗತಿ.

ವೃಷಭರಾಶಿ

ಈ ದಿನ ಮಿಶ್ರ ಫಲ,ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಉದ್ಯೋಗದಲ್ಲಿ ಕಿರಿ-ಕಿರಿ, ಚಂಚಲ ಮನಸ್ಸು, ಅಕಾಲ ಭೋಜನ, ಪ್ರವಾಸ, ಯಾತ್ರೆಯಿಂದ ಮಾನಸಿಕ ನೆಮ್ಮದಿ, ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿದೆ, ಮನಕ್ಲೇಷ, ಸಾಲದಿಂದ ಮುಕ್ತಿ.

ಮಿಥುನರಾಶಿ
ಎಲ್ಲಾ ವಿಚಾರಗಳಲ್ಲಿಯೂ ಜಾಗೃತೆ ವಹಿಸಿ, ಪ್ರಯತ್ನ ಬಲದಿಂದ ಕಾರ್ಯಸಾಧನೆಯಾಗಲಿದೆ, ಹೊಸ ಯೋಜನೆಯೊಂದು ಕಾರ್ಯರೂಪಕ್ಕೆ ಬರಲಿದೆ, ಯತ್ನ ಕಾರ್ಯಗಳಲ್ಲಿ ಜಯ, ಸ್ತ್ರೀಯರಿಗೆ ಆಭರಣ ಪ್ರಾಪ್ತಿ, ಭೂಲಾಭ, ಬಂಧುಗಳ ಆಗಮನ, ಪುಣ್ಯಕ್ಷೇತ್ರ ದರ್ಶನ.

ಕಟಕರಾಶಿ
ದಾಯಾದಿ ಕಲಹ, ಮಾನಸಿಕ ಕಿರಿಕಿರಿ, ತಾಳ್ಮೆ ಇರಲಿ, ವಿದ್ಯಾರ್ಥಿಗಳಿಗೆ ದೂರ ಪ್ರಯಾಣ ಯೋಗ, ಸ್ವ ಉದ್ಯೋಗ ಮಾಡುವವರಿಗೆ ಕ್ಷೇತ್ರ ವಿಸ್ತರಣೆಯ ಅವಕಾಶ, ಸ್ಥಳ ಬದಲಾವಣೆ, ವಿದ್ಯೆಗಳಲ್ಲಿ ಆಸಕ್ತಿ, ವಿಪರೀತ ಖರ್ಚು, ರಿಯಲ್ ಎಸ್ಟೇಟ್ ನವರಿಗೆ ಲಾಭ.

ಸಿಂಹರಾಶಿ
ಆರೋಗ್ಯದ ಬಗ್ಗೆ ಕಾಳಜಿವಹಿಸಿ, ವಿಶ್ವಾಸ ದುರುಪಯೋಗವಾಗದಂತೆ ಎಚ್ಚರವಹಿಸಿ, ರಾಜಕೀಯ ವರ್ಗದಲ್ಲಿ ಸ್ಥಾನಮಾನ, ಹೊಸ ಯೋಜನೆಗಳಿಗೆ ಧನ ವಿನಿಯೋಗ, ವ್ಯಾಪಾರ-ವ್ಯವಹಾರಗಳಲ್ಲಿ ಅಧಿಕ ಲಾಭ, ವಿವಾಹ ಯೋಗ, ಅಲ್ಪ ಆದಾಯ, ದೇವತಾ ಕಾರ್ಯಗಳಲ್ಲಿ ಭಾಗಿ.

ಕನ್ಯಾರಾಶಿ
ಅನಾವಶ್ಯಕ ಖರ್ಚು ವೆಚ್ಚಗಳು ಎದುರಾಗಲಿದೆ, ಕಾರ್ಯಕ್ಷೇತ್ರಗಳಲ್ಲಿ ಹಲವರಿಂದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ, ಗಂಭೀರ ಸ್ವಭಾವ ಅಚ್ಚರಿಯನ್ನ ತರಲಿದೆ, ವಾದ-ವಿವಾದಗಳಲ್ಲಿ ಜಯ, ಪ್ರಭಾವಿ ವ್ಯಕ್ತಿಗಳ ಭೇಟಿ, ಮನಶಾಂತಿ, ಸಮಾಜದಲ್ಲಿ ಗೌರವ.ಹಿತ ಶತ್ರು ಕಾಟ.

ತುಲಾರಾಶಿ
ಅಲ್ಪ ಕಾರ್ಯಸಿದ್ಧಿ, ಮಿತ್ರರಿಂದ ತೊಂದರೆ, ಲಾಭ ಸ್ಥಾನದ ಶುಕ್ರ ನಿಮ್ಮ ಚಿಂತನೆಗೆ ಸಾಧಕನಾಗುವನು, ಆರೋಗ್ಯದಲ್ಲಿ ಪಿತ್ತ, ಉಷ್ಣ ಸಮಸ್ಯೆ, ಮಕ್ಕಳೊಂದಿಗೆ ವಿರಸ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಹಿನ್ನಡೆ, ಮನಸ್ಸಿನಲ್ಲಿ ಭಯ ಭೀತಿ, ಯಾರನ್ನು ಹೆಚ್ಚಾಗಿ ನಂಬಬೇಡಿ.

ವೃಶ್ಚಿಕರಾಶಿ
ಸಾಂಸಾರಿಕವಾಗಿ ಸುಖದ ದಿನ, ಖರ್ಚಿನ ಬಗ್ಗೆ ಗಮನವಿರಲಿ, ದೃಢ ನಿರ್ಧಾರ ನಿಮಗೆ ಯಶಸ್ಸನ್ನು ತಂದುಕೊಡಲಿದೆ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ಮಾತಿನ ಚಕಮಕಿ, ಹಿತಶತ್ರುಗಳಿಂದ ತೊಂದರೆ, ದಿನಾಂತ್ಯಕ್ಕೆ ಶುಭ ಸುದ್ದಿಯನ್ನು ಕೇಳುವಿರಿ.

ಧನಸ್ಸುರಾಶಿ
ಧಾರ್ಮಿಕ ಕ್ಷೇತ್ರಗಳ ಭೇಟಿ, ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಿದೆ, ಹೊಸ ಕಾರ್ಯಗಳಲ್ಲಿ ಯಶಸ್ಸು, ಬಂಧುಗಳ ಆಗಮನದಿಂದ ಸಮಸ್ಯೆಯೊಂದು ತಲೆದೋರಲಿದೆ, ಪೂಜಾ ಕಾರ್ಯಗಳಲ್ಲಿ ಭಾಗಿ, ಎಷ್ಟೇ ಕಷ್ಟ ಬಂದರೂ ಮುನ್ನುಗ್ಗುವ ಚೈತನ್ಯ, ದಾಂಪತ್ಯದಲ್ಲಿ ಸಮರಸ.

ಮಕರರಾಶಿ
ಯೋಗ್ಯ ವಯಸ್ಕರಿಗೆ ಕಂಕಣಬಲ ಕೂಡಿಬರಲಿದೆ, ವ್ಯಾಪಾರ, ವ್ಯವಹಾರದಲ್ಲಿ ನಷ್ಟ ಉಂಟಾಗದಂತೆ ಎಚ್ಚರವಹಿಸಿ, ಆದಾಯ ಹೆಚ್ಚಳವಾಗಿದ್ದರೂ ಕೂಡ ಖರ್ಚು ಅಧಿಕವಾಗಲಿದೆ, ದುರಾಲೋಚನೆ, ದುಷ್ಟ ಚಿಂತೆ, ಹೇಳಿಕೆ ಮಾತನ್ನು ಕೇಳುವ ಸಂಭವ, ಚಂಚಲ ಮನಸ್ಸು, ಅನಾರೋಗ್ಯ.

ಕುಂಭರಾಶಿ
ದೇವತಾ ಕಾರ್ಯಗಳಿಗೆ ಇದು ಸಕಾಲ, ವಿದ್ಯಾಭ್ಯಾಸದಲ್ಲಿ ಕೊರತೆ, ಹಿನ್ನೆಡೆಗೆ ಕಾರಣವಾಗಲಿದೆ, ಎಚ್ಚರಿಕೆಯಿಂದ ನಡೆದುಕೊಂಡಲ್ಲಿ ಕೋರ್ಟು, ಕಚೇರಿ ಕಾರ್ಯಗಳಲ್ಲಿ ಯಶಸ್ಸು ಲಭಿಸುವುದು, ದೇವತಾ ಕಾರ್ಯಗಳನ್ನು ನಡೆಸಲು ಇದು ಸಕಾಲ, ಗುರುಗಳ ಭೇಟಿ ಮಾಡುವ ಸಾಧ್ಯತೆ, ಧನಲಾಭ, ನಂಬಿಕೆ ದ್ರೋಹ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ಮೀನರಾಶಿ
ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿ ಸಿಗಲಿದೆ, ಅಕ್ರಮ ವ್ಯವಹಾರ ಬೆಳಕಿಗೆ ಬಂದು ಮಾನಹಾನಿಯಾಗಲಿದೆ, ಧನಾಗಮನವಿದ್ದರೂ ಖರ್ಚು ಅಧಿಕವಾಗಲಿದೆ, ತಾಳ್ಮೆಯಿಂದ ವರ್ತಿಸಿ, ಅಮೂಲ್ಯ ವಸ್ತುಗಳ ಖರೀದಿ, ವಿಪರೀತ ಖರ್ಚು, ಆದಾಯಕ್ಕಿಂತ ಖರ್ಚು ಜಾಸ್ತಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ