Astrology

13-03-2021 ಇಂದಿನ ದಿನ ಭವಿಷ್ಯ|astrology

546

ನಿತ್ಯಪಂಚಾಂಗ- 13-03-2021

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1942
ಸಂವತ್ಸರ : ಶಾರ್ವರಿ
ಅಯನ : ಉತ್ತರಾಯಣ
ಋತು : ಶಿಶಿರ
ಸೌರಮಾಸ: ಕುಂಭ 29 ಚ,ಮಾಸ : ಮಾಘ
ಪಕ್ಷ: ಕೃಷ್ಣ

ತಿಥಿ: ಅಮಾವಾಸ್ಯೆ (೨೨:೫೦) 03:50pm
ಚಂದ್ರನಕ್ಷತ್ರ: ಪೂರ್ವಾಭದ್ರ (೪೪:೦೭) 12:21am

ರವಿನಕ್ಷತ್ರ : ಪೂರ್ವಾಭದ್ರ
ಯೋಗ: ಸಾಧ್ಯ
ಕರಣ: ನಾಗವಾನ್
ವಾರ: ಶನಿವಾರ
ಸೂರ್ಯೋದಯ: 06:42am
ಸೂರ್ಯಾಸ್ತ: 06:41pm
ರಾಹುಕಾಲ:09:40-11:11am

ಮೇಷ : ಆರ್ಥಿಕ ಸಂಕಷ್ಟ , ಅಧಿಕ ಕರ್ಚು, ವ್ಯವಹಾರದಲ್ಲಿ ನಿಧಾನ ಪ್ರಗತಿ,ಕುಟುಂಬದಲ್ಲಿ ನೆಮ್ಮದಿ,ಆರೋಗ್ಯ ಉತ್ತಮ , ಸ್ನೇಹಿತರಿಂದ ಸಹಕಾರ,ನೌಕರರಿಗೆ ಒತ್ತಡ.

ವೃಷಭ :ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ,ಆರೋಗ್ಯ ಸುಧಾರಣೆ, ಬಂಧುಗಳಿಂದ ಆರ್ಥಿಕ ಸಹಾಯ, ನೆರೆ ಹೊರೆಯವರೊಂದಿಗೆ ಕಲಹ,ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ.

ಮಿಥುನ : ಅಧಿಕ ಕರ್ಚು, ವ್ಯಾಪಾರದಲ್ಲಿ ಏರಿಳಿತ,ಉದ್ಯೋಗ ಬದಲಾವಣೆ ಮಾಡುವ ಸನ್ನಿವೇಶ,ವ್ಯವಹಾರಗಳಲ್ಲಿ ಗೊಂದಲ, ಹಣದ ಕರ್ಚು, ಹೊಸ ಕಾರ್ಯದಲ್ಲಿ ನಿಧಾನ ಪ್ರಗತಿ.

ಕಟಕ : ಈ ದಿನ ಮಿಶ್ರ ಫಲ,ವಿದ್ಯಾಭ್ಯಾಸದಲ್ಲಿ ತೊಡಕು, ಆರ್ಥಿಕವಾಗಿ ಮೋಸ, ವ್ಯಾಪಾರದಲ್ಲಿ ನಷ್ಟ,ಕುಲದೇವತಾ ನಾಮಸ್ಮರಣೆ ಯಿಂದ ನೆಮ್ಮದಿ,

ಸಿಂಹ : ವ್ಯಾಪಾರದಲ್ಲಿ ತೊಂದರೆ,ಅಧಿಕ ಒತ್ತಡ, ಕುಟುಂಬದಿಂದ ಕಿರಿಕಿರಿ, ತಾಯಿ ಆರೋಗ್ಯದಲ್ಲಿ ಏರುಪೇರು, ಮಿತ್ರರಿಂದ ಆಕಸ್ಮಿಕ ನಷ್ಟ, ಉದ್ಯೋಗಿಗಳಿಗೆ ಮೇಲಾಧಿಕಾರಿಯಿಂದವಕಿರಿಕಿರಿ, ಕಾರ್ಯ ವಿಘ್ನ, ಹಣ ಕರ್ಚು.

ಕನ್ಯಾ : ದುಶ್ಚಟದಿಂದ ಹಣದ ಅಧಿಕ ಕರ್ಚು, ಕುಟುಂಬ ಸೌಖ್ಯ,ಉದ್ಯೋಗದಲ್ಲಿ ಲಾಭ, ಪಾಲುದಾರಿಕೆಯಲ್ಲಿ ಲಾಭ, ಆರೋಗ್ಯ ದಲ್ಲಿ ಬದಲಾವಣೆ, ವಾಯು ಭಾದೆ, ಅಧಿಕ ನಿದ್ರೆ, ಕಫ ಭಾದೆ.

ತುಲಾ : ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಿತ್ರರು ಶತ್ರುಗಳಾಗಿ ಪರಿವರ್ತನೆ, ಸ್ವಯಂಕೃತ ಅಪರಾಧ, ಆತುರದಿಂದ ಸಮಸ್ಯೆ, ಮಿಶ್ರ ಫಲ.

ವೃಶ್ಚಿಕ: ಅಧಿಕ ಕರ್ಚು,ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕುಟುಂಬ ಕಲಹ, ಮನೋವೇಧನೆ, ಸ್ನೇಹಿತರ ಸಹಕಾರ,ಪ್ರಯಾಣದಲ್ಲಿ ಅಡೆತಡೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ,ಮಧ್ಯಮ ಪ್ರಗತಿ.

ಧನಸ್ಸು : ಸ್ವಯಂಕೃತ ಅಪರಾಧಗಳಿಂದ ಕಾರ್ಯ ಹಾನಿ, ಬೇಜವಾಬ್ದಾರಿತನ ನಡವಳಿಕೆ, ಆರೋಗ್ಯ ಸಮಸ್ಯೆಗಳಿಂದ ಆತಂಕ, ವ್ಯಾಪಾರಿಗಳಿಗೆ ಶ್ರಮಕ್ಕೆ ತಕ್ಕ ಫಲ,ಕಫ ,ವಾತ ಭಾದೆ.

ಮಕರ :ಈ ದಿನ ಮಿಶ್ರ ಫಲ, ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕ ಧನಾಗಮನ, ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಅವಕಾಶ, ಹೊಸ ಕೆಲಸಕ್ಕೆ ಕೈ ಹಾಕುವಿರಿ, ಕುಟುಂಬ ಸೌಖ್ಯ.

ಕುಂಭ : ಕುಟುಂದಲ್ಲಿ ಬೇಸರ, ಅನಗತ್ಯ ಮಾತಿನಿಂದ ಸಮಸ್ಯೆ, ಸಾಲದ ಚಿಂತೆಗಳು ಅಧಿಕ, ಮಧ್ಯಮ ಪ್ರಗತಿ, ಅಧಿಕ ಕರ್ಚು, ಹೊಸ ಕಾರ್ಯ ವಿಘ್ನ, ಆರೋಗ್ಯ ಉತ್ತಮ.

ಮೀನ : ವ್ಯಾಪಾರಿಗಳಿಗೆ ಪ್ರಗತಿ, ನಿದ್ರಾಭಂಗ, ಹೊಸ ಕಾರ್ಯ ಸಾಧನೆಗೆ ಶ್ರಮ, ಉದ್ಯೋಗ ಸ್ಥಳದಲ್ಲಿ ಉತ್ತಮ ಹೆಸರು, ಆರೋಗ್ಯ ಸುಧಾರಣೆ, ಕಫ,ಶೀತ ಬಾದೆ ಆಗಾಗ ಕಾಡುವುದು.

ಯಾವ ಉದ್ಯೋಗದಲ್ಲಿ ಲಾಭ !

ಈ ದಿನ ಮೀನುಗಾರಿಕೆ ಉದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಫಲ ಸಿಗುವುದು. ಸಮುದ್ರದಾಳದಲ್ಲಿ ಉತ್ತಮ ಮೀನುಗಳು ದೊರಕುವುದು. ಮೀನುವ್ಯಾಪಾರಿಗಳಿಗೆ ಲಾಭ , ತರಕಾರಿ ವ್ಯಾಪಾರಿಗಳಿಗೆ,ಅಡಿಕೆ ವ್ಯಾಪಾರಿಗಳಿಗೆ , ದಿನಸಿ ಪದಾರ್ಥ, ಹೋಟಲ್ ವ್ಯಾಪಾರಿಗಳಿಗೆ ಲಾಭ ದೊರೆಯಲಿದೆ.

ಕೃಷಿಕರಿಗೆ ನಷ್ಟ, ಭತ್ತ , ಜೊಳ ,ರಾಗಿ ವಸ್ತುಗಳು ನಷ್ಟ ಹೊಂದಲಿದೆ. ಸುಂಟಿ , ಕಾಳುಮೆಣಸು,ಸಾಂಬಾರು ಪದಾರ್ಥ ಗಳಿಗೆ ಲಾಭ ಸಿಗಲಿದೆ.

ಹವಾಮಾನ ಹೇಗಿರಲಿದೆ?

ಅಧಿಕ ಉಷ್ಣತೆ, ಕರಾವಳಿ ,ಉತ್ತರ ಕರ್ನಾಟಕ ಭಾಗದಲ್ಲಿ ತಾಪಮಾನ ಏರಲಿದೆ. ಮಲೆನಾಡು ಭಾಗದಲ್ಲಿ ಅಕಾಲಿಕ ಮಳೆ ಮುಂದುವರೆಯಲಿದೆ ಇದರಿಂದ ತೋಟಗಾರಿಕಾ ಬೆಳೆಗಳು ಹಾನಿ, ಹುಳು ಭಾದೆ ನಷ್ಟ ಉಂಟಾಗಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ