20-03-2021 ಇಂದಿನ ದಿನ ಭವಿಷ್ಯ|Astrology

289

ಸದಾಶಿವಸಮಾರಂಭಾಂ ಶಂಕರಾಚಾರ್ಯಮಧ್ಯಮಾಮ್
ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರು ಪರಂಪರಾಮ್ ||

ಶ್ರೀಮತ್ಸ್ವರ್ಣಲತಾ ಮಠೇತಿ ಮಹಿತೇ ಪೀಠಾಂಚಿತಸ್ಸದ್ಗುರುಃ |
ಸಿದ್ಧಶ್ಶಿಷ್ಯಜನಾನುರಾಗನಿಲಯಃ ಸನ್ಮಾರ್ಗದಶ್ಶಂಕರಃ ||
ಶ್ರೀಚಕ್ರಾರ್ಚನತತ್ಪರಃ ಶ್ರಿತಜನೋದ್ಧಾರಾಯ ಬದ್ಧಾದರಃ |
ಸರ್ವಜ್ಞೇಂದ್ರ ಸರಸ್ವತೀ ಯತಿವರಃ ಪಾಯಾದಪಾಯಾತ್ಸದಾ ||

ಶ್ರೀಮದ್ಗಂಗಾಧರೇಂದ್ರಾಯಶಿಷ್ಯಾವನ ರತಾಯ ಚ |
ಬುದ್ಧಿಪ್ರದಾಯ ಗುರವೇ ಜ್ಞಾನರೂಪಾಯ ತೇ ನಮಃ ||


ಸಂವತ್ಸರ : ಶಾರ್ವರಿ
ಋತು : ಶಿಶಿರ
ಮಾಸ : ಫಾಲ್ಗುಣ
ಪಕ್ಷ : ಶುಕ್ಲ
ತಿಥಿ : ಸಪ್ತಮಿ
ನಕ್ಷತ್ರ : ರೋಹಿಣಿ
ವಾರ : ಶನಿವಾರ
ರಾಹುಕಾಲ:09:38-11:09am

ಮೇಷರಾಶಿ
ಕೆಲಸ ಕಾರ್ಯ ದಲ್ಲಿ ಅಡೆತಡೆ, ಬಂಧು ವರ್ಗದಲ್ಲಿ ನಕಾರಾತ್ಮಕ ಚಿಂತನೆ ಯಿಂದ ಅವಹೇಳನ, ಕುಟಂಬ ಸೌಖ್ಯ, ದುಂದುವೆಚ್ಚ, ಅಧಿಕ ಕರ್ಚು ,ಸಂಕಷ್ಟಗಳ ಪರಿಹಾರಕ್ಕಾಗಿ ಅಲೆದಾಡಬೇಕಾದ ಸಂಭವವಿದೆ.
ಅದೃಷ್ಟ ಸಂಖ್ಯೆ : 7

ವೃಷಭರಾಶಿ
ಅಧಿಕ ಮಾತಿನಿಂದ ಕಲಹ, ಅನಾವಶ್ಯಕ ವಾಗ್ವಾದ ಉಂಟಾಗುವ ಸಂಭವ, ಆರ್ಥಿಕ ಸ್ಥಿತಿ ಸುಧಾರಿಸುವುದು ,ಆರೋಗ್ಯ ಸುಧಾರಣೆ,ಕುಟುಂಬ ಸೌಖ್ಯ, ಹೊಸ ಕಾರ್ಯ ದಲ್ಲಿ ಸಫಲ,
ಅದೃಷ್ಟ ಸಂಖ್ಯೆ : 1

ಮಿಥುನರಾಶಿ
ಆರೋಗ್ಯ ಸಮಸ್ಯೆ ,ಉದರಬೇನೆ ,ಶೀತ ಭಾದೆ,ಆರೋಗ್ಯದ ಕಾಳಜಿವಹಿಸಿ. ಬಂಧುಮಿತ್ರರ ಭೇಟಿ, ಮನೆಯಲ್ಲಿ ಮಂಗಳ ಕಾರ್ಯ ಜರುಗಲಿದೆ , ವ್ಯಾಪಾರಿಗಳಿಗೆ ಹಾಗೂ ನೌಕರರಿಗೆ ಒತ್ತಡ ,ಕೋರ್ಟ್ ನಲ್ಲಿರುವ ವ್ಯಾಜ್ಯಗಳು ಕೊನೆಗೊಳ್ಳುವವು.
‌‌ಅದೃಷ್ಟ ಸಂಖ್ಯೆ : 3

ಕರ್ಕಾಟಕರಾಶಿ
ನಿಧಾನಗತಿಯಲ್ಲಿ ಕಾರ್ಯಸಿದ್ಧಿ,ಮಕ್ಕಳಲ್ಲಿ ಹೊಸಹುರುಪು ಕಂಡು ಬರುವುದು. ವ್ಯಾಪಾರಿಗಳಿಗೆ ಮಧ್ಯಮಫಲ.ಸರ್ಕಾರಿ ನೌಕರರಿಗೆ ಅಧಿಕ ಕೆಲಸ ಒತ್ತಡ, ಸೀಮಿತ ಆದಾಯ,ಶ್ರಮಕ್ಕೆ ಫಲ ಕಡಿವೆ,ಅಧಿಕ ಕರ್ಚು.
ಅದೃಷ್ಟ ಸಂಖ್ಯೆ : 6

ಸಿಂಹರಾಶಿ
ಕುಟುಂಬ ಸೌಖ್ಯ, ಆಧಾಯಕ್ಕಿಂತ ಅಧಿಕ ಕರ್ಚು, ಕಾರ್ಯ ವಿಳಂಭ , ನೂತನ ಮಿತ್ರಭೇಟಿ, ಅರ್ಥಾರ್ಜನೆಯು ಉತ್ತಮವಿದೆ. ಆದರೂ ಗೃಹಕಲಹ, ಬಂಧು ಜನರಲ್ಲಿ ಅಸಮಾಧಾನ ಕಂಡುಬರುವುದು,ಈ ದಿನ ಬಮಗಾರದ ವ್ಯಾಪಾರಿಗಳಿಗೆ ಲಾಭ ಇರದು,ಉದ್ಯೋಗಿಗಳಿಗೆ ಅಧಿಕ ಶ್ರಮ,ಆರೋಗ್ಯ ಮಧ್ಯಮ.
ಅದೃಷ್ಟ ಸಂಖ್ಯೆ : 4

ಕನ್ಯಾರಾಶಿ
ವ್ಯಾಪಾರದಲ್ಲಿ ಅಭಿವೃದ್ಧಿಯಾಗುವುದು. ಆರ್ಥಿಕ ಸಂಕಷ್ಟಗಳು ಪರಿಹಾರವಾಗುವುದು. ಮಹಿಳೆಯರಿಗೆ ಹೆಚ್ಚಿನ ಉನ್ನತಿ ಕಂಡುಬರುವುದು. ಅನಾವಶ್ಯಕ ಖರ್ಚು , ಕಫ, ತಲೆನೋವು ಸುಸ್ತು ಬಾಧೆ.ಸಮಾಜದಲ್ಲಿ ಗೌರವ ಪ್ರಾಪ್ತಿ.
ಅದೃಷ್ಟ ಸಂಖ್ಯೆ : 8

ತುಲಾರಾಶಿ
ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯ ಪ್ರವೃತ್ತಿಯು ಉತ್ತಮ ಫಲಕೊಡುವುದು. ಹಳೆಯ ಬಾಕಿ ವಸೂಲಾಗುವುದು. ವ್ಯಾಜ್ಯಗಳು ಅಂತ್ಯಕಾಣುವವು. ಗ್ರಹ ಸೌಖ್ಯವಿರುವುದು.
ಅದೃಷ್ಟ ಸಂಖ್ಯೆ : 2

ವೃಶ್ಚಿಕರಾಶಿ
ಗುರಿಸಾಧನೆಗೆ ಇದು ಸೂಕ್ತ ಸಮಯ. ಪ್ರಯತ್ನಿಸಿದ ಕಾರ್ಯಗಳು ಕೈಗೂಡುವವು. ವಿದ್ಯಾರ್ಥಿಗಳಿಗೆ ಅನುಕೂಲ, ರಾಜಕಾರಣಿಗಳಿಗೆ ಎಶಸ್ಸು, ಆಗಾಗ ವಿಘ್ನದಿಂದ ಕಾರ್ಯ ವಿಳಂಬ , ವ್ಯಾಪಾರಿಗಳಿಗೆ ಲಾಭ, ಕುಟುಂಬ ಸೌಖ್ಯ.
ಅದೃಷ್ಟ ಸಂಖ್ಯೆ : 7

ಧನುರಾಶಿ
ಶ್ರಮಕ್ಕೆ ತಕ್ಕ ಫಲ ಸಿಗಲಿದೆ, ಅಧಿಕಾರಿಗಳ ಉಪದ್ರವಕ್ಕೆ ಮಣಿಯದೇ ದಿಟ್ಟತನದಿಂದ ಕೆಲಸ ನಿರ್ವಹಿಸಿ. ವ್ಯಾಪಾರವೃದ್ಧಿಯಾಗುವುದು. ಆರ್ಥಿಕ ಸಂಕಷ್ಟ ದೂರಾಗುವುದು, ಕುಟುಂಬ ಸೌಖ್ಯ,ಹೊಸ ಕಾರ್ಯ ಯಶಸ್ಸು‌
ಅದೃಷ್ಟ ಸಂಖ್ಯೆ : 3

ಮಕರರಾಶಿ
ಉದಾಸೀನತೆಯಿಂದ ಕಾರ್ಯಹಾನಿ ಸಂಭವ. ಅನುಮಾನಗಳು ಮೂಡಿ ಕೈಗೊಂಡ ಕಾರ್ಯಕ್ಕೆ ವಿಘ್ನ ಉಂಟಾಗುವ ಸಂಭವವಿದೆ. ಸಾಮಾಜಿಕ ಗೌರವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗುವಿರಿ, ಅಧಿಕ ಕರ್ಚು, ಸರ್ಕಾರಿ ನೌಕರರಿಗೆ ಪ್ರಶಂಸೆ.
ಅದೃಷ್ಟ ಸಂಖ್ಯೆ : 9

ಕುಂಭರಾಶಿ
ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರಕ್ಕೆ ಸಂಬಧಿಸಿದ ಅಡಚಣೆಗಳು ದೂರಾಗುವುದು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಬರುವ ಸಂಕಷ್ಟಗಳನ್ನು ಎದುರಿಸಿ ಕಾರ್ಯ ಸಾಧಿಸುವಿರಿ,ಶುಭ ಫಲ.
ಅದೃಷ್ಟ ಸಂಖ್ಯೆ : 4

ಮೀನರಾಶಿ
ಧಾರ್ಮಿಕ ಕ್ಷೇತ್ರದಲ್ಲಿ ಗೌರವ ಸಮ್ಮಾನಗಳು ದೊರೆಯುವವು. ಅತಿಯಾದ ನಿರೀಕ್ಷೆಯಿಂದ ಅಸಮಾಧಾನ ಕಂಡುಬರುವುದು. ದೂರುವವರೇ ಹೊಗಳಿದರೂ ನೆಮ್ಮದಿ ಇರಲಾರದು. ಸ್ವಯಂ ಪ್ರತಿಷ್ಟೆಗೆ ಧನವ್ಯಯ ಆಗುವ ಸಾಧ್ಯತೆ , ನೌಕರರಿಗೆ ಶ್ರಮ ಅಧಿಕ, ವ್ಯಾಪಾರ,ಕೃಷಿ ಚಟುವಟಿಗೆ ಯಿಂದ ಲಾಭ,ಆರೋಗ್ಯ ಮಧ್ಯಮ.
ಅದೃಷ್ಟ ಸಂಖ್ಯೆ : 6
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ