ತಿಥಿ : ಶುಕ್ಲ-ನವಮಿ
ನಕ್ಷತ್ರ : ಶ್ರವಣ
ಪಕ್ಷ : ಶುಕ್ಲ-ಪಕ್ಷ
ಅಮಾಂತ : ಆಶ್ವೀಜ
ಮೇಷ : ಈ ದಿನ ಮಿಶ್ರ ಫಲ ನಿಮ್ಮದಾಗುವುದು,ಆರೋಗ್ಯ ಮಧ್ಯಮವಿದ್ದು ವಾಯುಬಾದೆ ಕಾಡಲಿದೆ,ಅಲ್ಪ ಸುಸ್ತು ನಿರುಸ್ಸಾಹ ಕಾಡಲಿದೆ.ಮಕ್ಕಳಿಂದ ಕುಟುಂಬ ಕುಟುಂಬದಲ್ಲಿ ಕಿರಿಕಿರಿ, ಇಚ್ಚಿಕ ಕೆಲಸದಲ್ಲಿ ನಿಧಾನ ಪ್ರಗತಿ.ಆರ್ಥಿಕ ಸ್ಥಿತಿ ಸ್ಥಿರ.ಕೋಪದಿಂದ ತೊಂದರೆಗಳು,ದಿಡೀರ್ ಕರ್ಚು.
ವೃಷಭ: ಕುಟುಂಬದಲ್ಲಿ ಅಲ್ಪ ನೆಮ್ಮದಿ ಇರುವುದು,ಕೆಲಸಕಾರ್ಯ ನಿಧಾನಗತಿಯಲ್ಲಿ ಪ್ರಗತಿ ಕಾಣುವುದು.ವ್ಯಾಪಾರಿಗಳಿಗೆ ಲಾಭ, ಶತ್ರು ಕಾಟಗಳು, ಅನಗತ್ಯ ವಿಷಯಗಳಿಂದ ಸಮಸ್ಯೆ, ಹವಾಮಾನದಿಂದ ಅನಾರೋಗ್ಯ,ಅಲ್ಪ ಸೋಮಾರಿತನ ಕಾಡುವುದರಿಂದ ಕೆಲಸದಲ್ಲಿ ನಿರುತ್ಸಾಹ ಇರುವುದು.ಆರ್ಥಿಕ ಚೇತರಿಗೆ ಇಲ್ಲ,ಹಣದ ಕರ್ಚು ,ಕುಟುಂಬದಲ್ಲಿ ದಿನದ ಕೊನೆಯಲ್ಲಿ ಪ್ರಗತಿ.
ಮಿಥುನ : ಪ್ರೀತಿ-ಪ್ರೇಮದಲ್ಲಿಸಿಲುಕಿದವರಿಗೆ ತೊಂದರೆ, ದುಶ್ಚಟಗಳಿಂದ ಹಣ ವ್ಯಯ, ಬಂಧು ಬಾಂಧವರಲ್ಲಿ ಸಂಶಯಗಳು, ಪ್ರಯಾಣದಲ್ಲಿ ತಡೆ,ವಿದ್ಯಾಭ್ಯಾಸದಲ್ಲಿ ಹಿನ್ನಡೆ,ಆರೋಗ್ಯ ಸ್ಥಿರ,ಆರ್ಥಿಕ ಪ್ರಗತಿ ಅಲ್ಪ,ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ,ಉದ್ಯೋಗಿಗಳಿಗೆ ಅಲ್ಪ ನೆಮ್ಮದಿ.
ಕಟಕ: ದೇಹದಲ್ಲಿ ಉಷ್ಣಾಂಶ ಹೆಚ್ಚಳದಿಂದ ಶೀತ,ಕಫ ಬಾದೆ. ಆರ್ಥಿಕ ವ್ಯವಹಾರದಲ್ಲಿ ನಷ್ಟ ಮತ್ತು ಮಧ್ಯಮ ಪ್ರಗತಿ,ಮಾತಿನಿಂದ ಸಮಸ್ಯೆ, ಮಿತ್ರರು ಶತ್ರುಗಳಾಗುವರು, ಕುಟುಂಬದ ದುಸ್ಥಿತಿ ಚಿಂತೆ, ನಿದ್ರಾಭಂಗ,ಮಿಶ್ರ ಫಲಗಳು ಇಂದು ನಿಮ್ಮದಾಗಲಿದೆ.
ಸಿಂಹ: ಆಗಾಗ ಅನಾರೋಗ್ಯ ಕಾಡುವುದು, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಆಗದು, ಧನ ಸಂಪಾದನೆ ಆದರೂ ನೆಮ್ಮದಿ ಇರದು.ಆತುರ ಮುಂಗೋಪ ಸಂಶಯಗಳು ನೆಮ್ಮದಿ ಕಸಿಯುವುದು.ನಿಮ್ಮ ವರ್ತನೆಯಿಂದ ಸ್ನೇಹಿತರು ದೂರ, ಸ್ವಯಂಕೃತ ಅಪರಾಧಗಳು ನಷ್ಟ ತರುವುದು, ಅನಗತ್ಯ ತಿರುಗಾಟ,ಮಿಶ್ರ ಫಲ.
ಕನ್ಯಾ: ಆಯಾಸ, ದೇಹದಲ್ಲಿ ನೋವು ಕಾಡುವುದು,ಉದ್ಯೋಗ ಒತ್ತಡ,ಅಧಿಕ ತಿರುಗಾಟ,ನಿದ್ರಾಭಂಗ,ಅಧಿಕ ಮಾತಿನಿಂದ ಸಮಸ್ಯೆ, ಆರ್ಥಿಕ ನಷ್ಟಗಳು ಅಧಿಕ ವಾಗಿದ್ದು ಹಣ ಉಳಿಯದು, ಕುಟುಂಬದಲ್ಲಿ ಒತ್ತಡಗಳಿದ್ದು ಮಧ್ಯಮ ಶುಭ ಹಾಗೂ ಅಶುಭ ಫಲ ನಿಮ್ಮದಾಗಲಿದೆ.
ತುಲಾ: ವ್ಯಾಪಾರಿಗಳಿಗೆ ಅಧಿಕ ಲಾಭ,ವಾಹನ ಸಂಚಾರ,ಸ್ವಯಂಕೃತ ಅಪರಾಧಗಳಿಂದ ನಿಷ್ಟೂರ, ಅಪನಂಬಿಕೆ, ಹೆಸರು ಕೀರ್ತಿ ಪ್ರತಿಷ್ಠೆಗೆ ಕಳಂಕ, ಉದ್ಯೋಗಿಗಳಿಗೆ ಹಿನ್ನಡೆ, ದಾಂಪತ್ಯ ಸಮಸ್ಯೆ, ಶತ್ರು ಕಾಟಗಳು, ಸಂಗಾತಿಯಿಂದ ಅಂತರ ,ಕುಟುಂಬದಲ್ಲಿ ನೆಮ್ಮದಿ ಕಡಿಮೆ.ಆರೋಗ್ಯ ಮಧ್ಯಮ.
ವೃಶ್ಚಿಕ: ಅನಿರೀಕ್ಷಿತ ದುರ್ಘಟನೆಗಳು ಜರುಗಬಹುದು ಎಚ್ಚರ, ಉದ್ಯೋಗದಲ್ಲಿ ನಷ್ಟ ಮತ್ತು ಸಮಸ್ಯೆಗಳು ನಿಧಾನ ಪರಿಹಾರ, ನಿಮ್ಮ ನಿರುಸ್ಸಾಹದಿಂದ ಕಾರ್ಯದಲ್ಲಿ ಹಿನ್ನಡೆ,ಒತ್ತಡಗಳಿಂದ ನಿದ್ರಾಭಂಗ, ದುಷ್ಟ ಆಲೋಚನೆಗಳಿಂದ ಗೌರವಕ್ಕೆ ಧಕ್ಕೆ,ಆರ್ಥಿಕ ಸ್ಥಿತಿ ಮಧ್ಯಮ,ಲಾಭ ಕಡಿಮೆ.
ಧನಸ್ಸು:ಆರೋಗ್ಯ ಉತ್ತಮ,ಆಗಾಗ ದೇಹದ ನೋವು ಕಾಣುವುದು, ಪ್ರಯಾಣದಲ್ಲಿ ಕಿರಿಕಿರಿ, ಶಕ್ತಿದೇವತೆಯ ದರ್ಶನ,ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಭವಿಷ್ಯದಲ್ಲಿ ಹಿನ್ನಡೆಗಳು ಕಾಡುವುದು,ನೀಚ ಕಾರ್ಯದಿಂದ ಲಾಭ.
ಮಕರ: ಶತ್ರು ದಮನ, ಉದ್ಯೋಗ ನಷ್ಟದ ಭೀತಿ, ಆಯುಷ್ಯಕ್ಕೆ ಕಂಟಕ, ಕೋರ್ಟ್ ಕೇಸ್ಗಳು, ವಿಚ್ಛೇದನ ಸಮಸ್ಯೆಗಳ ಚಿಂತೆ, ಸೋಲು ನಷ್ಟ ನಿರಾಸೆಗಳು, ಭೂಮಿ ವಾಹನದಿಂದ ತೊಂದರೆ,ವಾರದ ಅಂತ್ಯದಲ್ಲಿ ನೆಮ್ಮದಿ.
ಕುಂಭ: ಸಂಗಾತಿ ನಡವಳಿಕೆಯಿಂದ ಬೇಸರ, ಪ್ರೀತಿ-ಪ್ರೇಮದಲ್ಲಿ ಮೋಸ ಭಾವನೆ, ಆಸೆ-ಆಕಾಂಕ್ಷೆ ಕಲ್ಪನೆಗಳಿಗೆ ಪೆಟ್ಟು, ಪಾಲುಗಾರಿಕೆಯಲ್ಲಿ ಸಮಸ್ಯೆ, ಮಕ್ಕಳ ವೈವಾಹಿಕ ಜೀವನ ವ್ಯತ್ಯಾಸ, ನಾಳೆಯ ಭವಿಷ್ಯದ ಚಿಂತೆ,ವ್ಯಾಪಾರಿಗಳಿಗೆ ಲಾಭ,ಆರೋಗ್ಯ ಉತ್ತಮ.
ಮೀನ: ಮಧ್ಯ ವಯಸ್ಕರಿಗೆ ಪಿತ್ತ ಕಣ್ಣು ಹುರಿ, ಹೃದಯ ಕಾಯಿಲೆ, ಶತ್ರುಗಳಿಂದ ಸಮಸ್ಯೆ, ಸಾಲಗಾರರಿಂದ ನೋವು, ಮೂರನೇ ವ್ಯಕ್ತಿಗಳಿಂದ ಸಮಸ್ಯೆ, ಆತುರದಿಂದ ಧನ ನಷ್ಟ,ವ್ಯಾಪಾರದಿಂದ ಲಾಭ,ನಷ್ಟ ಎರಡೂ ಇರಿವುದು.ಮಿಶ್ರ ಫಲ.
ವಿದ್ವಾನ್ ತಿರುಮಲ ಶರ್ಮ.ಬೆಂಗಳೂರು.