27-03-2021 ಇಂದಿನ ದಿನ ಭವಿಷ್ಯ|Astrology

585


ಸಂವತ್ಸರ : ಶಾರ್ವರಿ
ಋತು : ಶಿಶಿರ
ಮಾಸ : ಫಾಲ್ಗುಣ
ಪಕ್ಷ : ಶುಕ್ಲ
ತಿಥಿ : ಚತುರ್ದಶಿ
ನಕ್ಷತ್ರ : ಹುಬ್ಬ
ವಾರ : ಶನಿವಾರ
ರಾಹುಕಾಲ:09:34-11:06am

ಹವಾಮಾನ:-
ಈ ದಿನ ಅಧಿಕ ಉಷ್ಟತೆ, ಗಟ್ಟ ಪ್ರದೇಶಗಳಲ್ಲಿ ಮಳೆ ಬರುವ ಸಾಧ್ಯತೆ.

ಯಾರಿಗೆ ಲಾಭ-ಯಾರಿಗೆ ನಷ್ಟ!

ಈ ದಿನ ತೋಟಗಾರಿಕೆ ಉತ್ಪನ್ನ ಬೆಳೆಗಾರರಿಗೆ ಲಾಭ, ಹೋಟಲ್ ಉದ್ಯಮ ,ಚಿಕ್ಕ ಪುಟ್ಟ ಉದ್ಯಮ ನಡೆಸುವವರಿಗೆ ಮಧ್ಯಮ ಪ್ರಗತಿ, ಮೀನುಗಾರಿಕಾ ಉದ್ಯಮದವರಿಗೆ ಲಾಭ ಆದರೇ ಮೀನುಗಾರಿಕೆ ಮಾಡುವವರಿಗೆ ನಷ್ಟ. ಚಿನ್ನಾಭರಣ ವರ್ತಕರಿಗೆ ಲಾಭ, ಕಂಪನಿ ಉದ್ಯೋಗಿಗಳಿಗೆ,ಸರ್ಕಾರಿ ನೌಕರರಿಗೆ ನಷ್ಟ, ವೈದ್ಯರು, ಔಷಧ, ವಾಹನ,ಕಟ್ಟಡ ನಿರ್ಮಾಣ ಉದ್ಯಮದವರಿಗೆ ಲಾಭ,ರಾಜಕಾರಣಿಗಳಿಗೆ ನಷ್ಟ, ಬಾಡಿಗೆ ವಾಹನ,ಆಟೋ ಚಾಲಕರಿಗೆ ಮಾಧ್ಯಮ ಆರ್ಥಿಕ ಫಲ,

ಕೃಷಿ ಉತ್ಪನ್ನಗಳಲ್ಲಿ ಲಾಭ -ನಷ್ಟ.

ತೆಂಗು,ಮೆಣಸು,ಈರುಳ್ಳಿ,ಮಾವು,ತರಕಾರಿ ಬೆಳೆಗಾರರಿಗೆ ಲಾಭ.
ಅಡಕೆ, ಕಾಳುಮೆಣಸು ಉತ್ಪಾದಕರಿಗೆ ಮಧ್ಯಮ ಲಾಭ ವಿದ್ದು ಬೆಲೆ ಇಳಿಕೆ ಯಾಗುವ ಸಾಧ್ಯತೆ.
ಮೀನು ವ್ಯಾಪಾರದಲ್ಲಿ ಲಾಭ,ಹೈನುಗಾರಿಕೆಯಲ್ಲಿ ಲಾಭ.

ಇಂದಿನ ರಾಶಿಫಲ.

ಮೇಷ: ವ್ಯವಹಾರದಲ್ಲಿ ಲಾಭ, ಹಣ ಸಂಪಾದನೆಯಲ್ಲಿ ಏರಿಕೆ, ಸಂಗಾತಿಯೊಡನೆ ಉತ್ತಮ ಬಾಂಧವ್ಯ, ಕುಟುಂಬ ಸೌಖ್ಯ, ಆರ್ಥಿಕ ಸಹಾಯ ಮತ್ತು ಅನುಕೂಲಗಳನ್ನು ಕಾಣುವಿರಿ, ನೌಕರರಿಗೆ ಒತ್ತಡ ಇದ್ದೆರೂ ಕಾರ್ಯ ಯಶಸ್ಸು.

ವೃಷಭ: ಆರ್ಥಿಕ ಚೇತರಿಕೆಯಲ್ಲಿ ನಿಧಾನಗತಿ,ಕುಟುಂಬದಲ್ಲಿ ನೆಮ್ಮದಿ, ಉದ್ಯೋಗ ಲಭಿಸಿ ನೆಮ್ಮದಿ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರಿಗಳಿಗೆ ಲಾಭ, ಉದ್ಯೋಗಿಗಳಿಗೆ ಕಾರ್ಯ ಹಾನಿ, ಓಡಾಟ.

ಮಿಥುನ:ಚಂಚಲ ಮನಸ್ಸಿನಿಂದ ಕಾರ್ಯ ಹಾನಿ, ಮೇಲಾಧಿಕಾರಿಯಿಂದ ಕಿರುಕುಳ, ದುಶ್ಚಟಗಳಿಗೆ ಬಲಿ, ಸ್ನೇಹಿತರಿಂದ ತಕರಾರು, ಆರ್ಥಿಕ ಸಹಾಯ ದಿಂದ ನೆಮ್ಮದಿ,ಕೃಷಿಕರಿಗೆ ನಷ್ಟ, ಇಚ್ಚಿಕ ಕೆಲಸಗಳು ನಿಧಾನಗತಿ,ಯುವಕರಿಗೆ ಕೆಲಸ ಸಿಗದೆ ಅಲೆದಾಟ.

ಕಟಕ: ಆರೋಗ್ಯ ಸುಧಾರಣೆ, ಕಾರ್ಯ ಕ್ಷೇತ್ರದಲ್ಲಿ ಸಂಕಷ್ಟದ ಸಫಲತೆ, ಕುಟುಂಬದಲ್ಲಿ ನೆಮ್ಮದಿ ,ಆರೋಗ್ಯ ಸುಧಾರಣೆ, ಆಸ್ತಿ ಒಲಿಯುವುದು, ಮಾನಸಿಕ ನೆಮ್ಮದಿ, ಬಹುದಿನಗಳ ಕನಸು ಈಡೇರುವುದು.

ಸಿಂಹ:ಕುಟುಂಬದಲ್ಲಿ ವೈ ಮನಸ್ಸು, ತಾಯಿ ಆರೋಗ್ಯದಲ್ಲಿ ಏರಿಳಿತ, ವ್ಯಾಪಾರ ವಹಿವಾಟಿನಿಂದ ಉತ್ತಮ ಲಾಭ ನಿರೀಕ್ಷೆ ಅತ್ಯಲ್ಪ. ಉದ್ಯೋಗ ಲಾಭ, ಸ್ತ್ರೀಯರು ಶತ್ರುಗಳಾಗುವರು, ಸ್ವ ಪ್ರಯತ್ನದಿಂದ ಯಶಸ್ಸು, ವಾಯುಭಾದೆ,ಅಧಿಕ ಕರ್ಚು.

ಕನ್ಯಾ: ಕೃಷಿಕರಿಗೆ ಅಧಿಕ ಕರ್ಚು, ಹಣ ಕೈಯಲ್ಲಿ ಹೆಚ್ಚು ನಿಲ್ಲದು, ಲಾಭದ ಪ್ರಮಾಣ ಕುಂಠಿತ, ಹೆಣ್ಣುಮಕ್ಕಳ ಆಗಮನ, ಮಾತಿನಿಂದ ಸಮಸ್ಯೆ ದೂರ, ಮಾನಸಿಕ ಕಿರಿಕಿರಿ, ಪತ್ನಿ ವೈಮನಸ್ಸು, ಶೀತ ,ಕಫ ಬಾಧೆ, ಉದ್ಯೋಗದಲ್ಲಿ ಗೌರವ ಪ್ರಾಪ್ತಿ.

ತುಲಾ: ಈ ದಿನ ಶುಭ ಫಲ, ಅಧಿಕ ಲಾಭ, ಧನಾಗಮನ ಮತ್ತು ಅನುಕೂಲ, ಸಹೋದರರಿಂದ ಕಲಹ, ನೌಕರರಿಗೆ ಸಿಗದ ಯಶಸ್ಸು,ಉನ್ನತ ಅಧಿಕಾರಿಗಳಿಗೆ ಹೆಚ್ಚಿನ ಕೆಲಸ, ರಾಜಕಾರಣಿಗಳಿಗೆ ಸಿಗದ ಯಶಸ್ಸು,ಈ ದಿನ ಮಧ್ಯಮ ಫಲ.

ವೃಶ್ಚಿಕ: ಈ ದಿನ ಅಷ್ಟೊಂದು ಶುಭದಾಯಕವಾಗಿಲ್ಲ, ವ್ಯಾಪಾರಿಗಳಿಗೆ ಅಧಿಕ ಶ್ರಮ, ಉದ್ಯೋಗ ಲಾಭ, ಉದ್ಯೋಗ ಸ್ಥಳದಲ್ಲಿ ಸಾಲಗಾರರ ಕಾಟ, ಬಂಧು ಬಾಂಧವರಿಂದ ನಷ್ಟ, ಕುಟುಂಬದಲ್ಲಿ ಮನಸ್ತಾಪ,ಆರೋಗ್ಯ ಮಧ್ಯಮ.

ಧನಸು: ಈ ದಿನ ಕೃಷಿ ಚಟುವಟಿಕೆಯವರಿಗೆ ತೊಂದರೆ, ಸಾಲದಿಂದ ಸನಸ್ಯೆ ನಿವಾರಣೆ ಪ್ರಯತ್ನ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಕೋರ್ಟ್ ಮೆಟ್ಟಿಲೇರುವ ಸಂಭವ,ಆರೋಗ್ಯ ಉತ್ತಮ.

ಮಕರ: ಆಕಸ್ಮಿಕ ಧನಾಗಮನ, ಗುಪ್ತ ಇಚ್ಚೆಗಳಿಂದ ತೊಂದರೆ, ಸ್ತ್ರೀಯರಿಂದ ಮೋಸ,ಆರೋಗ್ಯ ಉತ್ತನ, ಗೃಹ ನೆಮ್ಮದಿ, ವ್ಯಾಪಾರಿಗಳಿಗೆ ಲಾಭ ಹೆಚ್ಚಿರದು.

ಕುಂಭ: ಸಂಗಾತಿ ಶತ್ರು ಆಗುವರು, ಮೋಜು ಮಸ್ತಿಯಿಂದ ತೊಂದರೆ, ಬುದ್ದಿ ಹೀನರಾಗಿ ವರ್ತಿಸುವಿರಿ, ಆರೋಗ್ಯ ಮಧ್ಯಮ, ಕಫ,ಶೀತ ಬಾಧೆ, ಉದ್ಯೋಗಿಗಳಿಗೆ ತೊಂದರೆ.

ಮೀನ: ಆರೋಗ್ಯ ಮಧ್ಯಮ , ಹಣದ ಕರ್ಚು ಅಧಿಕ, ದುಂದುವೆಚ್ವ , ವಿದ್ಯಾಭ್ಯಾಸದಲ್ಲಿ ತೊಂದರೆ, ದೂರ ಪ್ರಯಾಣದ ಸನ್ನಿವೇಶ, ಕೃಷಿ ಉದ್ಯಮಿಗಳಿಗೆ ಲಾಭ, ಹೊಸ ಕೆಲಸಗಳಿಂದ ಹಣದ ಸಮಸ್ಯೆ ನಿವಾರಣೆ, ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ.

  • ವಿದ್ವಾನ್ ತಿರುಮಲ ಶರ್ಮ.ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ