27-10-2020 ಈ ದಿನದ ರಾಶಿಫಲ

400

ಪಂಚಾಂಗ:-ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ನಿಜ ಆಶ್ವಯುಜ ಮಾಸ,
ಶುಕ್ಲ ಪಕ್ಷ, ತಿಥಿ: ಏಕಾದಶಿ,
ನಕ್ಷತ್ರ: ಶತಭಿಷಾ, ವಾರ : ಮಂಗಳವಾರ,
ರಾಹುಕಾಲ: 3.03 ರಿಂದ 4.31
ಗುಳಿಕಕಾಲ: 12.07 ರಿಂದ 1.35
ಯಮಗಂಡಕಾಲ: 9.11 ರಿಂದ 10.39.

ಮೇಷ: ಇಂದು ಲಾಭ ನಷ್ಟಗಳೆರೆಡೂ ಇರುವುದು,ಕರ್ಚು ಅಧಿಕ, ಹಿತಶತ್ರುಗಳ ಕಾಟ.ಆರೋಗ್ಯ ಉತ್ತಮ,ಕುಟುಂಬ ಸೌಖ್ಯ.

ವೃಷಭ: ಈ ದಿನ ಶುಭಫಲಗಳಿವೆ,ಕುಟುಂಬ ಸೌಖ್ಯ, ಕೃಷಿಕರಿಗೆ ಲಾಭ, ಕಾರ್ಯಗಳಲ್ಲಿ ಜಯ, ವಿದ್ಯಾರ್ಥಿಗಳಲ್ಲಿ ಗೊಂದಲ, ದಾಂಪತ್ಯದಲ್ಲಿ ವಿರಸ.

ಮಿಥುನ: ಅಧಿಕ ಕರ್ಚಿದ್ದರೂ ವೃಣ ಭಾದೆಯಿಂದ ಮುಕ್ತರಾಗುವಿರಿ, ಮಿತ್ರರಿಂದ ದ್ರೋಹ, ಮನಕ್ಲೇಷ, ಅಕಾಲ ಭೋಜನ, ವಾದ ವಿವಾದಗಳಿಂದ ದೂರವಿರಿ, ಆರೋಗ್ಯ ಚೇತರಿಕೆ.

ಕಟಕ:ಈ ದಿನ ಶುಭ ಫಲಗಳಿವೆ, ಗುರು ಹಿರಿಯರಲ್ಲಿ ಭಕ್ತಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಶತ್ರುಭಯ ಕಾಡುವುದು, ಅಧಿಕ ಖರ್ಚು, ದುಡುಕು ಸ್ವಭಾವ ದಿಂದ ತೊಂದರೆ,ಆರೋಗ್ಯ ಉತ್ತಮ‌.

ಸಿಂಹ:ಕುಟುಂಬದಲ್ಲಿ ನೆಮ್ಮದಿ ಇರುವುದು, ಕೆಲಸ ಕಾರ್ಯದಲ್ಲಿ ದುಡುಕಿನ ನಿರ್ಧಾರ ಬೇಡ, ತಾಳ್ಮೆಯಿಂದ ವರ್ತಿಸಿ, ಮಾನಸಿಕ ಒತ್ತಡ ಇರುವುದು,ಕರ್ಚು ಅಧಿಕ,ವ್ಯಾಪಾರಿಗಳಿಗೆ ಲಾಭ ಅಲ್ಪ,ವಾಯುಬಾದೆ ಹೊರತುಪಡಿಸಿದರೆ ಆರೋಗ್ಯ ಉತ್ತಮ.

ಕನ್ಯಾ:ಅಧಿಕ ಕರ್ಚು ,ಹಣ ಸಂಪಾದಿಸಿದಷ್ಟು ವ್ಯಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವಿನಾಕಾರಣ ದ್ವೇಷ ಮಾಡುವಿರಿ, ಅಲ್ಪ ದೇಹಾಯಾಸ,ಅಧಿಕ ತಿರುಗಾಟ ,ಆರೋಗ್ಯ ಮಧ್ಯಮವಿದೆ,ಕಫ,ಕೆಮ್ಮು ,ಶೀತ ಇರಲಿದೆ.

ತುಲಾ: ಶ್ರಮಕ್ಕೆ ತಕ್ಕ ಫಲ ಸಿಗಲಿದೆ,ಅಮೂಲ್ಯ ವಸ್ತು ಖರೀದಿ, ಅಲ್ಪ ಆದಾಯ, ಉದ್ಯೋಗದಲ್ಲಿ ಕಿರಿ-ಕಿರಿ, ಕಲಹ,ಆರೋಗ್ಯ ಉತ್ತಮ,ನಿರುತ್ಸಾಹ ದಿಂದ ಹೊರಬನ್ನಿ.

ವೃಶ್ಚಿಕ: ವ್ಯಾಪಾರಿಗಳಿಗೆ ಆದಾಯ ಇಳಿಕೆ, ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಹಿನ್ನಡೆ, ಮೃತ್ಯು ಭಯ, ಕಾರ್ಯ ಸಾಧನೆಯಲ್ಲಿ ಹಿನ್ನಡೆ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ.ಮಿಶ್ರ ಫಲ.

ಧನಸ್ಸು:ಆರೋಗ್ಯ ಮಧ್ಯಮ, ಮಾನಸಿಕ ನೆಮ್ಮದಿ, ಪ್ರತಿಭೆಗೆ ತಕ್ಕ ಫಲ ದೊರೆಯುತ್ತದೆ, ಸ್ತ್ರೀಯಿಂದ ಶುಭ, ವಾಹನ ಖರೀದಿ ಯೋಗ,ಕರ್ಚು ಅಧಿಕ,ದುಂದು ವೆಚ್ಚಕ್ಕೆ ಕಡಿವಾಣ ಹಾಕಿ.

ಮಕರ: ಈ ದಿನ ಮಿಶ್ರ ಫಲ ನಿಮ್ಮದು,ಯತ್ನ ಕಾರ್ಯಗಳಲ್ಲಿ ವಿಳಂಬ, ಹಿತಶತ್ರುಗಳಿಂದ ಕಿರಿಕಿರಿ, ಕೆಲವು ಕಡೆ ನಿಮಗೆ ಗೌರವ ದೊರೆಯುವುದು,ಆರೋಗ್ಯ ಮಧ್ಯಮ,ಉಷ್ಣ ಬಾದೆ.

ಕುಂಭ:ಈ ದಿನ ಅಲ್ಪ ಅಶುಭ ಫಲ ಇದೆ. ಚಂಚಲ ಮನಸ್ಸು ನಿಮ್ಮ ಕಾರ್ಯಸಾಧನೆಗೆ ಅಡ್ಡಿ ಬರಲಿದೆ, ಕೆಟ್ಟ ಆಲೋಚನೆ, ಆರೋಗ್ಯದಲ್ಲಿ ತೊಂದರೆ, ವಿವಾಹಯೋಗ, ಅಲ್ಪ ಲಾಭ, ಅಧಿಕ ಖರ್ಚು ಇದ್ದು ಎಚ್ಚರ ಅಗತ್ಯ.

ಮೀನ: ಈ ದಿನ ಶುಭ ಫಲ ಹೆಚ್ಚಿದೆ,ಕೀರ್ತಿ ಲಾಭ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ದೂರ ಪ್ರಯಾಣ, ಮಹಿಳೆಯರಿಗೆ ಶುಭಫಲ, ದ್ರವ್ಯಲಾಭ,ಆರೋಗ್ಯದಲ್ಲಿ ಉತ್ತಮ.

ಪಂಡಿತ್ ತಿರುಮಲ ಶರ್ಮ.ಬೆಂಗಳೂರು.




Leave a Reply

Your email address will not be published. Required fields are marked *