ಸೋಮವಾರದ ದಿನ ಭವಿಷ್ಯ.

462

ಇಂದಿನ ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಪಾಲ್ಗುಣ ಮಾಸ,
ಕೃಷ್ಣ ಪಕ್ಷ. ವಾರ : ಸೋಮವಾರ,
ತಿಥಿ : ಪಾಡ್ಯ, ನಕ್ಷತ್ರ : ಹಸ್ತ,

ರಾಹುಕಾಲ : 7.53 ರಿಂದ 9.25
ಗುಳಿಕಕಾಲ : 2.00 ರಿಂದ 3.32
ಯಮಗಂಡಕಾಲ : 10.57 ರಿಂದ 12.29

ಹವಾಮಾನ
ಮಲೆನಾಡು ಭಾಗದಲ್ಲಿ ಸಂಜೆ ವೇಳೆ ಗಾಳಿ ಸಹಿತ ಮಳೆ, ಕರಾವಳಿ ಗಟ್ಟ ಭಾಗದಲ್ಲಿ ತುಂತುರು ಮಳೆ.

ಈದಿನದ ಲಾಭ -ನಷ್ಟ!

ಕೃಷಿಕರಿಗೆ ಕರ್ಚು, ವ್ಯಾಪಾರಿಗಳಿಗೆ ಲಾಭ, ಉದ್ಯೋಗಿಗಳಿಗೆ ಕರ್ಚು, ಚಿನ್ನ ಬೆಳ್ಳಿ ವರ್ತಕರಿಗೆ ಮಧ್ಯಮ ಲಾಭ,ಮೀನು ಉದ್ಯಮ,ವ್ಯಾಪಾರಿಗಳಿಗೆ ಲಾಭ,ಹೋಟಲ್ ಉದ್ಯಮದವರಿಗೆ ಹೆಚ್ಚಿನ ಲಾಭ ಇರದು.

ಇಂದಿನ ರಾಶಿ ಫಲ

ಮೇಷ: ಕುಟುಂಬದಲ್ಲಿ ವಿರಹ, ಹಣದ ಕರ್ಚು, ಅಧಿಕಾರಿಗಳಲ್ಲಿ ಕಲಹ, ಆರ್ಥಿಕ ಪರಿಸ್ಥಿತಿಯಲ್ಲಿ ನಿಧಾನ ಗತಿಯ ಚೇತರಿಕೆ, ಶತ್ರು ಭಾದೆ, ಅನಗತ್ಯ ತಿರುಗಾಟ,ಆರೋಗ್ಯ ಮಧ್ಯಮ.

ವೃಷಭ: ಈ ದಿನ ಮಿಶ್ರ ಫಲ,ಯತ್ನ ಕಾರ್ಯಗಳಲ್ಲಿ ವಿಘ್ನ, ಇಲ್ಲ ಸಲ್ಲದ ತಕರಾರು, ಅನಾರೋಗ್ಯ, ಮನಸ್ತಾಪ, ಪರರ ಮಾತಿನಿಂದ ತೊಂದರೆ.

ಮಿಥುನ: ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಯೋಗ, ಸ್ತ್ರೀ ಲಾಭ,ಆರೋಗ್ಯ ಸುಧಾರಣೆ, ವಸ್ತ್ರ ಖರೀದಿ, ದುಷ್ಟಬುದ್ಧಿ, ಸ್ವಲ್ಪ ಹಣ ಬಂದರು ಉಳಿಯುವುದಿಲ್ಲ.

ದೇಶದಲ್ಲೇ ಕಲುಷಿತ ನದಿಗಳ ಪಟ್ಟಿಯಲ್ಲಿ ಕಾಳಿ ನದಿ ಸೇರ್ಪಡೆ! ಸುದ್ದಿ ಓದಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ.

http://www.kannadavani.news/kali-river-joins-the-list-of-polluted-rivers-in-the-country-karnataka-river/

Home » ಸೋಮವಾರದ ದಿನ ಭವಿಷ್ಯ.

ಕಟಕ: ಹಣದ ಕರ್ಚು, ವ್ಯಸನ,ಮಾತಿನ ಚಕಮಕಿ, ಮನಸ್ಸಿಗೆ ಚಿಂತೆ, ಮಿತ್ರರಿಂದ ತೊಂದರೆ, ವಿವಾಹ ಯೋಗ, ಕಾರ್ಯ ವಿಘ್ನ.

ಸಿಂಹ: ಸಾಧಾರಣ ಪ್ರಗತಿ, ಮನಸ್ಸಿಗೆ ಚಿಂತೆ, ಕುಟುಂಬದಲ್ಲಿ ಸಂತೋಷ,ಆರೋಗ್ಯ ಮಧ್ಯಮ,ಕುಟುಂಬದಿಂದ ಕರ್ಚು ಹೆಚ್ಚು, ಮಿತ್ರರಿಂದ ವಂಚನೆ ಎಚ್ಚರವಹಿಸಿ.

ಕನ್ಯಾ: ಆರೋಗ್ಯ ಮಧ್ಯಮ, ಕರ್ಚು ಅಧಿಕ, ಮಕ್ಕಳ ಬಗ್ಗೆ ಕಾಳಜಿ ವಹಿಸಿ,ಸೋಮಾರಿತನದಿಂದ ಕಾರ್ಯ ವಿಳಂಬ,ಕುಟುಂಬ ಸೌಖ್ಯ.

ತುಲಾ: ವೃತ್ತಿಪರರಿಗೆ ಹೊಸ ತಿರುವು, ಶುಭಕಾರ್ಯಗಳಿಗೆ ಚಾಲನೆ, ಸಣ್ಣಪುಟ್ಟ ವಿವಾದಗಳಾಗುವ ಸಾಧ್ಯತೆ.

ವೃಶ್ಚಿಕ: ಧೈರ್ಯವಾಗಿ ಮುನ್ನುಗ್ಗುವಿರಿ, ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು.

ಧನಸ್ಸು: ನಿಷ್ಠೂರದಿಂದ ಮಾತನಾಡಬೇಡಿ, ಹಿರಿಯರ ಮಾರ್ಗದರ್ಶನ ಒಳಿತು, ಹಣಕಾಸಿನ ಪರಿಸ್ಥಿತಿ ಉತ್ತಮವಾಗುತ್ತದೆ.

ಮಕರ: ವೃತ್ತಿಯಲ್ಲಿ ಬಡ್ತಿ ದೊರೆಯುವ ಸಾಧ್ಯತೆ, ಆರೋಗ್ಯದಲ್ಲಿ ಏರುಪೇರು, ವ್ಯಾಪಾರ, ವ್ಯವಹಾರದಲ್ಲಿ ಉತ್ತಮ ಲಾಭಾಂಶ.

ಕುಂಭ: ದೂರಾಲೋಚನೆ, ನಿರೀಕ್ಷಿತ ಲಾಭ, ಉದ್ಯೋಗದಲ್ಲಿ ಬದಲಾವಣೆ ಶುಭಕಾರ್ಯಗಳಲ್ಲಿ ಭಾಗಿ.

ಮೀನ: ಬಂಡವಾಳ ಹೂಡಿಕೆಯಿಂದ ಲಾಭ, ನಿಮ್ಮ ಯಶಸ್ಸು ಕೆಲವರಿಗೆ ಅಸೂಯೆ ತರುತ್ತೆ ಎಚ್ಚರ, ಆರೋಗ್ಯ ಸುಧಾರಣೆ, ಗೌರವ ಪ್ರಾಪ್ತಿ, ಸಂತೋಷ ಕೂಟದಲ್ಲಿ ಭಾಗಿ,ಯತ್ನ ಕಾರ್ಯ ಯಶಸ್ಸು, ರಾಜಕಾರಣಿಗಳಿಗೆ ಕರ್ಚು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ