add

12-11-2020 ಇಂದಿನ ದಿನ ಭವಿಷ್ಯ.

355

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ನಿಜ ಆಶ್ವಯುಜ ಮಾಸ,
ಕೃಷ್ಣಪಕ್ಷ, ದ್ವಾದಶಿ, ಗುರುವಾರ,ಹಸ್ತ ನಕ್ಷತ್ರ,
ರಾಹುಕಾಲ 01:34 ರಿಂದ 03:01
ಗುಳಿಕಕಾಲ 9: 13 ರಿಂದ 10:40
ಯಮಗಂಡಕಾಲ 06: 20ರಿಂದ 07:46

ಮೇಷರಾಶಿ : ಸ್ವಲ್ಪ ತಳಮಳವಾದರು ಬದುಕು ಕಟ್ಟಿಕೊಳ್ಳುತ್ತೀರ. ಇಂದಿನಿಂದಲೇ ಹಬ್ಬದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೀರ.

ವೃಷಭ ರಾಶಿ : ಚೆನ್ನಾಗಿದೆ ಮನೆಯಲ್ಲಿ ಸಂಭ್ರಮದ ಛಾಯೆ. ಯಾವುದೊ ಸ್ತ್ರೀ ಮೂಲಕ, ಸ್ತ್ರೀ ವಿಚಾರದಲ್ಲಿ ನಿಮಗೊಂದು ಅನುಕೂಲವಾಗುವಂತಹ ದಿನ.

ಮಿಥುನ ರಾಶಿ : ಸ್ತ್ರೀ ವಿಚಾರದಲ್ಲಿ ಒಂದು ಸಣ್ಣ ಪ್ರಮಾದ, ಅದನ್ನು ಮ್ಯಾನೇಜ್ ಮಾಡಿಕೊಂಡು ಹೋಗುತ್ತೀರಾ.

ಕರ್ಕಾಟಕ ರಾಶಿ : ಸೋದರಿ ವರ್ಗದಲ್ಲೊಂದು ದೋಷವಿದೆ, ಒದ್ದಾಟವಿದೆ, ನೀವು ನೆರಳಾಗಿ ನಿಲ್ಲುವ ಯೋಗವಿದೆ, ಇಲ್ಲವೇ ನಮಗೆ ಅವರೇ ನೆರಳಾಗಿ ನಿಲ್ಲುವ ಯೋಗವಿದೆ.

ಸಿಂಹ ರಾಶಿ : ಕುಟುಂಬದ ಸಡಗರ ಸಂಭ್ರಮಕೊಸ್ಕರ ಸ್ವಲ್ಪ ಖರ್ಚು, ಸಾಲ ಮಾಡಿ ಹಬ್ಬ ಮಾಡಬೇಡಿ.ಹೊಸ ವಸ್ತುಗಳ ಖರೀದಿಯಿಂದ ನಷ್ಟ, ಗಾಬರಿ ಆತಂಕ, ಸರ್ಪದ ಕನಸುಗಳು, ಮಾಟ ಮಂತ್ರ ತಂತ್ರದ ಆತಂಕ.

ಕನ್ಯಾ ರಾಶಿ : ಧನ ತ್ರಯೋದಶಿ ಇಂದೇ ಲಕ್ಷ್ಮಿ ನಿಮ್ಮ ಮನೆಗೆ ಬಂದು ಬಿಟ್ಟಿದೆ. ಅಲಂಕಾರ ಸಿದ್ಧತೆ ಓಡಾಟ . ಲಕ್ಷ್ಮೀ ಎಲ್ಲರಿಗೂ ಒಲಿಯುವುದಿಲ್ಲ ಕನ್ಯಾ ರಾಶಿಯವರಿಗೆ ಜನ್ಮತಃ ಕೊಟ್ಟಿರುವಂತಹ ಒಂದು ಅದೃಷ್ಟ ಎಂದರೆ ಸದಾ ಲಕ್ಷ್ಮಿ ಬರುತ್ತಿರುತ್ತದೆ, ಸ್ವಲ್ಪ ಚಂಚಲೆ.

ತುಲಾ ರಾಶಿ : ಉದ್ಯೋಗದ ನಿಮಿತ್ತ ವ್ಯವಹಾರದ ನಿಮಿತ್ತ ಸ್ವಂತ ವ್ಯವಹಾರಗಳಿದ್ದರೆ ಸ್ವಲ್ಪ ತೊಳಲಾಟ ಖರ್ಚು ವೆಚ್ಚಗಳು ಇರುತ್ತದೆ.ಪ್ರಯಾಣದಿಂದ ನಷ್ಟ ಮತ್ತು ಸಂಕಷ್ಟ, ತಂದೆಯೊಡನೆ ವಾಗ್ವಾದ, ನಿದ್ರಾಭಂಗ.

ವೃಶ್ಚಿಕ ರಾಶಿ : ಭಾಗ್ಯಾಧಿಪತಿ ಲಾಭ ಸ್ಥಾನದಲ್ಲಿ ಇರುವುದರಿಂದ ಮನೆಯಲ್ಲಿ ಸಡಗರ ಸಂಭ್ರಮದ ಛಾಯೆ. ಸಿಹಿ ಊಟದ ಸಿದ್ಧತೆ ಮಾಡಿಕೊಳ್ಳಿ. ಅತಿ ಶೀಘ್ರದಲ್ಲಿ ಸಿಹಿಸುದ್ದಿಯೊಂದನ್ನು ಪಡೆಯುವ ಸುಯೋಗವಿದೆ. ಗುರು ಚಂದ್ರ ಕೇಂದ್ರದಲ್ಲಿರುವುದರಿಂದ ಗುರು ಕಾರ್ಯವೊಂದು ನಡೆಯುತ್ತದೆ.

ಧನಸ್ಸು ರಾಶಿ :ಮಾನಸಿಕ ಕಿರಿಕಿರಿ, ಆಕಸ್ಮಿಕ ಅವಘಡ, ಮಾನ ಸನ್ಮಾನಗಳಿಂದ ವಂಚಿತರಾಗುವಿರಿ, ಕೆಲಸ ಕಾರ್ಯಗಳಲ್ಲಿ ಎಡವಟ್ಟು ವೃತ್ತಿಪರವಾಗಿ ಎಳೆದಾಟ, ಯಾರೋ ಸ್ತ್ರೀ ಮೂಲಕ ಅವಮಾನ, ಸುಮ್ಮನಾಗಿಬಿಡಿ ಜಗಳಕ್ಕೆ ಹೋಗಬೇಡಿ.

ಮಕರ ರಾಶಿ : ಚೆನ್ನಾಗಿದೆ, ಭಾಗ್ಯಾಧಿಪತಿ, ದಶಮಾಧಿಪತಿ, ಸುಖಾಧಿಪತಿ ಸಪ್ತಮಾಧಿಪತಿ , ಭಾಗ್ಯದಲ್ಲಿರುವುದರಿಂದ ಭಾಗ್ಯೋದಯವಾಗುತ್ತದೆ. ಕಲಾವಿದರಾಗಿದ್ದರೆ, ಅಡ್ವರ್ಟೈಸ್ಮೆಂಟ್, ಮಾಡ್ಲಿಂಗ್ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅನುಕೂಲಕರವಾದ ದಿನ.

ಕುಂಭ ರಾಶಿ : ಶುಭ ಸುದ್ದಿಯೊಂದನ್ನು ಪಡೆಯುವಂತಹ ಅನುಕೂಲಕರವಾದಂತಹ ದಿನ ಅದರೆ ಸ್ವಲ್ಪ ಪರಿಶ್ರಮ ಪಡಬೇಕು.

ಮೀನ ರಾಶಿ :ಮಕ್ಕಳ ಬಗ್ಗೆ ಸಂಶಯ ಮತ್ತು ಗಾಬರಿ, ಆರೋಗ್ಯದಲ್ಲಿ ಏರುಪೇರು,ವ್ಯವಹಾರ ನಿಮಿತ್ತ, ವ್ಯಾಪಾರ ನಿಮಿತ್ತ, ಸ್ವಂತ ಬಲದಿಂದ ಮುಂದೆ ಬರುತ್ತಿದ್ದರೆ , ವಾಯ್ಸ್ ಓವರ್, ಕೊರಿಯೋಗ್ರಾಫರ್ , ಡ್ಯಾನ್ಸ್ ಮಾಸ್ಟರ್, ಹಾಲಿನ ವ್ಯಾಪಾರ, ಹಣ್ಣಿನ ವ್ಯಾಪಾರ ,ತರಕಾರಿ, ಜ್ಯೂಸ್, ಹೂವು , ಸಿಹಿ ಪದಾರ್ಥಗಳ ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಅದ್ಭುತವಾದ ದಿನ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ