BREAKING NEWS
Search

19-02-2020 ದಿನ ಭವಿಷ್ಯ.

330

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಬುಧವಾರ, ಪೂರ್ವಾಷಾಢ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:37 ರಿಂದ 2:05
ಗುಳಿಕಕಾಲ: ಬೆಳಗ್ಗೆ 11:09 ರಿಂದ 12:37
ಯಮಗಂಡಕಾಲ: ಬೆಳಗ್ಗೆ 8:13 ರಿಂದ 9:41

ಮೇಷ:- ನೀವು ಅಂದುಕೊಂಡ ವ್ಯವಹಾರಗಳು ಮಂದಗತಿಯಲ್ಲಿ ಆಗುವುದು, ದಾಂಪತ್ಯದಲ್ಲಿ ಸಂತೋಷ, ಶತ್ರುಗಳ ಬಾಧೆ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು,ವ್ಯಾಪಾರಿಗಳಿಗೆ ಶುಭ ದಿನ.

ವೃಷಭ:ಮಾಡುವ ಕೆಲಸದಲ್ಲಿ ಜಾಗೃತರಾಗಿರಿ,ಖಾಸಗಿ ಉದ್ಯೋಗಿಗಳಿಗೆ ಒತ್ತಡ ಕಿರಿಕಿರಿ ಇರುವುದು, ಚಂಚಲ ಮನಸ್ಸು ನಿಮ್ಮದಾಗಲಿದ್ದು ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗಲಿದೆ, ಅಕಾಲ ಭೋಜನ, ಮಾನಸಿಕ ವ್ಯಥೆ, ಸಾಲದಿಂದ ಮುಕ್ತಿ,ಆರೋಗ್ಯ ಉತ್ತಮ,ಅಲ್ಪ ಕಫ,ಕೆಮ್ಮು ಬಾದೆ.

ಮಿಥುನ: ಈ ದಿನ ಶುಭ ಫಲ ಹೆಚ್ಚು ,ಯಾವುದೇ ಕೆಲಸಗಳು ಸುಲಲಿತವಾಗಿ ಆಗಲಿದೆ,ಯತ್ನ ಕಾರ್ಯದಲ್ಲಿ ಜಯ, ಸ್ತ್ರೀಯರಿಗೆ ಚಿನ್ನಾಭರಣ ಯೋಗ, ಭೂ ಲಾಭ, ಬಂಧುಗಳ ಭೇಟಿ, ಪುಣ್ಯಕ್ಷೇತ್ರ ದರ್ಶನ,ಆರೋಗ್ಯ ಉತ್ತಮ.

ಕಟಕ: ಈ ದಿನ ಮಿಶ್ರ ಫಲ ,ವ್ಯಾಪಾರಿಗಳಿಗೆ ಏರಿಳಿತದ ಲಾಭ, ಮನೆಯ ಸ್ಥಳ ಬದಲಾವಣೆ, ವಿದ್ಯಾರ್ಥಿಗಳಿಗೆ ಆಸಕ್ತಿ , ವಿಪರೀತ ಖರ್ಚು, ರಿಯಲ್ ಎಸ್ಟೇಟ್‍ನವರಿಗೆ ಲಾಭ,ಆರೋಗ್ಯ ಮಧ್ಯಮ.

ಸಿಂಹ: ಈ ದಿನ ಶುಭ ಫಲಗಳು ಹೆಚ್ಚು ,ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ, ಅವಿವಾಹಿತರಿಗೆ ವಿವಾಹ ಯೋಗ, ಅಲ್ಪ ಆದಾಯ ಅಧಿಕ ಖರ್ಚು, ದೇವತಾ ಕಾರ್ಯಗಳಲ್ಲಿ ಭಾಗಿ,ಆರೋಗ್ಯ ಮಧ್ಯಮ,ಮಾನಸಿಕ ವ್ಯತೆ ಆಗಾಗ ಕಾಡುವುದು.

ಕನ್ಯಾ:ಆರೋಗ್ಯ ಮಧ್ಯಮ,ಕಫ,ವಾತ ಬಾದೆ, ವಾದ-ವಿವಾದಗಳಲ್ಲಿ ಜಯ, ಪ್ರಭಾವಿ ವ್ಯಕ್ತಿಗಳ ಭೇಟಿ, ಮಾನಸಿಕ ನೆಮ್ಮದಿ, ಸಮಾಜದಲ್ಲಿ ಉತ್ತಮ ಗೌರವ,ಅಧಿಕ ತಿರುಗಾಟ,ಮಾನಸಿಕ ಒತ್ತಡ,ಮಧ್ಯಮ ಶುಭ ಫಲ.

ತುಲಾ:ಈ ದಿನ ಮಿಶ್ರ ಫಲ,ವ್ಯಾಪಾರಿಗಳಿಗೆ ನಷ್ಟ,ಉದ್ಯೋಗಿಗಳಿಗೆ ಅಲ್ಪ ಹಾನಿ, ಅಲ್ಪ ಕಾರ್ಯ ಸಿದ್ಧಿ, ಮಿತ್ರರಿಂದ ತೊಂದರೆ, ಮನಸ್ಸಿನಲ್ಲಿ ಭಯ ಭೀತಿ, ಯಾರನ್ನೂ ಹೆಚ್ಚು ನಂಬಬೇಡಿ,ಆರೋಗ್ಯ ಉತ್ತಮ.

ವೃಶ್ಚಿಕ:ಮಾತಿನಿಂದ ಸಮಸ್ಯೆ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ಮಾತಿನ ಚಕಮಕಿ, ಹಿತ ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ,ವ್ಯಪಾರಿಗಳಿಗೆ ನಷ್ಟ,ಹೊಸ ವ್ಯವಹಾರದಿಂದ ಜಗಳ,ಉದ್ಯೋಗಿಗಳಿಗೆ ಒತ್ತಡ, ಈ ದಿನ ಅಶುಭ ಫಲ ಯೋಗ.

ಧನಸ್ಸು: ಈ ದಿನ ಶುಭ ಫಲ ಹೆಚ್ಚು,ಆರೋಗ್ಯ ಚೇತರಿಕೆ,ಉಸಿರಾಟದ ತೊಂದರೆಯಿಂದ ಮುಕ್ತಿ,ಉದ್ಯೋಗಿಗಳಿಗೆ ಶುಭ ಫಲ,ಪೂಜಾ ಕಾರ್ಯಗಳಲ್ಲಿ ಭಾಗಿ, ಎಷ್ಟೇ ಕಷ್ಟ ಬಂದರೂ ಮುನ್ನುಗ್ಗುವ ಚೈತನ್ಯ, ದಾಂಪತ್ಯದಲ್ಲಿ ಅನ್ಯೋನ್ಯತೆ, ಮಾನಸಿಕ ನೆಮ್ಮದಿ ಇರಲಿದೆ.

ಮಕರ: ಈ ದಿನ ಮಿಶ್ರ ಫಲ,ವ್ಯಾಪಾರ ನಷ್ಟ,ಉದ್ಯೋಗಿಗಳಿಗೆ ಒತ್ತಡ, ದುಷ್ಟ ಆಲೋಚನೆ, ಅನ್ಯರ ಮಾತನ್ನು ಕೇಳುವಿರಿ, ಚಂಚಲ ಮನಸ್ಸು, ಆರೋಗ್ಯದಲ್ಲಿ ವ್ಯತ್ಯಾಸ,ಕಫ ,ಕೆಮ್ಮು ಬಾದೆ,ದಾಂಪತ್ಯ ವಿರಸ.

ಕುಂಭ:ಈ ದಿನ ಮಿಶ್ರ ಫಲ, ವ್ಯಾಪಾರ ಮಧ್ಯಮ, ಹಣಕಾಸು ಲಾಭ, ನಂಬಿಕಸ್ಥರಿಂದ ದ್ರೋಹ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು,ಆರೋಗ್ಯ ಮಧ್ಯಮ,ಉದ್ಯೋಗದಲ್ಲಿ ಒತ್ತಡ.

ಮೀನ: ಈ ದಿನ ಮಿಶ್ರ ಫಲ, ಅಂದುಕೊಂಡ ಕೆಲಸ ನಿಧಾನ ಪ್ರಗತಿ, ಕೆಲಸದಲ್ಲಿ ತಾಳ್ಮೆ ವಹಿಸಿ, ಅನಗತ್ಯ ಖರ್ಚು,ಕುಟುಂಬದಲ್ಲಿ ನೆಮ್ಮದಿ ಇಳಿಕೆ, ಆದಾಯಕ್ಕಿಂತ ಹೆಚ್ಚು ವ್ಯಯ,ವ್ಯಾಪಾರಿಗಳಿಗೆ ಅಲ್ಪ ಲಾಭ ,ನಷ್ಟ,ಉದ್ಯೋಗಿಗಳಿಗೆ ಒತ್ತಡ.

ಮೀನುಗಾರಿಕಾ ಲಾಭ ನಷ್ಟ ಫಲ

ಕರಾವಳಿ ಭಾಗದ ಮೀನುಗಾರರಿಗೆ ಲಾಭಕ್ಕಿಂತ ನಷ್ಟ ಹೆಚ್ಚು. ಈ ದಿನ ಮತ್ಸ ಭೇಟೆ ಹೆಚ್ಚಿನ ಲಾಭ ತರದು. ಮಹರಾಷ್ಟ್ರ , ಲಕ್ಷ ದ್ವೀಪದ ದಿಕ್ಕಿನೆಡೆ ಲಾಭ ಹೆಚ್ಚು, ಮಂಗಳೂರು,ಉಡುಪಿ ಭಾಗದಲ್ಲಿ ಮತ್ಸ್ಯ ವ್ಯಯ,ಹೊನ್ನಾವರ ಭಟ್ಕಳ ಭಾಗದ ಮೀನುಗಾರಿಕೆಗೆ ಶುಭ.

ಕೃಷಿ ಲಾಭ ನಷ್ಟ.

ಮಲೆನಾಡು ಭಾಗದ ಕೃಷಿಕರಿಗೆ ಲಾಭ ಏರಿಕೆ.
ಅಡಕೆ ಬೆಳೆಗಾರರಿಗೆ ಲಾಭ, ಮಿಶ್ರ ಬೆಳೆ ಅಂದರೆ ತರಕಾರಿ ,ಭತ್ತ,ಕಬ್ಬು ಬೆಳಗಾರರಿಗೆ ಮಿಶ್ರ ಫಲ ವಿದ್ದು ನಂತರ ಉತ್ತಮ ಲಾಭ ನಿರೀಕ್ಷೆ ಮಾಡಬಹುದು.ಈ ವರ್ಷದಲ್ಲಿ ತೋಟಗಾರಿಕಾ ಬೆಳೆ ಬೆಳೆದವರು ಲಾಭ ಅನುಭವಿಸುವರು.
Leave a Reply

Your email address will not be published. Required fields are marked *