BREAKING NEWS
Search

29-08-2019-ಇಂದಿನ ದಿನ ಭವಿಷ್ಯ

415

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ಚರ್ತುದಶಿ ತಿಥಿ,
ಗುರುವಾರ, ಆಶ್ಲೇಷ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 1:57 ರಿಂದ 3:30
ಗುಳಿಕಕಾಲ: ಬೆಳಗ್ಗೆ 9:18 ರಿಂದ 10:51
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:45

ಮೇಷ:ಮನೆಯಲ್ಲಿ ಅಲ್ಪ ಕದನ,ತಾಯಿಜೊತೆ ಮುನಿಸು, ಕೆಲವೊಂದು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಗೊಂದಲ ಕಾಡಲಿದೆ. ಸಂಗಾತಿಯ ಸಲಹೆಗೆ ಕಿವಿಗೊಡಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗುವುದು. ಆರ್ಥಿಕವಾಗಿ ಚೇತರಿಕೆ ಇರಲಿದೆ.

ವೃಷಭ: ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯುವಿರಿ. ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ಸಿಗುವುದು. ಕೌಟುಂಬಿಕವಾಗಿ ಸಂತಸದ ದಿನವಾಗಲಿದೆ. ಆದರೆ ಕಾರ್ಯಕ್ಷೇತ್ರದಲ್ಲಿ ಕೆಲವೊಂದು ವಿಘ್ನಗಳು ಎದುರಾಗುತ್ತವೆ. ಹಾಗಿದ್ದರೂ ಕಾರ್ಯಸಾಧನೆಗೆ ಅಡ್ಡಿಯಾಗದು.
ಮಿಥುನ: ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ಕೌಟುಂಬಿಕವಾಗಿ ಕೆಲವೊಂದು ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಲಿವೆ. ಸಾಧು ಸಜ್ಜನರ ಭೇಟಿ ಸಾಧ‍್ಯತೆಯಿದೆ. ದೈವಾನುಕೂಲದಿಂದ ಕೈ ಹಿಡಿದ ಕಾರ್ಯಗಳು ನಿರೀಕ್ಷಿತವಾಗಿ ನಡೆಯಲಿವೆ.

ಕರ್ಕಟಕ: ಸಾಮಾಜಿಕವಾಗಿ ಸ್ಥಾನ ಮಾನಗಳು ಹೆಚ್ಚಾಗಲಿವೆ. ವ್ಯಾಪಾರದಲ್ಲಿ ನಿವ್ವಳ ಲಾಭ ಸಿಗಲಿದೆ. ಕೆಳ ಹಂತದ ನೌಕರರಿಗೆ ಉದ್ಯೋಗದಲ್ಲಿ ಬಡ್ತಿ ಸಂಭವವಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.

ಸಿಂಹ: ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡುವಿರಿ. ಹಿರಿಯರಿಂದ ಬಂದ ವಸ್ತು ಕಳೆದುಹೋಗುವ ಸಂಭವಿದೆ. ಅಪರಿಚಿತರನ್ನು ನಂಬಿ ಮೋಸಹೋಗಬೇಡಿ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ದೇವತಾ ಪ್ರಾರ್ಥನೆ ಮಾಡಿ.

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡ ಅಧಿಕವಾಗಿದ್ದರೂ ನಿಮ್ಮ ಸ್ಥಾನ ಮಾನಗಳು ಹೆಚ್ಚಾಗಲಿವೆ. ಸಂಗಾತಿಯ ಆಸೆ ನೆರವೇರಿಸಲು ಮುಂದಾಗುವಿರಿ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಹಿನ್ನಡೆಯಾಗಬಹುದು. ಆದರೆ ತಾಳ್ಮೆ ಕಳೆದುಕೊಳ್ಳಬೇಡಿ.

ತುಲಾ: ಪಾಲು ಬಂಡವಾಳ ಹೂಡಿಕೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸುವಿರಿ. ಧಾರ್ಮಿಕ ಕಾರ್ಯಗಳಿಗಾಗಿ ಹೆಚ್ಚಿನ ಧನ ವ್ಯಯವಾದೀತು. ದಿನದಂತ್ಯಕ್ಕೆ ಅಚ್ಚರಿ ವಾರ್ತೆ ಕಾದಿದೆ.

ವೃಶ್ಚಿಕ: ಸಂತಾನ ಹೀನ ದಂಪತಿಗಳು ದೇವರ ಮೊರೆ ಹೋಗುವರು. ಸಂಗಾತಿಗಾಗಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ವಾಹನ ಸವಾರರಿಗೆ ಅಪಘಾತದ ಭೀತಿಯಿದೆ. ಎಚ್ಚರಿಕೆ ಅಗತ್ಯ. ನಿರುದ್ಯೋಗಿಗಳು ಸ್ವ ಉದ್ಯೋಗ ಮಾಡುವುದು ಒಳಿತು.

ಧನು: ಸರಕಾರಿ ಕೆಲಸಕ್ಕಾಗಿ ಕಾಯುತ್ತಿದ್ದ ನಿಮ್ಮ ಕಾಯುವಿಕೆಗೆ ಇಂದು ತೆರೆ ಬೀಳಲಿದೆ. ಇಷ್ಟ ಮಿತ್ರರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಉದರ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಾಡಬಹುದು. ಸಹನೆ ಪರೀಕ್ಷಿಸುವಂತಹ ಘಟನೆಗಳು ನಡೆಯಲಿವೆ. ತಾಳ್ಮೆಯಿಂದಿರಿ.

ಮಕರ: ದುಡುಕಿನ ಮಾತನಾಡಿ ಸಂಗಾತಿಯ ಮನಸ್ಸಿಗೆ ಬೇಸರವುಂಟು ಮಾಡುವಿರಿ. ನೆರೆಹೊರೆಯವರೊಂದಿಗೆ ಎಚ್ಚರಿಕೆಯಿಂಧ ವ್ಯವಹರಿಸಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮಿಂದಾಗುವ ಕೆಲವು ಅನಿರೀಕ್ಷಿತ ತಪ್ಪುಗಳಿಗೆ ಮೇಲಧಿಕಾರಿಗಳ ಅಸಮಾಧಾನಕ್ಕೆ ಗುರಿಯಾಗುವಿರಿ.

ಕುಂಭ: ಮಹಿಳಾ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಮುನ್ನಡೆಯಾಗಲಿದೆ. ಅಧಿಕ ಓಡಾಟದಿಂದ ದೇಹಾಯಾಸವಾಗುವುದು. ಮಕ್ಕಳ ಭವಿಷ್ಯಕ್ಕಾಗಿ ಕೆಲವೊಂದು ನಿರ್ಧಾರ ಮಾಡುವಿರಿ. ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ದೇವರ ಹರಕೆ ತೀರಿಸಲು ಮುಂದಾಗುವಿರಿ.

ಮೀನ: ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಮಾಡುವ ಯೋಗವಿದೆ. ಮಿತ್ರರ ಸಹಾಯಕ್ಕೆ ಮುಂದಾಗುವಿರಿ. ಕೌಟುಂಬಿಕ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರ ಸಲಹೆಗೆ ಕಿವಿಗೊಡಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವ ಸಾಧ‍್ಯತೆಯಿದೆ.
Leave a Reply

Your email address will not be published. Required fields are marked *