BREAKING NEWS
Search

ಶನಿವಾರದ ರಾಶಿ ಭವಿಷ್ಯ.

787

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ಕಾರ್ತಿಕ ಮಾಸ,
ಕೃಷ್ಣಪಕ್ಷ,ದ್ವಾದಶಿ/ತ್ರಯೋದಶಿ,
ಶನಿವಾರ,ವಿಶಾಖ ನಕ್ಷತ್ರ,
ರಾಹುಕಾಲ: 09 :25ರಿಂದ 10:51
ಗುಳಿಕಕಾಲ: 06:34 ರಿಂದ 07:59
ಯಮಗಂಡಕಾಲ: 01:42 ರಿಂದ 03:08

ಮೇಷ:ಈ ದಿನ ಶುಭ ಫಲಗಳು ನಿಮ್ಮದಾಗುವುದು,ಕುಟುಂಬದಿಂದ ಸಹಕಾರ, ಪಿತ್ರಾರ್ಜಿತ ಸ್ವತ್ತು ಒಲಿಯುವುದು, ತಂದೆಯೊಡನೆ ಉತ್ತಮ ಬಾಂಧವ್ಯ, ದಾಯಾದಿಗಳಿಂದ ನೋವು, ಪುಣ್ಯಕ್ಷೇತ್ರಗಳ ದರ್ಶನ, ಅಧಿಕ ಖರ್ಚು ಇರುವುದರಿಂದ ಎಚ್ಚರ,ಉದ್ಯೋಗ ದಲ್ಲಿ ಪ್ರಶಂಸೆ,ಆರೋಗ್ಯ ಮಧ್ಯಮ.

ವೃಷಭ:ಗೊಂದಲಗಳು ಕಾಡುವುದು, ಬಂಧು-ಬಾಂಧವರು ಶತ್ರುಗಳಾಗುವರು, ಪ್ರಯಾಣದಲ್ಲಿ ಸಂಕಷ್ಟಗಳು, ಸಹೋದರ ಅಥವಾ ಸಹೋದರಿಯರೊಂದಿಗೆ ಶತ್ರುತ್ವ, ಆಕಸ್ಮಿಕ ಅವಘಡಗಳು ಮತ್ತು ಅಪಘಾತಗಳು, ಗೌರವಕ್ಕೆ ಧಕ್ಕೆ,ಆರ್ಥಿಕ ತೊಂದರೆ.

ಮಿಥುನ: ಈ ದಿನ ಮಿಶ್ರ ಫಲ,ಮಕ್ಕಳಿಂದ ಧನಸಹಾಯ, ಸಮಸ್ಯೆಗಳನ್ನು ತಂದುಕೊಳ್ಳುವುದು, ರೋಗಭಾದೆಗಳಿಂದ ಧನ ನಷ್ಟ, ಸಂಗಾತಿಯಿಂದ ಅನುಕೂಲ, ಉದ್ಯೋಗದಲ್ಲಿ ಆರ್ಥಿಕ ಪ್ರಗತಿ ಏರಿಕೆ.

ಕಟಕ: ಆಸೆಗಳು ಈಡೇರಲಿಲ್ಲ ಎನ್ನುವ ನಿರಾಸೆ, ಹಾರ್ಮೋನ್ ವ್ಯತ್ಯಾಸದಿಂದ ಅನಾರೋಗ್ಯ, ಪಿತ್ರಾರ್ಜಿತ ಸ್ವತ್ತು ಒಲಿದು ಬರುವುದು, ಧರ್ಮ ಕಾರ್ಯಗಳಿಗೆ ಮನಸ್ಸು.

ಸಿಂಹ: ಪ್ರಯಾಣದಲ್ಲಿ ತೊಂದರೆ ಮತ್ತು ನಷ್ಟ, ಮಹಿಳೆಯರೊಂದಿಗೆ ಕಿರಿಕಿರಿ, ಗೃಹ ಮತ್ತು ಸ್ಥಳ ಬದಲಾವಣೆಗೆ ಮನಸ್ಸು, ಅನಿರೀಕ್ಷಿತ ಸೋಲು, ನಷ್ಟ ನಿರಾಸೆಗಳು, ಆತಂಕ ಸೃಷ್ಟಿ, ನಿದ್ರಾಭಂಗ.

ಕನ್ಯಾ:ಉದ್ಯೋಗದಲ್ಲಿ ಒತ್ತಡ,ಸಹೋದರಿಯಿಂದ ಧನಲಾಭ, ಸಂಗಾತಿಯಿಂದ ನೋವು, ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ಅವಕಾಶಗಳಿಗೆ ಆತ್ಮೀಯರಿಂದಲೇ ತೊಂದರೆ,ಆರೋಗ್ಯ ಸರಿ ಇದ್ದರೂ ಎದೆ ಉರಿ,ಮುಂತಾದ ಸಮಸ್ಯೆ ಕಾಣಲಿದೆ.

ತುಲಾ: ಆರೋಗ್ಯ ಸಮಸ್ಯೆಗಳು ಕಾಡುವವು, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಕೆಲಸ ಕಾರ್ಯಗಳಲ್ಲಿ ಎಳೆದಾಟ, ಉದ್ಯೋಗ ನಿಮಿತ್ತ ಪ್ರಯಾಣ, ಧನ ನಷ್ಟ, ಸಾಲಭಾದೆಗಳ ಚಿಂತೆ.

ವೃಶ್ಚಿಕ:- ವ್ಯಾಪಾರಿಗಳಿಗೆ ಲಾಭ, ಅಧಿಕ ಖರ್ಚು, ಮಕ್ಕಳಿಂದ ನಷ್ಟ, ಮಕ್ಕಳ ಭವಿಷ್ಯದ ಚಿಂತೆ, ನಿದ್ರಾಭಂಗ, ಅನಾರೋಗ್ಯ, ತಂದೆಯಿಂದ ನಷ್ಟ ಮತ್ತು ಕಿರಿಕಿರಿ.

ಧನಸ್ಸು: ಈ ದಿನ ಮಿಶ್ರ ಫಲ,ಸ್ವಂತ ವ್ಯಾಪಾರದಲ್ಲಿ ಅಧಿಕ ಲಾಭ, ಬಡ್ತಿ ಗೌರವ ಪ್ರಶಂಸೆ, ಮಕ್ಕಳಿಂದ ಲಾಭ, ಭೂಮಿ ವಾಹನ ಆಸ್ತಿಗಳಿಂದ ಅನುಕೂಲ, ತಾಯಿಯಿಂದ ಲಾಭ.

ಮಕರ:ಕುಟುಂಬದಿಂದ ತೊಂದರೆ,ಆರ್ಥಿಕ ನಷ್ಟ, ವೈವಾಹಿಕ ಜೀವನದಲ್ಲಿ ಸಮಸ್ಯೆ, ದೂರ ಪ್ರದೇಶದಲ್ಲಿ ಉದ್ಯೋಗ ಲಭಿಸುವುದು,ಆರೋಗ್ಯ ಮಧ್ಯಮ.

ಕುಂಭ:ಕೆಲಸ ಕಾರ್ಯಸ್ಥಗಿತ, ಪ್ರಯಾಣ ರದ್ದು, ಆರೋಗ್ಯದಲ್ಲಿ ಏರುಪೇರು, ತಂದೆಯಿಂದ ಲಾಭ, ಧಾರ್ಮಿಕ ವ್ಯಕ್ತಿಗಳಿಂದ ಅನುಕೂಲ, ಸಹೋದರರಿಂದ ಧನಾಗಮನ,ಆರೋಗ್ಯ ವೃದ್ಧಿ,ಮಹಿಳೆಯರಿಗೆ ಮಿಶ್ರ ಫಲ.

ಮೀನ:ಕೆಲಸಕಾರ್ಯ ಕುಂಟುತ್ತಾ ತೆರಳುತ್ತದೆ,ಆಕಸ್ಮಿಕವಾಗಿ ಉದ್ಯೋಗ ದೊರಕುವುದು, ಉದ್ತೋಗದಲ್ಲಿ ಪ್ರಗತಿ,ಆರೋಗ್ಯ ಸುಧಾರಣೆ,ಅಲ್ಪ ಆಯಾಸ,ಕುಟುಂಬ ಸೌಖ್ಯ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!