ಇಂದಿನ ದಿನ ಭವಿಷ್ಯ

363

ಮೇಷ: ಆರ್ಥಿಕವಾಗಿ ಧನಾಗಮನದಿಂದ ಮನಸ್ಸಿಗೆ ಖುಷಿಯಾಗುವುದು. ಸಾಂಸಾರಿಕವಾಗಿಯೂ ಸಮಾಧಾನಕರ ವಾತಾವರಣವಿರುವುದು. ಕಿರು ಸಂಚಾರ ಮಾಡಬೇಕಾಗಿ ಬರುತ್ತದೆ. ಆದರೆ ಆರೋಗ್ಯದ ಬಗ್ಗೆ ಚಿಂತೆಯಾಗುವುದು.

ವೃಷಭ: ಅನಗತ್ಯ ಅಪವಾದಗಳಿಗೆ ಗುರಿಯಾಗದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ನಯವಂಚಕರ ಬೆಣ್ಣೆಯ ಮಾತುಗಳಿಗೆ ಕರಗದಿರಿ. ಸಂಗಾತಿಯ ಸಹಕಾರ ಸಿಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ.

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗೆ ಕಾಲ ಕೂಡಿಬಂದಿದೆ. ವಿದ್ಯಾರ್ಥಿಗಳಿಗೆ ಕಠಿಣ ಪ್ರಯತ್ನ ಮಾಡಿದರೇ ಯಶಸ್ಸು. ವೃತ್ತಿರಂಗದಲ್ಲಿ ಮುನ್ನಡೆಯಿದ್ದರೂ ಆರ್ಥಿಕ ಸ್ಥಿತಿ ಆತಂಕಕ್ಕೆ ಕಾರಣವಾಗಲಿದೆ.

ಕರ್ಕಟಕ: ಆತುರದ ನಿರ್ಧಾರ ಕೈಗೊಳ್ಳಬೇಡಿ. ನಿರುದ್ಯೋಗಿಗಲಿಗೆ ನಾನಾ ಅವಕಾಶಗಳು ಹುಡುಕಿಕೊಂಡು ಬರಲಿವೆ. ಬಳಸಿಕೊಳ್ಳುವುದರಲ್ಲಿ ಜಾಣತನ ತೋರಬೇಕು ಅಷ್ಟೇ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಸಿಂಹ: ವ್ಯಾಪಾರ, ವಾಣಿಜ್ಯ ಕ್ಷೇತ್ರದಲ್ಲಿರುವವರಿಗೆ ಮುನ್ನಡೆ, ಲಾಭ ಗಳಿಸಲು ಅವಕಾಶಗಳಿವೆ. ಕೃಷಿಕರಿಗೆ ಕೊಂಚ ಹಿನ್ನಡೆಯಾಗಬಹುದು. ಸಾಂಸಾರಿಕವಾಗಿ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು.

ಕನ್ಯಾ: ಅಗತ್ಯದ ಕೆಲಸಗಳಿಗೆ ಧನವಿನಿಯೋಗ ಮಾಡಬೇಕಾಗುತ್ತದೆ. ಸಂಗಾತಿಯಿಂದ ಸಹಕಾರ ಸಿಗಲಿದೆ. ಅನಿರೀಕ್ಷಿತವಾಗಿ ಸಿಗುವ ಮಿತ್ರರೊಂದಿಗೆ ಪ್ರವಾಸ ಮಾಡುವಿರಿ. ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ.

ತುಲಾ: ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡ ಹೆಚ್ಚುವುದು. ಆರೋಗ್ಯ ಹದಗೆಡುವ ಸಾಧ್ಯತೆಯಿದೆ. ಮುನ್ನೆಚ್ಚರಿಕೆ ಅಗತ್ಯ. ಆರ್ಥಿಕವಾಗಿ ಧನಾಗಮನಕ್ಕೆ ಕೊರತೆಯಿರದು. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬಾರದಂತೆ ಎಚ್ಚರಿಕೆ ವಹಿಸಿ.

ವೃಶ್ಚಿಕ: ಯಾವುದೇ ಕೆಲಸ ಮಾಡಲು ಹೊರಟರೂ ಹಿನ್ನಡೆಯಾಗುವುದರಿಂದ ಮನಸ್ಸಿಗೆ ಬೇಸರವಾಗುವುದು. ಕುಲದೇವರ ಪ್ರಾರ್ಥನೆ ಮಾಡಿ ಅನುಗ್ರಹ ಪಡೆದುಕೊಳ್ಳಿ. ದೂರ ಸಂಚಾರದಲ್ಲಿ ಎಚ್ಚರಿಕೆ ವಹಿಸಿ.

ಧನು: ಕೌಟುಂಬಿಕ ವಿಚಾರದಲ್ಲಿ ನೆಮ್ಮದಿಯೇ ಇಲ್ಲದಂತಾದೀತು. ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗುವುದು. ಆದರೆ ಮಿತ್ರರ ಅಸಹಕಾರ ಬೇಸರಕ್ಕೆ ಕಾರಣವಾಗುವುದು.

ಮಕರ: ಶೀತ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಅವಿವಾಹಿತರ ವಿವಾಹ ಪ್ರಯತ್ನಕ್ಕೆ ಜಯ ಸಿಗಲಿದೆ. ಅನಿರೀಕ್ಷಿತವಾಗಿ ಶುಭ ಸುದ್ದಿ ಆಲಿಸುವಿರಿ.

ಕುಂಭ: ಸಾಂಸಾರಿಕವಾಗಿ ಹೊಂದಾಣಿಕೆಯಿರಲಿ. ಹಳೆಯ ಸಂಬಂಧಗಳಿಗೆ ಮರುಜೀವ ಬರಲಿದೆ. ಕೌಟುಂಬಿಕ ಜವಾಬ್ಧಾರಿಗಳು ಹೆಚ್ಚುವುದು. ಉದ್ಯೋಗ ರಂಗದಲ್ಲಿ ಉನ್ನತ ಸ್ಥಾನಮಾನ ಲಭ್ಯವಾಗಲಿದೆ.

ಮೀನ: ಕಾರ್ಯಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಆದರೆ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಮಾಡಿಕೊಡದಿರಿ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ.
Leave a Reply

Your email address will not be published. Required fields are marked *

error: Content is protected !!