ಇಂದಿನ ದಿನ ಭವಿಷ್ಯ

320

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ,
ಹಿಮಂತ ಋತು, ಮಾರ್ಗಶಿರಮಾಸ,
ಶುಕ್ಲಪಕ್ಷ,ಭರಣಿ ನಕ್ಷತ್ರ/ಕೃತಿಕ ನಕ್ಷತ್ರ,
ರಾಹುಕಾಲ : 09:32 ರಿಂದ 10:58
ಗುಳಿಕಕಾಲ : 06:41 ರಿಂದ 08:06
ಯಮಗಂಡಕಾಲ : 01:49 ರಿಂದ 3.15

ಮೇಷರಾಶಿ
ಮಾಡುವ ಕೆಲಸ ಕಾರ್ಯಗಳಲ್ಲಿ ಅನುಕೂಲ,ಕಾರ್ಯಗಳಿಗೆ ಹಣವ್ಯಯ,ಕುಟುಂಬ ಸಂತೃಪ್ತಿ , ವೃತ್ತಿರಂಗದಲ್ಲಿ ತಟಸ್ಥ ಧೋರಣೆ ಫ‌ಲಕಾರಿ, ದೇವರ ದರ್ಶನ, ಸ್ಥಿರಾಸ್ತಿ ಮತ್ತು ವಾಹನ ಖರೀದಿ, ಆರ್ಥಿಕ ಸಂಕಷ್ಟಗಳು, ಬಗೆಹರಿಯುವುದು,ಆರೋಗ್ಯ ಉತ್ತಮ.

ವೃಷಭರಾಶಿ
ಈ ದಿನ ಮಿಶ್ರ ಫಲ,ಸಾಂಸಾರಿಕವಾಗಿ ಪತ್ನಿಯ ಮಾತು ಕೇಳುವುದರಿಂದ ಅನುಕೂಲ, ಹಂತಹಂತವಾಗಿ ಶತ್ರು ಭಾಧೆಯು ಕಡಿಮೆಯಾಗಲಿದೆ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕಿರಿಕಿರಿ, ಸಾಲದ ಸುಳಿಗೆ ಸಿಲುಕುವಿರಿ, ರೋಗ ಬಾಧೆ, ಆಕಸ್ಮಿಕ ಘಟನೆಗಳಿಂದ ಮಾನಸಿಕ ನೆಮ್ಮದಿ ಭಂಗ.

ಮಿಥುನರಾಶಿ
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ವೃತ್ತಿರಂಗದಲ್ಲಿ ಹಿತಶತ್ರುಗಳ ಕಿರುಕುಳವು ಕಂಡು ಬಂದೀತು, ಕಿರು ಪ್ರಯಾಣ, ಅಧಿಕ ಧನವ್ಯಯ, ರಾಜಕೀಯ ವ್ಯಕ್ತಿಯಿಂದ ಆರ್ಥಿಕ ನಷ್ಟ, ಅನಾರೋಗ್ಯ ಸಮಸ್ಯೆ.

ಕಟಕರಾಶಿ
ಅಧಿಕ ಲಾಭ, ಸಾಲಗಾರರಿಂದ ಮುಕ್ತಿ, ವೃತ್ತಿರಂಗದಲ್ಲಿ ಅಭಿವೃದ್ಧಿದಾಯಕ ಬೆಳವಣಿಗೆ, ಉದ್ಯೋಗದಲ್ಲಿ ಬದಲಾವಣೆ, ವೈವಾಹಿಕ ಭಾಗ್ಯವು ಹೊಂದಾಣಿಕೆ, ಅಹಂಭಾವದ ಮಾತಿನಿಂದ ಮಿತ್ರರಿಗೆ ನೋವು, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.

ಸಿಂಹರಾಶಿ
ಉದ್ಯೋಗ ಲಾಭವಾಗುವುದು, ವೃತ್ತಿರಂಗದಲ್ಲಿ ಅವಲೋಕಿಸಿ ಹೆಜ್ಜೆಯನ್ನಿಡಿ,. ನಿರುದ್ಯೋಗಿಳಿಗೆ ಉದ್ಯೋಗ ಲಾಭವು ಬಾಳಿಗೆ ಭದ್ರತೆಯನ್ನು ನೀಡಲಿದೆ. ಉದ್ವೇಗವನ್ನು ಕಡಿಮೆ ಮಾಡಿರಿ. ಅಧಿಕ ಖರ್ಚು, ಉದ್ಯೋಗ ನಿಮಿತ್ತ ಪ್ರಯಾಣ.

ಕನ್ಯಾರಾಶಿ
ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಕಾರ್ಯರಂಗದಲ್ಲಿ ಕೆಲಸಕಾರ್ಯಗಳನ್ನು ನಿಭಾಯಿಸಿಕೊಂಡು ಹೋಗಬಹುದು. ಕೋರ್ಟು ಕಚೇರಿ ವ್ಯವಹಾರಗಳು ಅಸಾಧ್ಯವಾದುದನ್ನು ಸಾಧ್ಯವಾಗಿಸಲಿವೆ, ಹೂಡಿಕೆಗಳು ತಕ್ಕ ಮಟ್ಟಿಗೆ ನಿರಾಶೆಗೊಳಿಸಲಿವೆ, ಸ್ವಂತ ವ್ಯಾಪಾರದಲ್ಲಿ ನಷ್ಟ, ಆತಂಕ ಮತ್ತು ನಿದ್ರಾಭಂಗ, ತಂದೆಯ ಮಿತ್ರರಿಂದ ಅನುಕೂಲ.

ತುಲಾರಾಶಿ
ಆರ್ಥಿಕವಾಗಿ ಸಾಲವು ಕಿರಿಕಿರಿ, ಉದಾಸೀನತೆ ಆಗಾಗ ಹಿನ್ನಡೆಗೆ ಕಾರಣವಾಗಿ ನಿರೀಕ್ಷಿತ ಫ‌ಲ ಸಿಗಲು ಕಷ್ಟವಾಗುತ್ತದೆ, ವಿದ್ಯಾರ್ಥಿಗಳಿಗೆ ಉದಾಸೀನತೆಯು ಕಾಡಲಿದೆ, ಆಕಸ್ಮಿಕವಾಗಿ ಉದ್ಯೋಗದಲ್ಲಿ ತೊಂದರೆ, ಉದ್ಯೋಗ ಬದಲಾವಣೆ, ಆತ್ಮಗೌರವಕ್ಕೆ ಚ್ಯುತಿ, ಅದೃಷ್ಟ ಒಲಿದು ಬರುವುದು.

ವೃಶ್ಚಿಕರಾಶಿ
ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ, ಮಿತ್ರರೊಂದಿಗೆ ಪ್ರಯಾಣ, ವ್ಯಾಪಾರ ಕ್ಷೇತ್ರದಲ್ಲಿನ ಅಡೆತಡೆ ನಿವಾರಣೆ, ವಿದ್ಯಾರ್ಥಿ ಗಳಿಗೆ ಪ್ರಯತ್ನಬಲಕ್ಕೆ ತಕ್ಕಂತೆ ಉತ್ತಮ ಫ‌ಲಿತಾಂಶವು ದೊರಕಲಿದೆ, ಜೀವನದಲ್ಲಿ ಉಲ್ಲಾಸವಿದೆ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮನಸ್ಸಿಗೆ ನೆಮ್ಮದಿ.

ಧನಸ್ಸುರಾಶಿ
ಕಾರ್ಯಕ್ಷೇತ್ರದಲ್ಲಿ ಪ್ರಗತಿಯು ತೋರಿಬರಲಿದೆ, ಅನಿರೀಕ್ಷಿತವಾಗಿ ರಾಜಕೀಯ ವ್ಯಕ್ತಿಗಳ ಭೇಟಿ, ಸಾಲಗಾರರಿಂದ ಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರಗಳಿಗೆ ಪ್ರಯಾಣ, ವೃತ್ತಿರಂಗದಲ್ಲಿ ನಿಮ್ಮ ಪ್ರಗತಿ ಹಿತಶತ್ರುಗಳು ಹುಬ್ಬೇರುವಂತಾದೀತು, ಅನಗತ್ಯ ವಿಚಾರಗಳು ನಿಮ್ಮನ್ನು ಚಿಂತಾಕ್ರಾಂತರನ್ನಾಗಿಸಲಿದೆ, ಉದ್ವೇಗ ಸಹನೆಯ ಅಗತ್ಯವಿದೆ.

ಮಕರರಾಶಿ
ಆತ್ಮ ವಿಮರ್ಶೆಗೆ ಸಕಾಲವಿದ್ದು. ಚಿಂತಿತ ಕಾರ್ಯಗಳು ಸಫ‌ಲವಾಗುವ ಕಾಲವು ಹತ್ತಿರದಿಂದಿದೆ. ಕುಟುಂಬ ಸುಖದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ, ವಿದೇಶ ಪ್ರಯಾಣದ ಯೋಗವು ಕೂಡಿ ಬರಲಿದೆ, ಮಕ್ಕಳಿಂದ ಆಕಸ್ಮಿಕ ಅವಘಡಗಳು, ಪೆÇಲೀಸ್ ಸ್ಟೇಷನ್, ಕೋರ್ಟ್‍ಗೆ ಅಲೆದಾಟ, ರಾಜಕೀಯ ವ್ಯಕ್ತಿಗಳ ಭೇಟಿ, ಅತಿಯಾದ ಭಾವನೆ ಮತ್ತು ದುರಾಲೋಚನೆಗಳು.

ಕುಂಭರಾಶಿ
ವೃತ್ತಿರಂಗದಲ್ಲಿ ಆಗಾಗ ಏರುಪೇರುಗಳು ತೋರಿ ಬಂದರೂ ನಿಮ್ಮ ಮನಸ್ಸಿನಾಳದ ಸುಪ್ತ ಬಯಕೆಗಳು ಸದ್ಯದಲ್ಲೇ ಗೋಚರಕ್ಕೆ ಬರವಿವೆ, ಆಗಾಗ ಸಂಚಾರವು ದೇಹಾರೋಗ್ಯದ ಮೇಲೆ ಪರಿಣಾಮ ಬೀರಲಿದೆ, ಮೌನ ತಾಳಿರಿ, ಆಸ್ತಿ, ವಾಹನ ಮಾರಾಟ ಮಾಡುವ ಆಲೋಚನೆ, ಪ್ರಯಾಣದಲ್ಲಿ ವಸ್ತುಗಳ ಕಳವು, ಬಂಧುಗಳಿಂದ ಶತ್ರುಗಳು ಅಧಿಕ.

ಮೀನರಾಶಿ
ವಿದ್ಯಾಭ್ಯಾಸ ನಿಮಿತ್ತ ಪ್ರಯಾಣ, ಕುಟುಂಬ ವರ್ಗದಲ್ಲಿ ಸಹಮತವಿರದ ಕೆಲಸ ಕಾರ್ಯಗಳು ವಿಳಂಬವಾದಾವು, ವೈಯಕ್ತಿಕವಾಗಿ ಆರೋಗ್ಯ ಚಿಂತನೆಯಲ್ಲಿ ಪ್ರತಿಕೂಲ ಪರಿಣಾಮವಾದೀತು, ಹೆಚ್ಚಿನ ಜಾಗ್ರತೆ ವಹಿಸುವ ಅಗತ್ಯವಿರುತ್ತದೆ, ಆರೋಗ್ಯದ ಮೇಲೆ ದುಷ್ಪರಿಣಾಮ, ಪ್ರಯತ್ನಿಸಿದ ಕೆಲಸ ಕಾರ್ಯಗಳಲ್ಲಿ ಜಯ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ