add

23/10/2020 ಇಂದಿನ ದಿನ ಭವಿಷ್ಯ

540

ಮೇಷ: ಶೀತ,ಉಸಿರಾಟದ ಸಮಸ್ಯೆ ಆಗಾಗ ಕಂಡುಬರುತ್ತದೆ.ಆರ್ಥಿಕ ಸಮಸ್ಯೆ ಯಿಂದ ಚೇತರಿಕೆ,ಹಣ ಭಲ ಇರುವುದು.ಹೊಸ ವ್ಯವಹಾರಕ್ಕೆ ಶುಭ ಫಲಗಳಿರುವುದು.ಮಹಿಳೆಯರಿಗೆ ಶುಭಫಲ ಹೆಚ್ಚು.ಉದ್ಯೋಗ ಸ್ಥಿರ.ಈ ದಿನ ಶುಭ ಫಲ.

ವೃಷಭ: ಕುಟುಂಬದಲ್ಲಿ ನೆಮ್ಮದಿ ಇದ್ದರೂ ಆಗಾಗ ಮನಸ್ತಾಪ.ಮಕ್ಕಳಿಗೆ ಶುಭ,ಆರೋಗ್ಯ ಮಧ್ಯಮ ಫಲ, ಗೃಹ ಮತ್ತು ಕಚೇರಿಗಳಲ್ಲಿ ಮಾನಸಿಕ ಒತ್ತಡ ಹೆಚ್ಚು.ಆರೋಗ್ಯ ಮಧ್ಯಮ,ಇಂದು ಮಿಶ್ರ ಫಲ ಇರುವುದು.

ಮಿಥುನ:ಮೈಮನಸ್ಸು ಜಗಳ ಆಗಾಗ ಕಾಡುವುದು,ಆರ್ಥಿಕವಾಗಿ ಮಧ್ಯಮ ಫಲ,ದಿನದ ಕೊನೆಯಲ್ಲಿ ಮನಸ್ಸಿಗೆ ಶಾಂತಿ,ಅಲೆದಾಟ,ಪ್ರಯಾಣ ಇರುವುದು,ದೇಹಾಯಾಸ,ಸೋಮಾರಿತನ ಇರುವುದು.ಮನೆಯಲ್ಲಿ ನಿಂದನೆ ಎದುರಿಸಬೇಕಾಗುವುದು.ಸ್ನೇಹಿತರ ಸಹಕಾರ,ದಿನದ ಮಧ್ಯಭಾಗ ಶುಭವಿದೆ.

ಕಟಕ:ಹಣದ ಸಮಸ್ಯೆಯಿಂದ ಚೇತರಿಕೆ,ವ್ಯಾಪಾರ ವೃದ್ಧಿ,ಆರೋಗ್ಯ ಮಧ್ಯಮ,ಮನಸ್ಸಿಗೆ ಕ್ಲೇಷ,ಆಯಾಸ.ವ್ಯಾಪಾರಿಗಳಿಗೆ ಉತ್ತಮ ದಿ‌ನ ಅನಾವಶ್ಯಕ ವಿಚಾರಗಳ ಬಗ್ಗೆ ಹೆಚ್ಚು ಗಮನ ನೀಡಬೇಡಿ.

ಸಿಂಹ -ಸಾಲ ಮಾಡುವ ಸ್ಥಿತಿ ಉದ್ಭವಿಸಲಿದೆ,ಹಾಸಿಗೆ ಇದ್ದಷ್ಟೆ ಕಾಲುಚಾಚಬೇಕು ಎಂಬಂತೆ ಹಣವಿದ್ದಷ್ಟೇ ಕರ್ಚು ಮಾಡಿ.ಕುಟುಂಬದಲ್ಲಿ ಅಲ್ಪ ನೆಮ್ಮದಿ ಇದ್ದರೂ ಕಿರಿಕಿರಿ ಮುಂದುವರೆಯಲಿದೆ.ವ್ಯಾಪಾರದಲ್ಲಿ ಮಿಶ್ರ ಫಲವಿದೆ,ಆಯಾಸ,ವಾಯುಬಾದೆ ಕಾಡಲಿದೆ.ಆರೋಗ್ಯ ಮಧ್ಯಮವಿದೆ.ಇಷ್ಟ ದೇವರ ಹಾಗೂ ಗುರುವಿನ ಪ್ರಾರ್ಥನೆ ಬಲ ತರಲಿದೆ.

ಕನ್ಯಾ – ಆರೋಗ್ಯ ಉತ್ತಮ ಆದರೂ ಕಫ,ಆಯಾಸ ಇರುವುದು.ವೃತ್ತಿಯಲ್ಲಿ ನಷ್ಟವಾಗದು,ಅಧಿಕ ಕರ್ಚು. ಲಾಭ ಸಮೃದ್ಧಿ, ವೃತ್ತಿಯಲ್ಲಿ ಅನುಕೂಲ, ಸಮಾಧಾನ ಇರಲಿದೆ.

ತುಲಾ -ವ್ಯಾಪಾರಿಗಳಿಗೆ ನಷ್ಟ, ಉದ್ಯೋಗಿಗಳಿಗೆ ಸಂಬಳದಲ್ಲಿ ನಷ್ಟ, ಹಣಕಾಸಿನಲ್ಲಿ ಎಚ್ಚರಿಕೆ ಇರಲಿ, ಕುಟುಂಬದೊಂದಿಗೆ ಕಲಹ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ,ಆರೋಗ್ಯ ಉತ್ತಮವಿದ್ದು ಕೆಲಸದ ಒತ್ತಡ ತುಸು ಹೆಚ್ಚಾಗಲಿದೆ.

ವೃಶ್ಚಿಕ – ಹೊಸ ವ್ಯವಹಾರಕ್ಕೆ ಕೈ ಹಾಕಬೇಡಿ,ದೇಹಸ್ಥಿತಿ ವ್ಯತ್ಯಾಸವಾಗಲಿದೆ, ಮುಂದೆ ಮಂಗಳಕಾರ್ಯಗಳ ಚಾಲನೆ ಸಿಗಲಿದೆ. ಅನುಕೂಲದ ವಾತಾವರಣ ವಾರದ ಕೊನೆಯಲ್ಲಿ ನಿರ್ಮಾಣವಾಗಲಿದೆ.

ಧನುಸ್ಸು – ದಾಂಪತ್ಯದಲ್ಲಿ ಕಲಹ, ಧರ್ಮಕಾರ್ಯಗಳಿಗೆ ಅಡ್ಡಿ, ವಿವೇಕ ಜಾಗೃತವಾಗಲಿದೆ, ಆರೋಗ್ಯ ಮಧ್ಯಮ ದಕ್ಷಿಣಾಮೂರ್ತಿ ಪ್ರಾರ್ಥನೆ ಮಾಡಿ

ಮಕರ – ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಕೊಂಚ ಅಸಮಧಾನ ಇರಲಿದೆ,ಆರೋಗ್ಯ ದಲ್ಲಿ ವ್ಯತ್ಯಾಸ,ನಿದ್ರೆ ಸುಸ್ತು ಹೆಚ್ಚಿರಲಿದೆ.ಹೊಸ ವ್ಯವಹಾರ ಈ ವರ್ಷ ಮಾಡದಿರಿ.

ಕುಂಭ – ದಾಂಪತ್ಯದಲ್ಲಿ ಏರುಪೇರು, ಮಕ್ಕಳಿಂದ ಅಹಿತಕರ ಮಾತು,ಆರೋಗ್ಯ ಉತ್ತಮ,ಕುಟುಂಬ ಕಲಹ ಆಗಾಗ ತೋರಿಬರಲಿದೆ,ಹೊಸ ವ್ಯವಹಾರದಿಂದ ನಷ್ಟ,ಮಧ್ಯಮ ಫಲ ವಿದೆ.

ಮೀನ – ಕೃಷೀಕರಿಗೆ ತೊಂದರೆ ಬಾದಿಸಲಿದೆ,ವ್ಯಾಪಾರಿಗಳಿಗೆ ನಷ್ಟವಾಗಲಿದೆ,ಆರೋಗ್ಯ ಉತ್ತಮ ಇದ್ದು ಅಧಿಕ ಕರ್ಚು ,ದುಂದುವೆಚ್ಚ ಇರಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ