ಹೊನ್ನಾವರ: ಮೀನುಗಾರಿಕೆಗೆ ತೆರಳುದವರು ಶವವಾಗಿ ಪತ್ತೆ

254

ಕಾರವಾರ:- ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ಶವವಾಗಿ ಪತ್ತೆಯಾಗಿದ್ದಾರೆ.

ಹೊನ್ನಾವರ ತಾಲೂಕಿನ ಇಡಗುಂಜಿ ಸಮೀಪದ ಶರಾವತಿ ನದಿಯಲ್ಲಿ ನಿನ್ನೆ ದಿನ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಾದ ಪರಮೇಶ್ವರ ಲಕ್ಷ್ಮಣ ಅಂಬಿಗ(೪೨) ಹಾಗೂ ಗಣಪತಿ ತಿಮ್ಮ ಅಂಬಿಗ(೨೫) ಶವವಾಗಿ ಪತ್ತೆಯಾದವರಾಗಿದ್ದಾರೆ.

ರಾತ್ರಿಯಾದರು ಮನೆಗೆ ಬರದ ಹಿನ್ನಲೆಯಲ್ಲಿ ಪೊಲೀಸರಿಗೆ ದೂರನ್ನ ನೀಡಿದ್ದರು,ಇಂದು ಬೆಳಿಗ್ಗೆ ನದಿಯಲ್ಲಿ ಹುಡುಕಾಡುವಾಗ ಶವ ಪತ್ತೆಯಾಗಿದೆ.

ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!